ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ; ಬೋಟ್‌ನಲ್ಲಿದ್ದವರ ರಕ್ಷಣೆ
Team Udayavani, Apr 4, 2022, 10:02 PM IST
ಭಟ್ಕಳ: ತಾಲೂಕಿನ ಮಾವಿನಕುರ್ವೆ ಬಂದರಿನ ಹೊರಭಾಗದ ಕೋಟೆಗುಡ್ಡೆ ಸಮೀಪ ಅರಬ್ಬೀ ಸಮುದ್ರದಲ್ಲಿ ಫಿಶರೀಸ್ ಬೋಟ್‌ವೊಂದು ಮುಳುಗಡೆಯಾಗಿದ್ದು, ಅದರಲ್ಲಿದ್ದವರನ್ನು ರಕ್ಷಿಸಲಾಗಿದೆ.
ಮಲ್ಪೆಯ ತೊಟ್ಟಂ ನಿವಾಸಿ ಸುಂದರ ಕೊಟ್ಯಾನ್ ಎನ್ನುವವರಿಗೆ ಸೇರಿದ ಸಿಹಾನ್ ಹೆಸರಿನ ಫಿಶರೀಸ್ ಬೋಟ್ ಮುಳುಗಡೆಯಾಗಿದ್ದು ಲಕ್ಷಾಂತರ ರೂ. ಹಾನಿಯಾಗಿದೆ ಎನ್ನಲಾಗಿದೆ.
ಎ .3ರಂದು ರಾತ್ರಿ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೊರಟಿದ್ದ ಬೋಟು ಎ.4ರಂದು ಬೆಳಗಿನ ಜಾವ ಭಟ್ಕಳ ತಾಲೂಕಿನ ಕೋಟೆಗುಡ್ಡೆ ಬಳಿ ಬಂದಿದೆ. ಅಲ್ಲಿ ಮೀನು ಹಿಡಿಯುತ್ತಿರುವ ಸಂದರ್ಭ ಬೋಟಿನ ಅಡಿ ಭಾಗಕ್ಕೆ ಯಾವುದೋ ಒಂದು ಬಲವಾದ ವಸ್ತು ಡಿಕ್ಕಿಯಾಗಿದ್ದು, ಬೋಟಿನ ಅಡಿಭಾಗದಲ್ಲಿ ರಂಧ್ರವಾಗಿ ನೀರು ಒಳನುಗ್ಗಿದೆ.
ತಕ್ಷಣ ಬೋಟಿನ ಚಾಲಕ ಅಳ್ವೆಕೋಡಿಯ ರವಿ ನಾಗಪ್ಪ ಮೊಗೇರ ಬೇರೆ ಬೋಟಿನಲ್ಲಿದ್ದವರನ್ನು ಸಂಪರ್ಕಿಸಿ ರಕ್ಷಣೆಗೆ ಕರೆದಿದ್ದಾರೆ. ಬೇರೆ ಬೋಟುಗಳಿಗೆ ಈ ಬೋಟನ್ನು ಕಟ್ಟಿ ದಡಕ್ಕೆ ಎಳೆದುಕೊಂಡು ಬರಲು ಪ್ರಯತ್ನಿಸಲಾಯಿತಾದರೂ ನೀರು ತುಂಬಿದ್ದರಿಂದ ಸಾಧ್ಯವಾಗಿಲ್ಲ ಎನ್ನಲಾಗಿದೆ.
ಬೋಟಿನಲ್ಲಿದ್ದ ಕಲಾಸಿಗಳಾದ ಮೋಹನ, ಮಂಜುನಾಥ, ದೇವೇಂದ್ರ, ರಮೇಶ, ವೆಂಕಟೇಶ ಕಲ್ಲೇಶಿ ಇವರುಗಳನ್ನು ಬೇರೆ ಬೋಟಿನವರು ರಕ್ಷಣೆ ಮಾಡಿದ್ದು ಬೋಟಿನಲ್ಲಿದ್ದ ಕೆಲವು ವಸ್ತುಗಳನ್ನು ರಕ್ಷಿಸಲಾಗಿದೆ. ಈ ಕುರಿತು ಗ್ರಾಮೀಣ ಠಾಣೆ ಪೊಲೀಸರು ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.