ಇಂದಿನಿಂದ ಗುರು ವಿರೂಪಾಕ್ಷೇಶ್ವರ ಜಾತ್ರೆ
6ರಂದು ಧರ್ಮಸಭೆ-ಸಾಮೂಹಿಕ ವಿವಾಹ ಕಾರ್ಯಕ್ರಮ
Team Udayavani, Apr 2, 2022, 10:41 AM IST
ಉಪ್ಪಿನ ಬೆಟಗೇರಿ: ಸ್ಥಳೀಯ ಮೂರು ಸಾವಿರ ವಿರಕ್ತಮಠದ ಶ್ರೀ ಗುರು ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವ ಏ. 2ರಿಂದ 6ರ ವರೆಗೆ ಶ್ರೀ ಕುಮಾರ ವಿರೂಪಾಕ್ಷ ಸ್ವಾಮೀಜಿಯವರ ನೇತೃತ್ವದಲ್ಲಿ ಜರಗುಲಿದೆ.
ಏ. 2ರಂದು ಬೆಳಗ್ಗೆ 9 ಗಂಟೆಗೆ ಷಟಸ್ಥಲ ಧ್ವಜಾರೋಹಣ ಹಾಗೂ ಅಲ್ಲಮಪ್ರಭುಗಳ ಜಯಂತಿ ನಡೆಯಲಿದೆ. ಸಂಜೆ 6:30ಕ್ಕೆ ತೇಜಸ್ವಿನಿ ಹಿರೇಮಠ ಗಂದಿಗವಾಡ ಅವರಿಂದ ನಡೆಯಲಿರುವ ಆಧ್ಯಾತ್ಮಿಕ ಪ್ರವಚನ ಪ್ರಾರಂಭೋತ್ಸವ ಹಾಗೂ ಗೌರವ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಡಾ| ಎಸ್.ಆರ್. ರಾಮನಗೌಡರ ಅವರನ್ನು ಸನ್ಮಾನಿಸಲಾಗುತ್ತದೆ. ವೇ|ಮೂ| ಗುರುಮೂರ್ತಿ ಯರಗಂಬಳಿಮಠ ಉಪನ್ಯಾಸ ನೀಡುವರು. ತೇಜಸ್ವಿನಿ ಅವರು ಏ.5ರವರೆಗೆ ಪ್ರತಿದಿನ ಸಂಜೆ 6:30ರಿಂದ ಪ್ರವಚನ ನೀಡಲಿದ್ದಾರೆ. 5ರಂದು ಬೆಳಗ್ಗೆ 7 ಗಂಟೆಗೆ ದೊಡ್ಡವಾಡ ಹಿರೇಮಠದ ಜಡೇಸಿದ್ದೇಶ್ವರ ಶಿವಾಚಾರ್ಯರಿಂದ ಅಯ್ನಾಚಾರ ಮತ್ತು ಶಿವದೀಕ್ಷೆ ನೆರವೇರಲಿದೆ. ಸಂಜೆ 6:30ಕ್ಕೆ ಪ್ರವಚನ ಮಂಗಲ ಹಾಗೂ ಸತ್ಕಾರ ಸಮಾರಂಭ ಬೈಲಹೊಂಗಲ ಮೂರು ಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ ಹಾಗೂ ಮಮದಾಪುರ ವಿರಕ್ತಮಠದ ಮುರುಘೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜರುಗಲಿದೆ.
ಚಿಕಲಪರ್ವಿ ರುದ್ರಮುನೀಶ್ವರ ಮಠದ ಸದಾಶಿವ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಸುರೇಶ ಮಸೂತಿ, ಸೋಮಶೇಖರ ಜುಟ್ಟಿಲ, ಹೊಳೇಶ್ವರ ಹೊಸಮನಿ, ಪಾಂಡುರಂಗ ಪೋಳ, ವಿಕಾಸ ತಿಗಡಿ, ರೋಹಿತ ಪದಕಿ, ಚಂದ್ರಶೇಖರ ದೊಡಮನಿ, ಕಿರಣ ಮಸೂತಿ, ಮಲ್ಲಿಕಜಾನ ನದಾಫ, ಪವನ ಮಡಿವಾಳರ, ಪುನೀತ ಮಸೂತಿ, ಮೋಹನ್ ಅಷ್ಟಗಿ, ಸುಮನ ತಳವಾರ, ಪಾರ್ವತಿ ಹಟ್ಟಿ, ಎ.ಎಚ್.ನದಾಫ, ರಾಘವೇಂದ್ರ ಸಾಬಣ್ಣವರ, ಬಸವಂತಯ್ಯದುಬ್ಬನಮರಡಿ, ಆತ್ಮಾನಂದ ದೊಡವಾಡ, ಶಾರುಖ್ ತಾರೀಹಾಳ, ಎಂ.ಬಿ. ತೋರಣಗಟ್ಟಿ, ಉದಯ ಹೂಲಿ, ಬಸವರಾಜ ಬೆಂಡಿಗೇರಿಮಠ ಹಾಗೂ ಹಳಿಹಾಳ, ಉಪ್ಪಿನ ಬೆಟಗೇರಿ ಅಕ್ಕನ ಬಳಗದವರಿಗೆ ಸತ್ಕಾರ ನಡೆಯಲಿದೆ.
6ರಂದು ಬೆಳಗ್ಗೆ 6 ಗಂಟೆಗೆ ಶ್ರೀ ಗುರು ವಿರೂಪಾಕ್ಷೇಶ್ವರ ಕರ್ತೃ ಗದ್ದುಗೆಗೆ ವೇ|ಮೂ| ಈರಯ್ಯ ಸಾಲಿಮಠ ಹಾಗೂ ಅರ್ಚಕ ಈರಯ್ಯ ಗೌರಿಮಠ ಅವರಿಂದ ಮಹಾರುದ್ರಾಭಿಷೇಕ ಮತ್ತು ಸಹಸ್ರ ಬಿಲ್ವಾರ್ಚನೆ ನಡೆಯಲಿದೆ. ಮಾಜಿ ಶಾಸಕ ಎ.ಬಿ. ದೇಸಾಯಿ ಅವರಿಂದ ಪ್ರಸಾದ ಸೇವೆ ನಡೆಯಲಿದೆ.
10 ಗಂಟೆಗೆ ಧರ್ಮಸಭೆ ಹಾಗೂ ಸಾಮೂಹಿಕ ವಿವಾಹಗಳು ನೆರವೇರಲಿವೆ. ಗರಗದ ಮಡಿವಾಳೇಶ್ವರ ಸಂಸ್ಥಾನ ಮಠದ ಚನ್ನಬಸವ ಸ್ವಾಮೀಜಿ, ಧಾರವಾಡ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಶಾಸಕ ಅಮೃತ ದೇಸಾಯಿ ಉದ್ಘಾಟಿಸುವರು.
ಶಂಕರ ರಾಜೇಂದ್ರ ಸ್ವಾಮೀಜಿ ಅಮೀನಗಡ, ಹುಚ್ಚೇಶ್ವರ ಸ್ವಾಮೀಜಿ ಕಮತಗಿ, ಮುರುಘೇಂದ್ರ ಸ್ವಾಮೀಜಿ ಮಮದಾಪುರ, ಅಭಿನವ ಶಾಂತಲಿಂಗ ಶಿವಾಚಾರ್ಯರು ಅಮ್ಮಿನಬಾವಿ, ಸಂಗಮೇಶ ಅಜ್ಜನವರು ನರೇಂದ್ರ, ಶಿವಬಸವ ದೇವರು ಉಪ್ಪಿನ ಬೆಟಗೇರಿ, ಮಹಾರುದ್ರ ಸ್ವಾಮೀಜಿ ಆಯಟ್ಟಿ, ಅರಿಫುಲ್ಲಾಹಕ್ ಶಾ ಖಾದ್ರಿ ಕಲಂದರ ಹನುಮನಕೊಪ್ಪ, ಮಹಾದೇವಪ್ಪ ಅಷ್ಟಗಿ ನೇತೃತ್ವ ವಹಿಸುವರು. ಮಾಜಿ ಶಾಸಕಿ ಸೀಮಾ ಮಸೂತಿ, ಶಿವಲೀಲಾ ಕುಲಕರ್ಣಿ, ಶಶಿಮೌಳಿ ಕುಲಕರ್ಣಿ, ತವನಪ್ಪ ಅಷ್ಟಗಿ, ಕಲ್ಲಪ್ಪ ಪುಡಕಲಕಟ್ಟಿ, ಶಾಂತವ್ವ ಸಂಕಣ್ಣವರ, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಆಯಟ್ಟಿ, ಚನಬಸಪ್ಪ ಮಸೂತಿ, ವೀರಣ್ಣ ಪರಾಂಡೆ, ರಾಮಲಿಂಗಪ್ಪ ನವಲಗುಂದ, ಪರಮೇಶ್ವರ ದೊಡವಾಡ, ರವಿ ಯಲಿಗಾರ, ಸುರೇಶಬಾಬು ತಳವಾರ, ಬಾಬಾಮೋಹಿದ್ದೀನ್ ಚೌಧರಿ ಅತಿಥಿಗಳಾಗಿ ಪಾಲ್ಗೊಳ್ಳುವರು.
ಮಧ್ಯಾಹ್ನ 3:30ಕ್ಕೆ “ಜಂಗಮೋತ್ಸವ’ ನಡೆಯಲಿದ್ದು, ಚೀಕಲಪರ್ವಿ ರುದ್ರಮುನೀಶ್ವರ ಮಠದ ಸದಾಶಿವ ಸ್ವಾಮೀಜಿ ಅಡ್ಡ ಪಲ್ಲಕ್ಕಿ ಕಾರ್ಯಕ್ರಮ ಜರುಗಲಿದೆ. ಸಾಯಂಕಾಲ 5:30ಕ್ಕೆ ಶ್ರೀ ಗುರು ವಿರೂಪಾಕ್ಷೇಶ್ವರ ರಥೋತ್ಸವ ನಡೆಯಲಿದೆ. ರಾತ್ರಿ 10:30ಕ್ಕೆ “ಹುಲಿ ಹಾಲುಂಡ ಹಮ್ಮೀರ’ ನಾಟಕ ಪ್ರದರ್ಶನವಿದೆ. 7,8,9ರಂದು ಸಾಯಂಕಾಲ 4ಗಂಟೆಗೆ ಜೈ ಭೀಮ ಪೈಲವಾನ ಸಂಘದವರಿಂದ ಬಯಲು ಕುಸ್ತಿ ಪಂದ್ಯಾಟ ನಡೆಯಲಿದೆ ಎಂದು ಜಾತ್ರಾ ಸಮಿತಿ ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.