ಎಸ್‌ಟಿಗೆ ಸೌಲಭ್ಯ ಒದಗಿಸಲು ಪ್ರಿಯಾಂಕ್ ಖರ್ಗೆಗೆ ಮನವಿ
Team Udayavani, Apr 4, 2022, 10:24 AM IST
ವಾಡಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಚಿತ್ತಾಪುರ ಮೀಸಲು ಮತಕ್ಷೇತ್ರ ವ್ಯಾಪ್ತಿಯ ಎಸ್‌ಟಿ ಸಮುದಾಯದ ಜನರು ಶಾಸಕ ಪ್ರಿಯಾಂಕ್ ಖರ್ಗೆಗೆ ಮನವಿ ಸಲ್ಲಿಸಿದ್ದಾರೆ.
ಮಹರ್ಷಿ ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಭೀಮರಾವ್ ದೊರೆ ನೇತೃತ್ವದಲ್ಲಿ ಬೆಂಗಳೂರಿನ ನಿವಾಸದಲ್ಲಿ ಶಾಸಕ ಪ್ರಿಯಾಂಕ್ ಅವರನ್ನು ಭೇಟಿ ಮಾಡಿರುವ ಚಿತ್ತಾಪುರ, ವಾಡಿ, ಚಾಮನೂರ, ಲಾಡ್ಲಾಪುರ, ಅಣ್ಣಿಕೇರಿ, ಶಹಾಬಾದ ಸೇರಿದಂತೆ ವಿವಿಧ ಗ್ರಾಮಗಳ ವಾಲ್ಮೀಕಿ ಸಮಾಜದ ಮುಖಂಡರು, ಸಮುದಾಯಕ್ಕೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳು ವಿವಿಧ ಕಾರಣಗಳಿಂದ ನನೆಗುದಿಗೆ ಬಿದ್ದಿವೆ. ಅನೇಕ ಸೌಕರ್ಯಗಳು ಜನಂಗದ ಬಡಾವಣೆಗಳಿಗೆ ತಲುಪಲು ವಿಳಂಬವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನನೆಗುದಿಗೆ ಬಿದ್ದಿರುವ ಚಿತ್ತಾಪುರ ಪಟ್ಟಣದ ವಾಲ್ಮೀಕಿ ಭವನ ಕಾಮಗಾರಿ ಪೂರ್ಣಗೊಳಿಸಬೇಕು. ಹದಗೆಟ್ಟ ವಾಡಿ-ಚಾಮನೂರ ಡಾಂಬರೀಕರಣ ರಸ್ತೆ ಅಭಿವೃದ್ಧಿಪಡಿಸಬೇಕು. ಪಟ್ಟಣದಲ್ಲಿ ಬೇಡ ಜನಾಂಗದ ಸಾಂಸ್ಕೃತಿಕ ಸಾಮಾಜಿಕ ಚಟುವಟಿಕೆ ನಡೆಸಲು ವಾಲ್ಮೀಕಿ ಸಮುದಾಯ ಭವನ ಮಂಜೂರು ಮಾಡಿಸುವ ಮೂಲಕ ಕಟ್ಟಡ ನಿರ್ಮಿಸಲು ಒಂದು ಎಕರೆ ಭೂಮಿ ಒದಗಿಸಬೇಕು. ಲಾಡ್ಲಾಪುರ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಸ್ಥಾಪನೆಗೆ ಅನುದಾನ ಬಿಡುಗಡೆ ಮಾಡಬೇಕು. ಪಟ್ಟಣದ ವಾಲ್ಮೀಕಿ ಸಮಾಜದ ರುದ್ರಭೂಮಿಗೆ ಬೋರ್‌ವೆಲ್ ಮಂಜೂರು ಮಾಡಿಸಬೇಕು. ಸ್ಮಶಾನದ ಪ್ರವೇಶ ದ್ವಾರಕ್ಕೆ ಕಬ್ಬಿಣದ ಗೇಟ್ ಮತ್ತು ಒಂದು ಕೋಣೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಪ್ರಿಯಾಂಕ್ ಅವರಲ್ಲಿ ಮನವಿ ಮಾಡಿದ್ದಾರೆ.
ಮಹರ್ಷಿ ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಭೀಮರಾವ್ ದೊರೆ, ಕಾರ್ಯದರ್ಶಿ ಹುಸನಪ್ಪ ಮಗದಂಪುರ, ಉಪಾಧ್ಯಕ್ಷ ಸುಭಾಶ್ಚಂದ್ರ ರದ್ದೇವಾಡಗಿ, ಮುಖಂಡರಾದ ಭಾಗಪ್ಪ ಮೊಗಲಾ, ಚಂದ್ರಾಮ ಲಾಡ್ಲಾಪುರ, ಸಾಬಣ್ಣ ಅಲ್ಲೂರ, ಭೀಮರಾಯ ಮುಸ್ಲಾ, ಉಮೇಶ ಚಾಮನೂರ, ರಾಮಕೃಷ್ಣ ಮಾಲಗತ್ತಿ, ಸಾಬಣ್ಣ ರದ್ದೇವಾಡಗಿ, ಶರಣಬಸಪ್ಪ ದಂಡೋತಿ, ಸಾಬಣ್ಣ ಮುಸ್ಲಾ, ಮರಲಿಂಗ ಮಳಗ, ಸಾಬಣ್ಣ ಕುಂಬಾರಹಳ್ಳಿ, ಅಮರೇಶ ದೊರೆ, ಸುಬ್ಬಣ್ಣ ನಾಯ್ದೊಡಿ, ನಾಗಪ್ಪ ನಾಯ್ದೊಡಿ, ಸಾಬಣ್ಣ ಗಲಗಿನ್, ಶಿವಶಂಕರ ಮುಸ್ಲಾ, ನಾಗರಾಜ ದೊರೆ, ಹಣಮಂತ ದೊರೆ ಸೂಲಹಳ್ಳಿ ಹಾಗೂ ಮತ್ತಿತರರು ನಿಯೋಗದಲ್ಲಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.