ಕಾರ್ಕಳ: ದೇಶದ ಮೊದಲ ಗ್ರಾಮೀಣ ಎಂಆರ್‌ಎಫ್ ಘಟಕ ಉದ್ಘಾಟನೆ
Team Udayavani, Apr 4, 2022, 6:42 AM IST
ಕಾರ್ಕಳ: ದೇಶದ ಮೊದಲ ಗ್ರಾಮೀಣ ಮೆಟೀರಿಯಲ್ಸ್ ರಿಕವರಿ ಫೆಸಿಲಿಟಿ (ಎಂಆರ್‌ಎಫ್) ಘಟಕ ಕಾರ್ಕಳದಲ್ಲಿ ಯಶಸ್ವಿಯಾಗಿದ್ದು ಈ ಮೂಲಕ ದೇಶ, ರಾಜ್ಯಕ್ಕೆ ಸ್ಫೂರ್ತಿ ನೀಡಿದೆ. ವರ್ಷದೊಳಗೆ ರಾಜ್ಯದಲ್ಲಿ ಇಂತಹ ಕನಿಷ್ಠ 50 ಘಟಕಗಳನ್ನು ಆರಂಭಿಸಲಾಗುವುದು ಎಂದು ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಸ್. ಈಶ್ವರಪ್ಪ ಹೇಳಿದರು.
ಕಾರ್ಕಳದ ನಿಟ್ಟೆ ಗ್ರಾ.ಪಂ. ವ್ಯಾಪ್ತಿಯ ಪದವು ಬಳಿ ದೇಶದ ಮೊದಲ ಗ್ರಾಮೀಣ ಪ್ರದೇಶದ ಎಅಂಆರ್‌ಎಫ್ ಘಟಕ ಸಮಗ್ರ ಘನತ್ಯಾಜ್ಯ ನಿರ್ವಹಣ ಕೇಂದ್ರವನ್ನು ಸೋಮ ವಾರ ಉದ್ಘಾಟಿಸಿ ಅವರು ಮಾತನಾ ಡಿದರು. ಎ. 11ರಂದು ಕೇಂದ್ರ ಸಚಿವರು ದಿಲ್ಲಿ ಯಲ್ಲಿ ದೇಶದ ಎಲ್ಲ ರಾಜ್ಯಗಳ ಗ್ರಾಮೀಣಾ ಭಿವೃದ್ಧಿ ಸಚಿವರ ವಿಶೇಷ ಸಭೆ ಕರೆದಿದ್ದಾರೆ. ಸಭೆಯಲ್ಲಿ ಇಲ್ಲಿನ ಘಟಕದ ವಿಚಾರ ಪ್ರಸ್ತಾವಿಸಿ, ಸಚಿವೆ ಶೋಭಾ ಕರಂದ್ಲಾಜೆ ಅವರ ಸಹಕಾರ ಪಡೆದು ರಾಜ್ಯಕ್ಕೆ ಕೇಂದ್ರದಿಂದ ಹೆಚ್ಚಿನ ನೆರವು ತರಲು ಪ್ರಯತ್ನಿಸುವೆ ಎಂದರು.
ನಿಟ್ಟೆಯಲ್ಲಿ ಥರ್ಮಾಕೋಲ್ ಘಟಕ :
ಎಂಆರ್‌ಎಫ್ ಘಟಕಕ್ಕೆ ಹೆಚ್ಚುವರಿಯಾಗಿ 50 ಲಕ್ಷ ರೂ. ವೆಚ್ಚದ ಥರ್ಮಾಕೋಲ್ ಘಟಕದ ಬೇಡಿಕೆಯನ್ನು ಸಚಿವ ಸುನಿಲ್ ಕುಮಾರ್ ಮುಂದಿರಿಸಿದ್ದು, ಬೆಂಗಳೂರಿನಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಜತೆ ಚರ್ಚಿಸಿ ಮಾಸಾಂತ್ಯದೊಳಗೆ ಮಂಜೂರು ನೀಡುವುದಾಗಿ ಈಶ್ವರಪ್ಪ ಹೇಳಿದರು.
ಕೇಂದ್ರ, ರಾಜ್ಯಗಳ ನೆರವು :
ಕೇಂದ್ರ ಸಚಿವೆ, ಸಂಸದೆ ಶೋಭಾ ಕರಂದ್ಲಾಜೆ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದ ಪುಸ್ತಕ ಬಿಡುಗಡೆಗೊಳಿಸಿ ಕೇಂದ್ರ, ರಾಜ್ಯ ಸರಕಾರಗಳೆರಡೂ ಘನ ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಒತ್ತು ನೀಡುತ್ತಿವೆ. ನಗರದಲ್ಲಿ ವೈಜ್ಞಾನಿಕ ತ್ಯಾಜ್ಯ ಘಟಕ ನಿರ್ವಹಣೆ ಸಾಧ್ಯ ಎನ್ನುವುದನ್ನು ರಾಜ್ಯ ತೋರಿಸಿಕೊಟ್ಟಿದೆ. ಈಗ ಗ್ರಾಮೀಣ ಭಾಗದಲ್ಲೂ ಯಶಸ್ವಿಯಾಗಿದೆ ಎಂದರು.
ಸಂದೇಶ ರವಾನೆ: ಸುನಿಲ್ :
ಅಧ್ಯಕ್ಷತೆ ವಹಿಸಿದ್ದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಮಾತನಾಡಿ, ಘಟಕದ ಆರಂಭದಲ್ಲಿ ವಿರೋಧ ಗಳಿದ್ದವು. ನನ್ನ ಮನೆಯೇ ಬಳಿಯಲ್ಲೇ ಅನುಷ್ಠಾನ ಮಾಡಿ ಎಂದು ಅಧಿಕಾರಿ ಗಳಿಗೆ ಸಲಹೆ ನೀಡಿದೆ. ಊರಿನ ಜನರು ಸಹಕರಿಸಿದರು. ಈ ಮೂಲಕ ಎಲ್ಲೆಡೆಯೂ ಅನುಷ್ಠಾನ ಮಾಡಬಹುದೆಂಬ ಸಂದೇಶ ದೇಶಕ್ಕೆ ಇಲ್ಲಿಂದ ಹೋಗಿದೆ ಎಂದರು.
ರಾಮಕೃಷ್ಣ ಮಿಷನ್ ಆಶ್ರಮದ ಸ್ವಾಮಿ ಏಕಗಮ್ಯಾನಂದ ಸ್ವಾಮೀಜಿ ಶುಭ ಹಾರೈಸಿದರು.
ಕಾಪು ಶಾಸಕ ಲಾಲಾಜಿ ಮೆಂಡನ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಗ್ರಾಮೀಣಾಭಿವೃದ್ಧಿ ಸಚಿವರ ಆಪ್ತ ಕಾರ್ಯದರ್ಶಿ ಜಯರಾಮ, ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ., ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಿರ್ಮಿತಿ ಕೇಂದ್ರದ ಅರುಣ್ ಕುಮಾರ್, ಗ್ರಾ.ಪಂ. ಅಧ್ಯಕ್ಷ ಸತೀಶ್ ಪೂಜಾರಿ ಉಪಸ್ಥಿತರಿದ್ದರು.
ಜಿ.ಪಂ. ಸಿಇಒ ಡಾ| ನವೀನ್ ಭಟ್ ಪ್ರಸ್ತಾವನೆಗೈದರು. ಮುಖ್ಯ ಯೋಜನಾಧಿಕಾರಿ ವಿ. ಶ್ರೀನಿವಾಸ ರಾವ್ ಸ್ವಾಗತಿಸಿ, ಕಾರ್ಕಳ ತಾ.ಪಂ. ಇಒ ಗುರುದತ್ ಎಂ.ಎನ್. ವಂದಿಸಿದರು. ಸಂಗೀತಾ ಕುಲಾಲ್ ನಿರೂಪಿಸಿದರು. ಸ್ವತ್ಛತಾ ಆ್ಯಪ್, ವಸ್ತುಪ್ರದರ್ಶನ, ಗೋಭರ್ ಧನ್ ಘಟಕ ಅನ್ನು ಉದ್ಘಾಟಿಸಲಾಯಿತು.
ಚಾಲಾಕಿ ಸುನಿಲ್! :
ಕಾರ್ಕಳಕ್ಕೆ ಬಂದಾಗೆಲ್ಲ ನನ್ನಿಂದ ಬಲವಂತವಾಗಿ ಘೋಷಣೆಯನ್ನು ಸಚಿವ ಸುನಿಲ್ ಮಾಡಿಸುತ್ತಾರೆ. ನಮ್ಮ ಕಡೆಯಿಂದ, ಅತ್ತ ಮುಖ್ಯಮಂತ್ರಿಯಿಂದಲೂ ಬಲವಂತವಾಗಿ ಅನುದಾನ ಪಡೆಯುತ್ತಾರೆ. ಸುನಿಲ್ ಹಿಂದಿನ ಜನ್ಮದಲ್ಲಿ ಮಾರ್ವಾಡಿಯಾಗಿದ್ದರೋ ಅನಿಸುತ್ತದೆ ಎಂದು ಚಟಾಕಿ ಹಾರಿಸಿದ ಈಶ್ವರಪ್ಪ, ಹೆಬ್ರಿ ತಾ.ಪಂ ಕಚೇರಿಗೆ 2 ಕೋ.ರೂ. ನೀಡುವ ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.