ಹಿಂದೂ ಸಂಘಟನೆಯಿಂದ ಮಾಂಸ ಮಾರಾಟ : ಸವಾಲೊಡ್ಡಿದ ಪ್ರಗತಿಪರ ಚಿಂತಕರು
Team Udayavani, Apr 4, 2022, 6:10 AM IST
ಚಿಕ್ಕಮಗಳೂರು : ಹಲಾಲ್ ಮತ್ತು ಜಟ್ಕಾ ಕಟ್ ವಿವಾದ ತೀವ್ರವಾಗುತ್ತಿದ್ದು, ಯುಗಾದಿ ಹಬ್ಬದ ಮರುದಿನ ಹೊಸತೊಡಕಿಗೆ ಹಿಂದೂ ಸಂಘ ಟನೆಗಳ ಮುಖಂಡರು ಜಟ್ಕಾ ಕಟ್ ಮಾಂಸ ಮಾರಾಟಕ್ಕೆ ಮುಂದಾದರು.
ಬಜರಂಗಳದ ಜಿಲ್ಲಾ ಸಂಚಾಲಕ ಶ್ಯಾಮ್ ವಿ. ಗೌಡ ನೇತೃತ್ವದಲ್ಲಿ ನಗರದ ಹೊರವಲಯದಲ್ಲಿ ಜನರಿಗೆ ಕುರಿ ಮಾಂಸವನ್ನು ಮಾರಾಟ ಮಾಡಲಾಯಿತು. ಚನ್ನರಾಯ ಪಟ್ಟಣದಿಂದ ಕುರಿಗಳನ್ನು ರೈತರಿಂದ ಖರೀದಿಸಿದ್ದು ಅವುಗಳನ್ನು ಜಟ್ಕಾಕಟ್ ಮೂಲಕ ವಧಿಸಿ ಸ್ಥಳದಲ್ಲೇ 600 ರೂ.ಗೆ ಮಾಂಸ ಮಾರಾಟ ಮಾಡಲಾಗಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮಾಂಸವನ್ನು ನೀಡಲಾಗಿದ್ದು ಹೋಮ್ ಡೆಲಿವರಿಯ ಸೌಲಭ್ಯವನ್ನೂ ನೀಡಲಾಗಿದೆ ಎಂದು ನಾಯಕರು ತಿಳಿಸಿದ್ದಾರೆ.
ಸವಾಲೊಡ್ಡಿದ ಪ್ರಗತಿಪರ ಚಿಂತಕರು
ಮೈಸೂರು : ಹಿಂದೂ ಸಂಘಟನೆಗಳ ಕರೆಗೆ ಸವಾಲೊಡ್ಡಿದ ಕೆಲವು ಪ್ರಗತಿಪರ ಚಿಂತಕರು ಮುಸ್ಲಿಮರ ಅಂಗಡಿಯಿಂದಲೇ ಹಲಾಲ್ ಕಟ್ ಮಾಂಸವನ್ನು ಖರೀದಿಸಿದರು. ಸಕಲೆಂಟು ಜಾತಿ ಸಹಬಾಳ್ವೆ ಸಂಘ, ಕರ್ನಾಟಕ ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ ವತಿಯಿಂದ ಸಾಹಿತಿ ದೇವನೂರ ಮಹದೇವ ನೇತೃತ್ವದಲ್ಲಿ ಚಿಂತಕರಾದ ಪ.ಮಲ್ಲೇಶ್, ರೈತ ಸಂಘದ ಬಡಗಲಪರ ನಾಗೇಂದ್ರ, ಚೋರನಹಳ್ಳಿ ಶಿವಣ್ಣ, ಬಿಎಸ್‌ಪಿ ಮುಖಂಡ ಚನ್ನಕೇಶವ ಮತ್ತಿತರರು ಇಲ್ಲಿನ ಶಾಂತಿನಗರದಲ್ಲಿರುವ ಮಟನ್ ಶಾಪೊಂದಕ್ಕೆ ತೆರಳಿ ಮುಸ್ಲಿಮರಿಂದಲೇ ಮಾಂಸ ಖರೀದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದೇವನೂರು ಮಹದೇವ ಅವರು ವೋಟು ಬ್ಯಾಂಕ್ ರಾಜಕಾರಣಕ್ಕಾಗಿ ಹಿಂದೂ ಪರ ಸಂಘಟನೆಗಳ ಕುತಂತ್ರಕ್ಕೆ ಸರಕಾರವೇ ಸಾಥ್ ನೀಡುತ್ತಿದೆ ಎಂದು ಆರೋಪಿಸಿದರು.
ಈ ಮಧ್ಯೆ ಮೈಸೂರಿನ ಅನೇಕ ಕಡೆ ಹಿಂದೂಗಳು ರವಿವಾರ ತಮ್ಮವರ ಅಂಗಡಿಗಳಿಂದಲೇ ಮಾಂಸ ಖರೀದಿಸುತ್ತಿದುದು ಕಂಡು ಬಂತು.
ಹಲಾಲ್ ಮಾಡುವ ಮರಿಗಳನ್ನು ನಾವು ಎಷ್ಟೋ ವರ್ಷಗಳಿಂದ ಸೇವನೆ ಮಾಡುತ್ತಿದ್ದರೂ ಈಗ ಅನಗತ್ಯವಾಗಿ ಸಂಬಂಧ ಇಲ್ಲದ ವಿಷಯಗಳನ್ನು ಎತ್ತಿಕೊಂಡು ಶಾಂತಿ ಕದಡುವುದು ಎಷ್ಟು ಸರಿ? ಹಲಾಲ್ ಅವರ (ಅಲ್ಪಸಂಖ್ಯಾಕರ) ಪದ್ಧತಿ. ಅದು ಅವರವರ ನಂಬಿಕೆಗಳಾಗಿವೆ. ನಾವೂ ಹಬ್ಬ-ಹರಿದಿನಗಳಲ್ಲಿ ಮರಿ ಕೊಯ್ಯುವುದಿಲ್ಲವೇ? ರಕ್ತ ಕೆಳಗೆ ಚೆಲ್ಲುವುದಿಲ್ಲವೇ? ಈಗ ಏಕಾಏಕಿ ಯಾಕೆ ವಿವಾದ ಸೃಷ್ಟಿಸಲಾಗಿದೆ?
-ಸಿದ್ದರಾಮಯ್ಯ, ವಿಪಕ್ಷ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ
Excise: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್
Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!
MUST WATCH
ಹೊಸ ಸೇರ್ಪಡೆ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.