ಹುಣಸೂರು ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಆಲಿಕಲ್ಲು ಮಳೆ; ಅಪಾರ ಹಾನಿ
ಕೊಡಗು-ಹುಣಸೂರು ಮಾರ್ಗದಲ್ಲಿ ವಿದ್ಯುತ್ ಸಂಪರ್ಕ ಕಟ್
Team Udayavani, Apr 1, 2022, 8:33 PM IST
ಹುಣಸೂರು: ತಾಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಬಿರುಗಾಳಿ ಮಳೆಗೆ ಬಾಳೆ ಬೆಳೆ ನೆಲಕಚ್ಚಿದೆ, ಹಲವಾರು ವಿದ್ಯುತ್ ಕಂಬಗಳು, ಗಿಡ ಮರಗಳು ಧರೆಗುರುಳಿವೆ, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ, ಶುಕ್ರವಾರ ಆಲಿಕಲ್ಲು,ಬಿರುಗಾಳಿ ಸಹಿತ ಭಾರೀ ಮಳೆಗೆ ಹುಣಸೂರು ಕೊಡಗು ವಿದ್ಯುತ್ ಸಂಪರ್ಕ ಕಟ್ ಆಗಿದೆ.
ಬಿರುಗಾಳಿಗೆ ನೆಲಕಚ್ಚಿದ ಬಾಳೆ ಬೆಳೆ:
ಚಿಕ್ಕಹುಣಸೂರಿನಲ್ಲಿನ ಮರಿಯಮ್ಮರಿಗೆ ಸೇರಿದ 5ಎಕರೆ ಫಲಕ್ಕೆ ಬಂದಿದ್ದ ನೇಂದ್ರ ಬಾಳೆ ತೋಟದ ಎಲ್ಲಾ ಗಿಡಗಳು ಬಾಗಿಹೋಗಿದ್ದು, ಸುಮಾರು 8 ಲಕ್ಷರೂ. ನಷ್ಟು ನಷ್ಟ ಉಂಟಾಗಿದ್ದು, ರೈತ ಮಹಿಳೆ ಕಣ್ಣೀರಿನಲ್ಲಿ ಕೈತೋಳೆಯುವಂತಾಗಿದೆ, ಸರಕಾರ ಮಳೆ ಹಾನಿ ನಷ್ಟಕ್ಕೆ ತಕ್ಕಂತೆ ಪಂಜಾಬ್ ಮಾದರಿಯಲ್ಲಿ ಪರಿಹಾರ ನೀಡುವಂತೆ ಅವರ ಪುತ್ರ ನಗರದ ಬನ್ನಿ ಬೀದಿಯ ರಮೇಶ್‌ಬಾಬು ಒತ್ತಾಯಿಸಿದ್ದಾರೆ.
ಧರೆಗುರುಳಿದ ವಿದ್ಯತ್ ಕಂಬ ಮರಗಳು:
ಮಳೆಯೊಂದಿಗೆ ಬೀಸಿದ ಬಿರುಗಾಳಿಗೆ ತಾಲೂಕಿನ ಗಾವಡಗೆರೆಯಲ್ಲಿ 5, ಕಿರಿಜಾಜಿಯಲ್ಲಿ 4, ದೊಡ್ಡ ಹೆಜ್ಜೂರಿನಲ್ಲಿ 2, ಚಿಲ್ಕುಂದ ಭಾಗದಲ್ಲಿ ಒಂದು ಸೇರಿದಂತೆ 12 ವಿದ್ಯುತ್ ಕಂಬಗಳು, ಕಟ್ಟೆಮಳಲವಾಡಿ ಗ್ರಾಮದೊಳಗೆ ಮರ ಮತ್ತು ವಿದ್ಯುತ್ ಕಂಬ ಉರುಳಿ ಬಿದ್ದು ಆಭಾಗದಲ್ಲಿ ವಿದ್ಯುತ್ ಕಡಿತಗೊಂಡಿದೆ.
ಹುಣಸೂರಿನ ಮೂಕನಹಳ್ಳಿ ಬಳಿಯ ಹಾಲಿನ ಡೇರಿ ಬಳಿಯ 240 ಕಿಲೋವ್ಯಾಟ್ ಮಾರ್ಗದ ವಿದ್ಯುತ್ ಲೈನ್ ಟ್ವಿಸ್ಟ್ ಆಗಿದ್ದು, ಮಡಿಕೇರಿ ಜಿಲ್ಲೆಯಲ್ಲಿ ಭಾಗಶಃ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ಎಇಇ ಸಿದ್ದಪ್ಪ ತಿಳಿಸಿದ್ದಾರೆ.
ಸಂಜೆ ನಗರ ಸೇರಿದಂತೆ ತಾಲೂಕಿನ ಹಲವೆಡೆ ವಿದ್ಯುತ್ ಕಡಿತಗೊಂಡಿತ್ತು. ಸರ್ವೆ.ನಂ.25 ಗ್ರಾಮದಲ್ಲಿ ಹೈಟೆಷನ್ ಲೈನ್ ಮೇಲೆ ಮರ ಬಿದ್ದು ಈ ಭಾಗದ ಗ್ರಾಮಗಳಲ್ಲೂ ಸಂಪರ್ಕ ಕಡಿತಗೊಂಡಿದೆ.
ರಸ್ತೆ ಬಂದ್:
ನಗರಕ್ಕೆ ಸಮೀಪದ ಚಿಕ್ಕಹುಣಸೂರು ಬಳಿ ಬಾರೀ ಗಾತ್ರದ ಅರಳಿ ಹಾಗೂ ಮಾವಿನ ಮರ ಬಿದ್ದು ಟಿವಿಎಸ್ ಮೊಪೈಡ್ ಜಖಂಗೊಅಡಿದೆ. ಉಪ್ಕಾರ್ ಲೇ ಔಟ್ ಬಳಿಯಲ್ಲಿ ಮರ ಬಿದ್ದು, ಸಂಚಾರ ಸ್ಥಗಿತಗೊಂಡಿತ್ತು.
ಕಟ್ಟೆಮಳಲವಾಡಿಯಲ್ಲಿ ಮನೆಯೊಂದರ ಮೇಲೆ ವಿದ್ಯುತ್ ಲೈ ಸಮೇತ ಮರ ಬಿದ್ದು ಮೇಲ್ಚಾವಣಿಗೆ ಹಾನಿಯಾಗಿದೆ. ಗ್ರಾಮ ಸಂಪೂರ್ಣ ಕತ್ತಲೆ ಮಯವಾಗಿದೆ. ಅರಣ್ಯ ಸಿಬ್ಬಂದಿಗಳು ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಮರಗಳ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತೆಂದು ಆರ್.ಎಫ್.ಓ.ನಂದಕುಮಾರ್ ತಿಳಿಸಿದ್ದಾರೆ.
ಇನ್ನು ಚೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಮಾರ್ಗದ ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದಾರೆ. ತಾಲೂಕಿನಾದ್ಯಂತ ಹಾನಿ ಬಗ್ಗೆ ವರದಿಯಾಗುತ್ತಲೇ ಇದೆ.
ಆಲಿಕಲ್ಲು ಮಳೆಗೆ ಮಾವು ನಾಶ:
ತಾಲೂಕಿನಾದ್ಯಂತ ಶುಕ್ರವಾರ ಸಂಜೆ ಆಲಿಕಲ್ಲು ಸಹಿತ ಬಿರುಗಾಳಿ ಮಳೆಗೆ ಮಾವಿನ ಬೆಳೆಗೆ ಸಾಕಷ್ಟು ಹಾನಿಯಾಗಿದ್ದರೆ, ತಂಬಾಕು ಸಸಿಮಡಿ ಮತ್ತಿತರ ಬೆಳೆಗೂ ಹಾನಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ
MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.