ಕಷ್ಟಕಾಲದಲ್ಲಿ ಬೆಲೆ ಏರಿಕೆ ಸಮರ್ಥನೀಯವಲ್ಲ


Team Udayavani, Apr 5, 2022, 6:00 AM IST

ಕಷ್ಟಕಾಲದಲ್ಲಿ ಬೆಲೆ ಏರಿಕೆ ಸಮರ್ಥನೀಯವಲ್ಲ

ಕಲ್ಯಾಣ ರಾಜ್ಯವೆಂದರೆ ಸರಕಾರದ ಮೇಲಿನ ಹೊರೆಯನ್ನು ಜನಸಾಮಾನ್ಯರ ಮೇಲೆ ಹೊರಿಸಿ ತಣ್ಣಗೆ ಕುಳಿತುಕೊಳ್ಳುವುದಲ್ಲ. ಎಲ್ಲವನ್ನೂ ಜನರ ಮೇಲೆ ಹಾಕುವುದಾದರೆ, ಸರ್ಕಾರಗಳಾದರೂ ಏಕೆ ಬೇಕು? ಮೊದಲಿಗೆ ಕೊರೊನಾ, ಉದ್ಯೋಗ ನಷ್ಟ, ನಿರುದ್ಯೋಗ ಸಮಸ್ಯೆ, ಆರ್ಥಿಕ ಸಂಕಷ್ಟಗಳ ಸರಮಾಲೆಯನ್ನೇ ಜನತೆ ಅನುಭವಿಸುತ್ತಿದ್ದಾರೆ. ಈಗಂತೂ ರಷ್ಯಾ-ಉಕ್ರೇನ್‌ ಮೇಲಿನ ದಾಳಿಯೂ ಸೇರಿದಂತೆ ನಾನಾ ನೆಪಗಳನ್ನು ಇರಿಸಿಕೊಂಡು ದಿನದಿಂದ ದಿನಕ್ಕೆ ಪ್ರತಿಯೊಂದು ವಸ್ತುಗಳ ದರ ಏರಿಕೆ ಮಾಡುತ್ತಾ ಹೋದರೆ, ಜನ ಜೀವನ ಸಂಕಷ್ಟಕ್ಕೆ ತುತ್ತಾಗುವುದರಲ್ಲಿ ಯಾವುದೇ ಸಂಶಯ ಇಲ್ಲವೇ ಇಲ್ಲ.

ಕಳೆದ ವರ್ಷದ ನವೆಂಬರ್‌ನಿಂದ ಈ ವರ್ಷದ ಮಾ.15ರ ವರೆಗೆ ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆಯಾಗಿರಲಿಲ್ಲ. ಆದರೆ, ಅನಂತರದ ದಿನಗಳಲ್ಲಿ ತೈಲ ದರ ಏರಿಕೆಯಾಗಿ, ಈಗ ಸರಾಸರಿ ಪ್ರತಿ ಲೀ.ಗೆ 8 ರೂ.ನಷ್ಟು ಹೆಚ್ಚಾಗಿದೆ. ದೇಶದ ಆರ್ಥಿಕತೆಯ ಬಹುತೇಕ ಎಲ್ಲ ವಲಯವೂ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಅವಲಂಬಿತವಾಗಿರುವ ಕಾರಣದಿಂದಾಗಿ ಜನರ ಜೇಬಿಗೆ ಕತ್ತರಿ ಬೀಳುವುದು ಖಚಿತ. ಇದನ್ನೇ ತಡೆದುಕೊಳ್ಳುವುದು ದುಸ್ತರವಾಗಿರುವ ನಡುವೆಯೇ ಈಗ ಕರ್ನಾಟಕದಲ್ಲಿ ವಿದ್ಯುತ್‌ ದರ ಏರಿಕೆ ಮಾಡಿ ಮತ್ತಷ್ಟು ಸಂಕಷ್ಟ ನೀಡಿರುವುದು ಸರ್ವಥಾ ಒಪ್ಪಿಗೆಯಂಥ ಕೆಲಸ ಅಲ್ಲವೇ ಅಲ್ಲ.

ಕೊರೊನಾ ಆರಂಭವಾದ ಮೇಲೆ ದೇಶದ ಜನಸಾಮಾನ್ಯನ ಬದುಕು ಮೂರಾಬಟ್ಟೆಯಾಗಿದೆ. ಮೊದಲೇ ಹೇಳಿದಂತೆ ಸಾವಿರಾರು ಸಣ್ಣಪುಟ್ಟ ಕೈಗಾರಿಕೆಗಳು ಮುಚ್ಚಿವೆ. ಇದನ್ನೇ ಆಶ್ರಯ ಮಾಡಿಕೊಂಡಿದ್ದ ಉದ್ಯೋಗಿಗಳ ಬಾಳು ಬೀದಿಗೆ ಬಿದ್ದಿದೆ. ಇನ್ನೇನು ಕೊರೊನಾ ಕಾಟ ತಪ್ಪುತ್ತಿದೆ ಎಂದುಕೊಳ್ಳುತ್ತಿರುವ ಹೊತ್ತಿಗೆ ರಷ್ಯಾ-ಉಕ್ರೇನ್‌ ನಡುವೆ ಕಾಳಗ ಶುರುವಾಗಿ ಮತ್ತೆ ಸಂಕಷ್ಟಮಯ ವಾತಾವರಣ ಸೃಷ್ಟಿಯಾಗಿದೆ. ಉಕ್ರೇನ್‌ನಿಂದ ಬರುತ್ತಿದ್ದ ಸೂರ್ಯಕಾಂತಿ ಎಣ್ಣೆ ನಿಂತಿದ್ದರಿಂದ, ಈಗ ಪ್ರತಿ ಲೀ.ಗೆ 200 ರೂ. ದಾಟಿದೆ. ಜನಸಾಮಾನ್ಯರು ಬಳಕೆ ಮಾಡುವ ಬಹುತೇಕ ವಸ್ತುಗಳ ಬೆಲೆ ಗಗನಮುಖೀಯಾಗಿದೆ. ತೆಗೆದುಕೊಳ್ಳುತ್ತಿರುವ ವೇತನಕ್ಕೂ, ಮಾಡುತ್ತಿರುವ ವೆಚ್ಚಕ್ಕೂ ತಾಳೆಯೇ ಆಗುತ್ತಿಲ್ಲ. ಮಧ್ಯಮ ವರ್ಗದವರಂತೂ, ಬಳಲಿ ಬೆಂಡಾಗಿ ಹೋಗಿದ್ದಾರೆ.

ಈಗ ರಾಜ್ಯದಲ್ಲಿ ಪ್ರತಿ ಯೂನಿಟ್‌ ವಿದ್ಯುತ್‌ ಮೇಲೆ ಸರಾಸರಿ 35 ಪೈಸೆ ದರ ಏರಿಕೆಯಾಗಿದೆ. ಇದರಿಂದಾಗಿ ಕಡಿಮೆ ಯೂನಿಟ್‌ ಬಳಕೆದಾರರಿಂದ ಹಿಡಿದು, ಹೆಚ್ಚಿನ ಪ್ರಮಾಣದ ಯೂನಿಟ್‌ ಬಳಕೆದಾರರ ಮೇಲೆ ಭಾರೀ ಪ್ರಮಾಣದ ಪೆಟ್ಟು ಬೀಳಲಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ನಂತೆಯೇ ಎಲ್ಲರೂ ವಿದ್ಯುತ್‌ ಮೇಲೆಯೇ ಅವಲಂಬಿತರಾಗಿರುವುದರಿಂದ ಇದಕ್ಕೆ ಪೂರಕವಾದ ವಸ್ತುಗಳ ದರವೂ ಏರುವ ಎಲ್ಲ ಸಾಧ್ಯತೆಗಳೂ ಇವೆ. ಹಾಗೆಯೇ ಮಧ್ಯಮ ವರ್ಗದ ಮಂದಿ ಮತ್ತೆ ತಮ್ಮ ಖರ್ಚು ವೆಚ್ಚಗಳನ್ನು ಸರಿದೂಗಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದ್ದಾನೆ. ಇದರ ನಡುವೆಯೇ ಬೆಂಗಳೂರಿನಲ್ಲಿ ಹೊಟೆಧೀಲ್‌ಗಳಲ್ಲಿನ ಆಹಾರ ದರ ಶೇ.10ರಷ್ಟು ಏರಿಕೆ ಯಾಗಿದೆ. ಎಲ್ಲ ಏರಿಕೆಗಳ ನಡುವೆ ಜನಸಾಮಾನ್ಯ ಬಾಳುವುದು ಹೇಗೆ ಎಂಬ ಬಗ್ಗೆ ಸರಕಾರಗಳು ಗಂಭೀರವಾಗಿ ಚಿಂತಿಸಬೇಕಾದ ಅಗತ್ಯವಿದೆ. ಇಂಥ ಕಷ್ಟದ ಹೊತ್ತಲ್ಲಿಯೂ ವಿದ್ಯುತ್‌ ದರ ಏರಿಕೆ ಮಾಡುವುದು ಬೇಕಿತ್ತೇ ಎಂದು ಪರಿಶೀಲನೆ ನಡೆಸುವುದು ಮುಖ್ಯ.

ಟಾಪ್ ನ್ಯೂಸ್

NS2

Stock Market: ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಏರಿಕೆ, ನಿಫ್ಟಿ ಜಿಗಿತ

INDvsBAN: Bangladesh team in fear of ICC punishment

INDvsBAN: ಟೆಸ್ಟ್‌ ಮೊದಲ ದಿನವೇ ಪ್ರಮಾದ; ಐಸಿಸಿ ಶಿಕ್ಷೆಯ ಭಯದಲ್ಲಿ ಬಾಂಗ್ಲಾದೇಶ ತಂಡ

Labanon: ಲೆಬನಾನ್‌ ಪ್ರಯಾಣಿಕರು ಪೇಜರ್ಸ್‌, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್‌ ಏರ್‌ ವೇಸ್

Labanon: ಲೆಬನಾನ್‌ ಪ್ರಯಾಣಿಕರು ಪೇಜರ್ಸ್‌, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್‌ ಏರ್‌ ವೇಸ್

Thirthahalli: ಮರವೇರಿ ಕುಳಿತ್ತಿದ್ದ ಹೆಬ್ಬಾವು… ಸ್ಥಳೀಯರಿಂದ ರಕ್ಷಣೆ

Thirthahalli: ಮರವೇರಿ ಕುಳಿತ 13 ಅಡಿ ಉದ್ದದ ಹೆಬ್ಬಾವು… ಸ್ಥಳೀಯರಿಂದ ರಕ್ಷಣೆ

3-bng

Bengaluru: ನಗರದಲ್ಲಿ 3 ವರ್ಷದಲ್ಲಿ 9700 ಮರಗಳ ಹನನ

ನಟಿಯಾಗುವ ಕನಸು ಕಂಡಿದ್ದ ದ್ರುವಿ ಪಟೇಲ್ ಗೆ ‘ಮಿಸ್ ಇಂಡಿಯಾ ವರ್ಲ್ಡ್‌ವೈಡ್ 2024’ ಕಿರೀಟ

ನಟಿಯಾಗುವ ಕನಸು ಕಂಡಿದ್ದ ಧ್ರುವಿ ಪಟೇಲ್ ಗೆ ‘Miss India Worldwide 2024’ ಕಿರೀಟ

Hagga Movie: ʼಹಗ್ಗʼವೇ ಆಯುಧ; ಅನುಕ್ಷಣ ಹಾರರ್

Hagga Movie: ʼಹಗ್ಗʼವೇ ಆಯುಧ; ಅನುಕ್ಷಣ ಹಾರರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Assembly Election: ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ಹಬ್ಬ

Assembly Election: ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ಹಬ್ಬ

Namma-clinic

Karnataka; ಬಸ್‌ ನಿಲ್ದಾಣಗಳಲ್ಲಿ ನಮ್ಮ ಕ್ಲಿನಿಕ್‌ ಸಮುಚಿತ ನಿರ್ಧಾರ

ರೈತರ ಹಿತರಕ್ಷಣೆ ನೆಪದಲ್ಲಿ ಗ್ರಾಹಕರಿಗೆ ಬರೆ ಸಲ್ಲದು

ರೈತರ ಹಿತರಕ್ಷಣೆ ನೆಪದಲ್ಲಿ ಗ್ರಾಹಕರಿಗೆ ಬರೆ ಸಲ್ಲದು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

8-bng

Bengaluru: ಉದ್ಯಮಿಗೆ ಹನಿಟ್ರ್ಯಾಪ್‌ ಆರೋಪ: ಪೊಲೀಸರಿಂದ ಶೀಘ್ರ ಬಿ ರಿಪೋರ್ಟ್‌  

7-bng

Bengaluru: ರಾಮಯ್ಯ ಆಸ್ಪತ್ರೆಯಲ್ಲಿ ಅಗ್ನಿ ಆಕಸ್ಮಿಕ: ಸಿಬ್ಬಂದಿಗೆ ಗಾಯ

6-bng

Bengaluru: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 23 ಲಕ್ಷ ರೂ. ವಂಚನೆ!

NS2

Stock Market: ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಏರಿಕೆ, ನಿಫ್ಟಿ ಜಿಗಿತ

Karki kananda movie

Karki Movie: ಹಳ್ಳಿ ಹುಡುಗನ ಹೋರಾಟದ ಹಾದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.