ಸಕಾಲದಲ್ಲಿ “ತತ್ಕಾಲ್ ಸೇವೆ’ಗೆ ಚಿಂತನೆ: ಸಚಿವ ನಾಗೇಶ್
Team Udayavani, Apr 5, 2022, 7:00 AM IST
ಬೆಂಗಳೂರು: ನಿಗದಿತ ಕಾಲಮಿತಿಯಲ್ಲಿ ಸರಕಾರಿ ಸೇವೆಗಳನ್ನು ನೀಡುವ ಸಕಾಲ ಯೋಜನೆಯಡಿ “ತತ್ಕಾಲ್ ಸೇವೆ’ಯನ್ನು ಜಾರಿಗೊಳಿಸುವ ಚಿಂತನೆ ನಡೆದಿದೆ ಎಂದು ಸಕಾಲ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಪ್ರಸ್ತುತ ಸಕಾಲ ಯೋಜನೆಯಡಿ ರಾಜ್ಯ ಸರಕಾರದ 99 ಇಲಾಖೆಗಳ 1,115 ಸೇವೆಗಳನ್ನು ನೀಡಲಾಗುತ್ತಿದೆ. ಪ್ರತೀ ಸೇವೆಗೂ ಕಾಲಮಿತಿ ನಿಗದಿ ಮಾಡಲಾಗಿದೆ. ಆದರೆ ಕೆಲವು ಸಂದರ್ಭಗಳಲ್ಲಿ ಅರ್ಜಿದಾರರಿಗೆ ತುರ್ತಾಗಿ ಒಂದೆರಡು ದಿನಗಳಲ್ಲಿ ದಾಖಲೆ, ಪ್ರಮಾಣಪತ್ರಗಳು ಬೇಕಾಗುತ್ತವೆ. ಅಂತಹ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ತತ್ಕಾಲ್ ಸೇವೆಯನ್ನು ಜಾರಿಗೊಳಿಸಲು ಚಿಂತನೆ ನಡೆಸಲಾಗುತ್ತಿದೆ. ಈ ಸಂಬಂಧ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಸಕಾಲ ದಶಮಾನೋತ್ಸವ ಪ್ರಯುಕ್ತ ನವೀಕೃತ ಸಕಾಲ ವೆಬ್‌ಸೈಟ್ ಲೋಕಾರ್ಪಣೆಗೊಳಿಸಿ ಅವರು ಹೇಳಿದ್ದಾರೆ.
ಇದನ್ನೂ ಓದಿ: ದೇಶಾದ್ಯಂತ ಅಂಗನವಾಡಿ ಅಭಿವೃದ್ಧಿಗೆ ಕ್ರಮ: ಸಚಿವೆ ಸ್ಮತಿ ಇರಾನಿ
ಸಕಾಲದಡಿ 10 ವರ್ಷಗಳಲ್ಲಿ 26.56 ಕೋಟಿ ಅರ್ಜಿಗಳು ಬಂದಿದ್ದು, 26.41 ಕೋಟಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಸರಕಾರಿ ಅಧಿಕಾರಿ, ಸಿಬಂದಿ ಅನಗತ್ಯ ವಿಳಂಬ ಮಾಡದೆ ಅರ್ಜಿ ವಿಲೇವಾರಿ ಮಾಡಬೇಕು. ಕಾಲಮಿತಿಯಲ್ಲಿ ಸೇವೆ ಒದಗಿಸದಿದ್ದರೆ ಕಾರಣ ತಿಳಿಸುವ ವ್ಯವಸ್ಥೆ ಜಾರಿಗೆ ತರಬೇಕೆನ್ನುವ ಉದ್ದೇಶವಿದೆ ಎಂದೂ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.