ಪೋರ್ಟ್‌ ಕ್ರೆಡಿಟ್‌ ಸರೋವರದ ಮೇಲೊಂದು ಗ್ರಾಮ !


Team Udayavani, Apr 3, 2022, 3:55 PM IST

lake

ಕೆನಡಾದ ಒಂಟಾರಿಯೋ ಪ್ರಾಂತ್ಯದ ಒಂದು ಪುಟ್ಟ, ಸುಂದರ ಬಂದರು ಪ್ರದೇಶ ಪೋರ್ಟ್‌ ಕ್ರೆಡಿಟ್‌. ಕೆನಡಾ ಮತ್ತು ಅಮೆರಿಕ ನಡುವಿನ ಸರೋವರ ಒಂಟಾರಿಯೋವನ್ನು ಕ್ರೆಡಿಟ್‌ ಎಂಬ ನದಿ ಸೇರುವ ಸ್ಥಳ.

ಯುರೋಪಿಯನ್ನರು ಅಮೆರಿಕಕ್ಕೆ ಕಾಲಿಡುವ ಮುನ್ನ ಮಿಸ್ಸಿಸ್ಸಾಗ ಒಜಿಬ್ವೆ ಎಂಬಲ್ಲಿ ರೆಡ್‌ ಇಂಡಿಯನ್‌ ಮೂಲ ನಿವಾಸಿಗಳು ಇಲ್ಲಿ ವಾಸವಾಗಿದ್ದರು. ಕ್ರಮೇಣ ಬ್ರಿಟಿಷರ ಆಗಮನದಿಂದ ಮುಖ್ಯ ವ್ಯಾಪಾರ ಕೇಂದ್ರವಾಗಿ ಇದು ಮಾರ್ಪಟ್ಟಿತು. ಮೀನುಗಾರಿಕೆ, ಬೀವರ್‌ ಪ್ರಾಣಿಯ ಉಣ್ಣೆ ಸಾಗಣಿಕೆ, ಮರಮಟ್ಟು ವಹಿವಾಟಿಗೆ ಈ ಬಂದರು ಬಹುಬೇಗ ಪ್ರಸಿದ್ಧಿ ಪಡೆಯಿತು. 1834ರಲ್ಲಿ ಬ್ರಿಟಿಷರು ಇದರ ಅಭಿವೃದ್ಧಿಯ ನೀಲನಕ್ಷೆ ಸಿದ್ಧಪಡಿಸಿದರು. ದೀಪಸ್ತಂಭ ನಿರ್ಮಿಸಿದರು. ಜಲ, ಭೂ ಮಾರ್ಗದೊಂದಿಗೆ ರೈಲು ಮಾರ್ಗವೂ ಈ ಬಂದರನ್ನು ಇತರ ಊರುಗಳೊಂದಿಗೆ ಬೆಸೆಯಿತು. 1847ರಲ್ಲಿ ಇಲ್ಲಿಯ ಮೂಲನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಯಿತು. ಸರೋವರದ ಕಲ್ಲುಗಳನ್ನು ಬಳಸಿ ಕಟ್ಟಡ ಕಟ್ಟುವ ಕಂಪೆನಿಗಳ ಜತೆ ಇತರ ಕೈಗಾರಿಕೆಗಳೂ ಹುಟ್ಟಿಕೊಂಡವು. 1936ರಲ್ಲಿ ದೀಪಸ್ತಂಭ ಬೆಂಕಿಗೆ ಆಹುತಿಯಾಯಿತು. ಈ ಬಳಿಕ ಇತರ ಚಟುವಟಿಕೆಗಳು ನಿಧಾನವಾಗಿ ಕುಂಟಿತವಾದವು.

ಇಂದು ಕೈಗಾರಿಕೆಗಳೆಲ್ಲ ಮುಚ್ಚಲ್ಪಟ್ಟಿವೆ. ಹೆಚ್ಚಿನ ಸ್ಥಳೀಯರು ಪಟ್ಟಣದೆಡೆ ಮುಖ ಮಾಡಿದ್ದಾರೆ. ‘ವಿಲೇಜ್‌ ಆನ್‌ ದಿ ಲೇಕ್‌’ ಎಂದೇ ಕರೆಯಲ್ಪಡುವ ಪೋರ್ಟ್‌ ಕ್ರೆಡಿಟ್‌ ಇಂದು ಜನಪ್ರಿಯ ಪ್ರವಾಸಿ ತಾಣ. ಸ್ವತ್ಛ ಸುಂದರ ಬಂದರು ಮತ್ತು ದೀಪಸ್ತಂಭ ಮುಖ್ಯ ಆಕರ್ಷಣೆ. ದೂರದಿಂದಲೇ ಇದು ಜನರನ್ನು ತನ್ನೆಡೆಗೆ ಸೆಳೆಯುತ್ತದೆ. 1936ರಲ್ಲಿ ಬೆಂಕಿಗೆ ಆಹುತಿಯಾದ ದೀಪಸ್ತಂಭವನ್ನು ಮರು ನಿರ್ಮಿಸಲಾಗಿದ್ದು, ಅದು ಇಂದಿಗೂ ಕಾರ್ಯನಿರ್ವಹಿಸುತ್ತಿದೆ. ಈ ಸ್ತಂಭದ ಮೇಲೆ ಹತ್ತಲು ಮೆಟ್ಟಿಲುಗಳಿವೆ. ಚಳಿಗಾಲದಲ್ಲಿ ಸರೋವರದ ನೀರು ಹೆಪ್ಪುಗಟ್ಟುತ್ತದೆ. ಹಾಗಾಗಿ ಜನರು ಹೆಚ್ಚಾಗಿ ಜೂನ್‌ನಿಂದ ಸೆಪ್ಟಂಬರ್‌ ವರೆಗೆ ಇಲ್ಲಿಗೆ ಭೇಟಿ ಕೊಡುತ್ತಾರೆ. ವಾಟರ್‌ಫ್ರಂಟ್‌ ಟ್ರೈಲ್‌ ಎನ್ನುವ ಪಥ ಸರೋವರದ ದಂಡೆಯುದ್ದಕ್ಕೂ ಪಸರಿದೆ.

ಜೂನ್‌ ತಿಂಗಳಲ್ಲಿ ಇಲ್ಲಿ ವಾಟರ್‌ಫ್ರೆಂಟ್‌ ಫೆಸ್ಟಿವಲ್‌ ಅನ್ನು ಆಯೋಜಿಸಲಾಗುತ್ತದೆ. ಇದೊಂದು ರೀತಿಯಲ್ಲಿ ಮನೋರಂಜನಾ ಮೇಳವಿದ್ದಂತೆ. ಮಕ್ಕಳು ಮುದುಕರಾಗಿ ಎಲ್ಲರೂ ಭಾಗವಹಿಸಿ ಖುಷಿ ಪಡುವ ಕಾರ್ಯಕ್ರಮಗಳು ಇಲ್ಲಿ ಜರುಗುತ್ತವೆ.

ಹಲವು ಕರಕುಶಲ ವಸ್ತುಗಳು ಮಾರಾಟಕ್ಕಿರುತ್ತವೆ. ಸಾಂಪ್ರದಾಯಿಕ ನೃತ್ಯ ಪ್ರದರ್ಶನ – ತಿಂಡಿತಿನಿಸುಗಳು ಕಣ್ಮನ ತಣಿಸುತ್ತವೆ. ಜಗತ್‌ ಪ್ರಸಿದ್ಧ ಸಂಗೀತಗಾರರ ವಾದ್ಯಗೋಷ್ಠಿ ಮುಗಿಲು ಮುಟ್ಟುತ್ತದೆ. ಪ್ರತಿವರ್ಷ ಅಂದಾಜು ಒಂದು ಲಕ್ಷಕ್ಕೂ ಹೆಚ್ಚು ಜನರು ಈ ಉತ್ಸವದಲ್ಲಿ ಸೇರುತ್ತಾರೆ. ಕೇವಲ ಕೆನಡಾದ ಪ್ರಾಂತ್ಯಗಳಲ್ಲದೆ ದೂರದ ಅಮೆರಿಕದಿಂದಲೂ ಈ ಪ್ರದರ್ಶನಕ್ಕೆ ತಪ್ಪದೆ ಬರುವವರಿದ್ದಾರೆ.

ಆಗಸ್ಟ್‌ ತಿಂಗಳಲ್ಲಿ ಬೋಟ್‌ ಶೋ ನಡೆಯುತ್ತದೆ. ತಮ್ಮತಮ್ಮ ಐಷಾರಾಮಿ ವಿಹಾರಿ ನೌಕೆಗಳನ್ನು ಇಲ್ಲಿ ಜನ ಪ್ರದರ್ಶಿಸುತ್ತಾರೆ. ಅತ್ಯಂತ ಭಿನ್ನವಾದ ಈ ಶೋನಲ್ಲಿ ಅತಿ ಹಳೆಯ ವಿಹಾರಿ ನೌಕೆಗಳೊಡನೆ ನವನವೀನ ನೌಕೆಗಳನ್ನು ವೀಕ್ಷಿಸಲು ದೂರದೂರುಗಳಿಂದ ಜನರು ಬರುತ್ತಾರೆ. ನೌಕೆಗಳ ಬಿಡಿಭಾಗ, ನಿರ್ವಹಣೆ, ಖರೀದಿ-ಮಾರಾಟ ಹೀಗೆ ಎಲ್ಲ ಸ್ತರದ ಸಹಾಯ- ವ್ಯಾಪಾರವೂ ಪ್ರದರ್ಶನದ ಜತೆಗೆ ನಡೆಯುತ್ತಿರುತ್ತದೆ.

ಪೋರ್ಟ್‌ ಕ್ರೆಡಿಟ್‌ನ ಮುಖ್ಯ ಆಕರ್ಷಣೆ ಎಂದರೆ ಇಲ್ಲಿನ ಮರೀನಾ ಅಥವಾ ಬಂದರು. ಇಲ್ಲಿನ ದಕ್ಕೆಯಲ್ಲಿ ಬೇಸಗೆಯ 5- 6 ತಿಂಗಳು ಜನರು ತಮ್ಮ ವಿಹಾರಿ ನೌಕೆಗಳನ್ನು ನಿಲ್ಲಿಸುತ್ತಾರೆ. ಮಧ್ಯಾಹ್ನದ ಬಿಸಿ ಏರಿದಾಗ ತಮ್ಮ ನೌಕೆಗಳಲ್ಲಿ ಒಂಟಾರಿಯೋ ಸರೋವರದಲ್ಲಿ ವಿಹರಿಸುತ್ತಾರೆ. ನೆಚ್ಚಿನ ಸಾಕು ಪ್ರಾಣಿ, ಕುಟುಂಬಿಕರು, ಗೆಳೆಯರೊಂದಿಗೆ ತಿಂಡಿತಿನಿಸು ಮೆಲ್ಲುತ್ತ, ಪಾನೀಯ ಹೀರುತ್ತ, ಬೋರ್ಡ್‌ ಗೇಮ್ಸ್‌ ಆಡುತ್ತ ಬಿಸಿಲಿನ ಜಳಕ್ಕೆ ಮೈಯೊಡ್ಡಿ ನೌಕೆಯಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಸ್ವಂತ ನೌಕೆಗಳಿಲ್ಲದ ಜನರು ನೌಕೆಯನ್ನು ಬಾಡಿಗೆಗೆ ಪಡೆಯುವ ಅವಕಾಶವೂ ಇದೆ.

ಜೂನ್‌ನಿಂದ ಸೆಪ್ಟಂಬರ್‌ ವರೆಗೆ ಪ್ರತಿ ನಿತ್ಯವೂ ವಿವಿಧ ಜಲಕ್ರೀಡೆಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ನೀರಿನ ಬೈಕ್‌, ಪ್ಯಾರಾಸೇಲಿಂಗ್‌, ಪ್ಯಾರಾಗ್ಲೆ„ಡಿಂಗ್‌, ಕಯಾಕಿಂಗ್‌ ಹೀಗೆ ಎಲ್ಲ ರೀತಿಯ ಸೌಲಭ್ಯಗಳೂ ಇಲ್ಲಿವೆ. ಕ್ರೆಡಿಟ್‌ ನದಿಯಲ್ಲಿ ಮೀನು ಹಿಡಿಯುವ ಜನರೂ ಕಾಣಸಿಗುತ್ತಾರೆ. ಹಂಸ ಮತ್ತು ಕೆನಡಾದ ಪ್ರಿಯ ಬಾತುಕೋಳಿ – ಕೆನೆಡಿಯನ್‌ ಗೂಸ್‌ ನೀರಿನ ಮೇಲೆ ತೇಲುತ್ತ ಮಕ್ಕಳನ್ನು ಖುಷಿಪಡಿಸುತ್ತವೆ. ಅಲ್ಲಲ್ಲಿರುವ ಬೆಂಚಿನ ಮೇಲೆ ಕುಳಿತು ಪುಸ್ತಕ ಓದುವ ವೃದ್ಧರ ಮುಗುಳ್ನಗು ಕಂಡರೆ ಪೋರ್ಟ್‌ ಕ್ರೆಡಿಟ್‌ ಎಲ್ಲರಿಗೂ ಪ್ರಿಯ ಎನ್ನುವುದರಲ್ಲಿ ಸಂಶಯವಿಲ್ಲ..

ಪೋರ್ಟ್‌ ಕ್ರೆಡಿಟ್‌ ಪ್ರಸಿದ್ಧ ಪ್ರವಾಸಿ ತಾಣವಾಗಿರುವುದರಿಂದ ಜಗತ್ತಿನ ಹೆಚ್ಚಿನೆಲ್ಲ ದೇಶಗಳ ರೆಸ್ಟೋರೆಂಟ್‌ಗಳು ಇಲ್ಲಿವೆ. ಇಲ್ಲಿನ ಕಾಫಿ ಮತ್ತು ಐಸ್‌ಕ್ರೀಮ್‌ಗಳಿಗೆ ಸರಿಸಾಟಿಯಾಗಿ ಬೇರೆ ಎಲ್ಲಿಯೂ ಇರಲಾರದು. ಸ್ಥಳೀಯ ವೈನ್‌ ಹೀರಲೆಂದೇ ದೂರದಿಂದ ಬರುವ ಜನರಿದ್ದಾರೆ.

ಟೊರಂಟೊ ನಗರದಿಂದ ಕೇವಲ 20 ಕಿ.ಮೀ. ದೂರದಲ್ಲಿದೆ. ಸ್ವಂತ ವಿಹಾರಿ ನೌಕೆಗಳಿದ್ದರೆ ಜಲಮಾರ್ಗವಾಗಿ ಅಥವಾ ಸ್ವಂತ ವಾಹನವಿದ್ದರೆ ರಸ್ತೆ ಸಾರಿಗೆ ಮೂಲಕ ಇಲ್ಲಿಗೆ ತಲುಪಬಹುದು. ಟೊರಂಟೋದಿಂದ ನಯಾಗಾರಾದೆಡೆ ತೆರಳುವ ಎಲ್ಲ ರೈಲುಗಳು ಪೋರ್ಟ್‌ ಕ್ರೆಡಿಟ್‌ನಲ್ಲಿ ನಿಲ್ಲುತ್ತವೆ.

-ಸಹನಾ ಹರೇಕೃಷ್ಣ, ಟೊರಂಟೊ

ಟಾಪ್ ನ್ಯೂಸ್

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ

1-deee

Udupi; ಪೊಲೀಸ್‌ ಇಲಾಖೆ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

1-dr

Veerendra Heggade 77ನೇ ವರ್ಷಕ್ಕೆ ಪಾದಾರ್ಪಣೆ: ಗಣ್ಯರಿಂದ ಶುಭ ಹಾರೈಕೆ

UTK

Speaker ಯು.ಟಿ.ಖಾದರ್‌ ವ್ಯಾಟಿಕನ್‌ ಸಿಟಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.