ಸಕ್ಕರೆ ಕಾರ್ಖಾನೆಯಲ್ಲಿ ಬೆಂಕಿ: 60 ಸಾವಿರ ಟನ್ ಕಬ್ಬಿನ ಸಿಪ್ಪೆ ಭಸ್ಮ
Team Udayavani, Apr 2, 2022, 12:36 PM IST
ಆಳಂದ: ತಾಲೂಕಿನ ಭೂಸನೂರ ಗ್ರಾಮದ ಬಳಿಯ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆ ಬಗ್ಯಾಸ್ಗೆ (ಕಬ್ಬಿನ ಸಿಪ್ಪೆಗೆ ) ಗುರುವಾರ ಸಂಜೆ ಬೆಂಕಿ ತಗುಲಿ ಅಪಾರ ಪ್ರಮಾಣದ ನಷ್ಟವಾದ ಘಟನೆ ಸಂಭವಿಸಿದೆ.
ಸಕ್ಕರೆ ಕಾರ್ಖಾನೆಯ ಬಯಲು ಪ್ರದೇಶದಲ್ಲಿನ ನುರಿಸಿದ ಸುಮಾರು 60 ಸಾವಿರ ಟನ್ನಷ್ಟು ಕಬ್ಬಿನ ಸಿಪ್ಪೆಗೆ ಬೆಂಕಿ ತಗುಲಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಕಾರ್ಖಾನೆಯಿಂದ ಸಿಪ್ಪೆ ಮಾರಾಟ ಮಾಡಲಾಗಿತ್ತು ಎನ್ನಲಾಗಿದೆ.
ಹಿಟಾಚಿಯ ಬೆಂಕಿ ತಗುಲಿದ ಬೆಂಕಿಗೆ 60 ಸಾವಿರ ಟನ್ ಬಗ್ಯಾಸ್, ಎರಡು ಹಿಟಾಚಿ, ಒಂದು ಜೆಸಿಪಿ, 2 ಲಾರಿಗಳು ಸುಟ್ಟು ಕರಕಲಾಗಿವೆ. ಕಾರ್ಖಾನೆಯ ಕಾರ್ಮಿಕ ವರ್ಗ ಹಾಗೂ ಕಲಬುರಗಿ, ಅಫಜಲಪುರ, ಆಳಂದ ಭಾಗದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಹರಸಾಹಸ ಪಟ್ಟು ಬೆಂಕಿ ನಂದಿಸಿ, ಭಾರೀ ಅನಾಹುತ ತಪ್ಪಿಸಿದರು. ಯಾವುದೇ ಜೀವ ಹಾನಿ ಸಂಭವಿಸಿಲ್ಲ.
ಸಿಪ್ಪೆಯ ಕೆನ್ನಾಲಿಗೆ ಹಾಗೂ ಹೊಗೆ ಬಾನೆತ್ತರಕ್ಕೆ ಹೋಗಿತ್ತು. ಸ್ಥಳಕ್ಕೆ ಕಾರ್ಖಾನೆ ಉಪಾಧ್ಯಕ್ಷ ದೇವರಾಜಲು, ಕಬ್ಬು ಅಭಿವೃದ್ಧಿ ಅಧಿಕಾರಿ ಶಿವಾನಂದ ವಿ. ನಂದಗಾಂವ ಹಾಗೂ ಸಿಬ್ಬಂದಿ ಹಾನಿ ಕುರಿತು ಪರಿಶೀಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.