ಶೀಘ್ರ ತೆರವಾಗಬೇಕಿದೆ ಹೂಳು, ಪೊದೆ
Team Udayavani, Apr 4, 2022, 10:01 AM IST
ವೇಣೂರು: ಇಲ್ಲಿಯ ಮುಖ್ಯಪೇಟೆಯ ಹೆದ್ದಾರಿ ಬದಿಯ ಚರಂಡಿಯಲ್ಲಿ ಹೂಳು ತುಂಬಿರುವುದು ಮಾತ್ರವಲ್ಲದೆ ಪೊದೆಗಳು ಬೆಳೆದು ಮಳೆಗಾಲಕ್ಕೆ ಕೃತಕ ನೆರೆ ಭೀತಿ ಎದುರಾಗಿದೆ.
ಬೇಸಗೆಯಲ್ಲಿ ಕಸಕಡ್ಡಿ, ತ್ಯಾಜ್ಯ ಸೇರಿಕೊಂಡು ಮಳೆ ಗಾಲದಲ್ಲಿ ಮಳೆ ನೀರಿನ ಹರಿವಿಗೆ ಅಡ್ಡಿಯುಂಟಾಗುತ್ತಿದ್ದು, ಕೆಲವೆಡೆ ಚರಂಡಿ, ಮೋರಿಗಳು ಪೂರ್ಣ ಬಂದ್ ಆಗಿರುವ ಸ್ಥಿತಿಯಲ್ಲಿದೆ.
ಕೆಲವೆಡೆ ಚರಂಡಿಯೇ ಇಲ್ಲ
ವೇಣೂರು ಮುಖ್ಯಪೇಟೆಯಲ್ಲಿ ಕೆಲವೆಡೆ ಚರಂಡಿಯೇ ಇಲ್ಲ, ಕೆಲವೆಡೆ ಚರಂಡಿಗೆ ಜಾಗವೂ ಇಲ್ಲ. ಹೀಗಾಗಿ ಮಳೆನೀರು ರಸ್ತೆಯಲ್ಲೇ ಹರಿಯುತ್ತಿರುವ ದೃಶ್ಯ ಮಾಮೂಲು ಎಂಬಂತಾಗಿದೆ. ವೇಣೂರು ಹಾಲು ಉತ್ಪಾದಕರ ಸಂಘದ ಬಳಿಯಿರುವ ಹೆದ್ದಾರಿಯ ಮೋರಿ ಹೂಳು ತುಂಬಿ ಬ್ಲಾಕ್ ಆಗಿದೆ. ಕಳೆದ ಬಾರಿಯ ಮಳೆಗಾಲದ ಮುನ್ನ ಸ್ಥಳೀಯ ಗ್ರಾ.ಪಂ. ದುರಸ್ತಿಗೊಳಿಸುವ ಪ್ರಯತ್ನ ಮಾಡಿತ್ತು. ಆದರೆ ಫಲ ನೀಡಿಲ್ಲ. ಇಲ್ಲಿ ಚರಂಡಿಯ ನೀರು ಹೆದ್ದಾರಿಯಲ್ಲೇ ಹರಿಯುತ್ತದೆ.
ಕೃತಕ ನೆರೆ ಸೃಷ್ಟಿ
ವೇಣೂರು ಕಾಲೇಜು ತಂಗುದಾಣದ ಬಳಿಯ ಚರಂಡಿಯ ನಿರ್ವಹಣೆ ಅಗತ್ಯವಾಗಿ ಆಗಬೇಕಿದೆ. ಕಳೆದ ಬಾರಿ ಹೆದ್ದಾರಿ ಬದಿಯ ವಾಣಿಜ್ಯ ಸಂಕೀರ್ಣದೊಳಗೆ ನೀರು ನುಗ್ಗಿತ್ತು. ದುರಸ್ತಿಗೆ ಉದಾಸೀನ ತೋರಿದರೆ ಕೃತಕ ನೆರೆ ಸೃಷ್ಟಿ ಯಾಗುವ ಆತಂಕವನ್ನು ಜನ ವ್ಯಕ್ತ ಪಡಿಸಿದ್ದಾರೆ.
ಹೆದ್ದಾರಿಯಲ್ಲೇ ಚರಂಡಿ ನೀರು
ವೇಣೂರು ಜೆ.ಪಿ. ಟವರ್ ಮುಂಭಾಗದ ರಸ್ತೆಯಲ್ಲಿ ಪ್ರತೀ ಮಳೆಗಾಲದಲ್ಲಿ ನೆರೆ ಸೃಷ್ಟಿಯಾಗುತ್ತದೆ. ಇಲ್ಲಿದ್ದ ಚರಂಡಿ ಸಂಪೂರ್ಣ ಮುಚ್ಚಲ್ಪಟ್ಟಿದ್ದು, ಹೆದ್ದಾರಿಯಲ್ಲೇ ಚರಂಡಿ ನೀರು ಹರಿಯುವಂತಾಗಿದೆ. ಹೆದ್ದಾರಿಯುದ್ದಕ್ಕೂ ಬದಿಯಲ್ಲಿ ಹರಿಯುವ ನದಿ ಇದ್ದರೂ ಚರಂಡಿ ನೀರನ್ನು ಸಮರ್ಪಕವಾಗಿ ನದಿಗೆ ಬಿಡಲು ಸಾಧ್ಯವಾಗಿಲ್ಲ ಎಂಬ ಮಾತುಗಳು ಕೇಳಿ ಬಂದಿದೆ. ಪೇಟೆಯಲ್ಲಿ ಕೆಲವೆಡೆ ಚರಂಡಿಯ ಮೇಲ್ಭಾಗಕ್ಕೆ ಅಳವಡಿಸಿರುವ ಸ್ಲಾéಬ್‌ಗಳು ಮುರಿದು ಬಿದ್ದಿವೆ. ಇನ್ನು ಕೆಲವು ಮುರಿಯುವ ಸ್ಥಿತಿಯಲ್ಲಿದೆ. ಸ್ಲ್ಯಾಬ್‌ಗಳನ್ನು ತೆಗೆದು ಚರಂಡಿ ಸ್ವತ್ಛಗೊಳಿಸುವ ಕಾರ್ಯಕ್ಕೆ ಸಂಬಂಧಿತ ಇಲಾಖೆಗಳು, ಸ್ಥಳೀಯಾಡಳಿತಗಳು ಮುಂದಾಗಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.