ಖಾಸಗಿ ಕಂಪನಿ ವಶದಲ್ಲಿದೆ ಸರ್ಕಾರಿ ಜಮೀನು

Team Udayavani, Apr 6, 2022, 2:40 PM IST

Untitled-1

ಮುಳಬಾಗಿಲು: ತಾಲೂಕಿನಲ್ಲಿ ಕಳೆದ ಐದು ವರ್ಷಗಳ ಹಿಂದೆ ಖಾಸಗೀ ಕಂಪನಿಯೊಂದು ಸೋಲಾರ್‌ ವಿದ್ಯುತ್‌ ಘಟಕ ನಿರ್ಮಾಣ ನೆಪದಲ್ಲಿ 60 ಎಕರೆ ಸರ್ಕಾರಿ ಜಮೀನನ್ನು ಅಕ್ರಮವಾಗಿ ವಶಪಡಿಸಿಕೊಂಡಿ ದ್ದರೂ, ತಾಲೂಕು ಆಡಳಿತ ಇದುವರೆಗೂ ತೆರವು ಗೊಳಿಸಿರುವುದಿಲ್ಲ. ಆದ್ದರಿಂದ ಶೀಘ್ರವಾಗಿ ಸರ್ಕಾರಿ ಜಮೀ ನನ್ನು ವಶ ಪಡಿಸಿಕೊಳ್ಳದೇ ಇದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಒತ್ತಾಯಿಸಿದರು.

ನಗರದ ಸರ್ಕಾರಿ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಾರಾದರೂ ಬಡ ರೈತರು ತಮ್ಮ ಜೀವನ ನಿರ್ವಹಣೆಗಾಗಿ ಸ್ವಲ್ಪ ಜಮೀನನ್ನು ಒತ್ತುವರಿ ಮಾಡಿಕೊಂಡರೆ ಒತ್ತುವರಿ ತೆರವುಗೊಳಿಸುವ ಕಂದಾಯ ಇಲಾಖೆ ಅಧಿಕಾರಿಗಳು, ಇತ್ತ ಮುಂಬೈನ ಆದಿತ್ಯಾ ಬಿರಾÉ ಗ್ರೂಪ್ಸ್‌ ಕಂಪನಿ ಮತ್ತು ಆಂಧ್ರದ ಕರ್ನೂಲು ಮೂಲದ ಸೋಲಾರ್‌ ಕಿಂಗ್‌ ಇಂಡಿಯಾ ಕಂಪನಿ ಕಪಟತನದಿಂದ ಕೋಟ್ಯಂತರ ರೂ. ಬೆಲೆ ಬಾಳುವ 75ಎಕರೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆಂದು ಆರೋಪಿಸಿದರು.

ಕ್ರೆಡಲ್‌ನಿಂದ ಟೆಂಡರ್‌: 2016ರಲ್ಲಿ ಮುಂಬೈನ ಆದಿತ್ಯಾ ಬಿರ್ಲಾ ಗ್ರೂಪ್ಸ್‌ ಕಂಪನಿ ಮುಳಬಾಗಿಲು ತಾಲೂಕಿನಲ್ಲಿ 20 ಮೆ.ವ್ಯಾ ಸೋಲಾರ್‌ ವಿದ್ಯುತ್‌ ಉತ್ಪಾದಿಸಿ ಸರಬರಾಜು ಮಾಡಲು ಕ್ರೆಡಲ್‌ನಿಂದ ಟೆಂಡರ್‌ ಪಡೆದಿತ್ತು. ಆದರೆ, ಕಂಪನಿ ಯಾವುದೇ ನಿಖರವಾದ ಗ್ರಾಮ ಮತ್ತು ಸರ್ವೆ ನಂಬರ್‌ ಜಮೀನಿ ನಲ್ಲಿ ಸೋಲಾರ್‌ ಘಟಕ ನಿರ್ಮಾಣ ಮಾಡುವುದಾಗಿ ಮಾಹಿತಿ ನೀಡದೇ ಉತ್ಪಾದಿಸಿದ ಸೋಲಾರ್‌ ವಿದ್ಯುತ್ತನ್ನು ಬೈರಕೂರು ಸಬ್‌ಸ್ಟೇಷನ್‌ಗೆ ಸರಬರಾಜು ಮಾಡಲು 7 ಕಿ.ಮೀ ದೂರದ ತಂತಿ ಹಾಕಲು ಅನುಮತಿ ಪಡೆದಿದ್ದರು. ಅದರಂತೆ ಸದರಿ ಕಂಪನಿ 2017ರಲ್ಲಿ ಬೈರಕೂರು ಹೋಬಳಿ ಪುಣ್ಯಹಳ್ಳಿ ಗ್ರಾಮದ ಪಕ್ಕದಲ್ಲಿ ಸೋಲಾರ್‌ ವಿದ್ಯುತ್‌ ಘಟಕ ನಿರ್ಮಾಣಕ್ಕೆ ಚಿಂತಿಸಿ, ಘಟಕ ನಿರ್ಮಾಣದ ಗುತ್ತಿಗೆಯನ್ನು ಆಂಧ್ರದ ಕರ್ನೂಲು ಮೂಲದ ಸೋಲಾರ್‌ ಕಿಂಗ್‌ ಇಂಡಿಯಾ ಕಂಪನಿಗೆ ನೀಡಿದ್ದರು ಎಂದರು.

ಸರ್ಕಾರದ ಅನುಮತಿ ಪಡೆದಿಲ್ಲ: ಸೋಲಾರ್‌ ಕಿಂಗ್‌ ಇಂಡಿಯಾ ಕಂಪನಿ ತಾಲೂಕಿನ ಪುಣ್ಯಹಳ್ಳಿ ಸ.ನಂ. 116 ಮತ್ತು 117ರ ಎರಡೂ ಸರ್ವೆ ನಂಬರ್‌ಗಳಲ್ಲಿನ 60 ಎಕರೆ ಸರ್ಕಾರಿ ಜಮೀನು ಸೇರಿ ಪ.ಜಾತಿ, ವರ್ಗಗಳ ರೈತರಿಗೆ ಮಂಜೂರಾಗಿದ್ದ ಖುಷ್ಕಿ ಜಮೀ ನನ್ನು ರೈತರಿಂದ ಜಿಪಿಎ ಮೂಲಕ ಪಡೆದಿದ್ದು, ದಲಿತ ರೈತರಿಂದ ಜಮೀನು ಕೊಂಡುಕೊಳ್ಳಲು ಸರ್ಕಾರ ದಿಂದ ಅನುಮತಿ ಪಡೆಯದೇ, ಪಡೆದುಕೊಂಡ ಜಮೀನು ಭೂ ಪರಿವರ್ತನೆ ಮಾಡಿಸದೇ ಸರ್ಕಾರದ ನೀತಿ ನಿಯಮ ಗಾಳಿಗೆ ತೂರಿ ಬಹುತೇಕ ಸೋಲಾರ್‌ ಘಟಕ ನಿರ್ಮಾಣ ಮಾಡಿ ದ್ದರು. ಆದರೆ, ಅಂದಿನ ಇಂಧನ ಇಲಾ ಖೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಅವರ ಆದೇಶ ಸಂಖ್ಯೆ: ಇ.ಎನ್‌.70ವಿಎಸ್‌ ಸಿ2015, ದಿ.22/7/2016 ಆದೇಶದಂತೆ ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಸೋಲಾರ್‌ ಘಟಕ ನಿರ್ಮಾಣಕ್ಕೆ ತಡೆಯೊಡ್ಡಿ ಸದರಿ ಸ್ಥಳದಿಂದ ಸಂಪೂರ್ಣವಾಗಿ ತೆರವುಗೊಳಿಸಲು ಆದೇಶಿಸಿದ್ದರೆಂದರು.

ಅಂದಿನ ತಹಶೀಲ್ದಾರ್‌ ಬಿ.ಎನ್‌.ಪ್ರವೀಣ್‌ ನಂಗಲಿ ಪೊಲೀಸರ ಸಹಕಾರದೊಂದಿಗೆ ನಿರ್ಮಾಣ ಗೊಂಡಿದ್ದ ಸೋಲಾರ್‌ ಘಟಕವನ್ನು ಜೆಸಿಬಿಗಳಿಂದ ತೆರವುಗೊಳಿಸಿದ್ದರು. ಆದರೆ, ಆ ಸಂದರ್ಭದಲ್ಲಿ ಸದರಿ ಕಿಂಗ್‌ ಸೋಲಾರ್‌ ಇಂಡಿಯಾ ಕಂಪನಿ ಒತ್ತುವರಿ ಮಾಡಿಕೊಂಡಿರುವ 60 ಎಕರೆ ಸರ್ಕಾರಿ ಜಮೀನು ಇಂದಿಗೂ ಆದಿತ್ಯ ಬಿರ್ಲಾ ಗ್ರೂಪ್‌ ಅಧೀನದಲ್ಲಿಯೇ ಇದ್ದು, ಇದುವರೆಗೂ ತಾಲೂಕು ಆಡಳಿತ ತೆರವುಗೊಳಿಸಿ ವಶಕ್ಕೆ ಪಡೆದುಕೊಂಡಿರುವುದಿಲ್ಲ ಎಂದು ಆರೋಪಿಸಿದರು.

ಸರ್ಕಾರಿ ಜಮೀನು ಒತ್ತುವರಿ ತೆರವು ಕಾರ್ಯಾಚರಣೆ ತಮಗೆ ಸಂಬಂಧಿಸಿ ದ್ದಲ್ಲ. ಅದು ರಾಜಸ್ವ ನಿರೀಕ್ಷಕರ ವಿಚಾರ. ಈ ವಿಚಾರವಾಗಿ ತಾಲೂಕು ಕಚೇರಿ ಅಧಿಕಾರಿಗಳು ಏನು ಮಾಡಿದ್ದಾರೋ ನಮಗೆ ಗೊತ್ತಿಲ್ಲ. -ಡಿ.ಟಿ.ವೆಂಕಟೇಶಯ್ಯ, ಉಪ ತಹಶೀಲ್ದಾರ್‌, ಬೈರಕೂರು ನಾಡಕಚೇರಿ

ಈ ಕುರಿತು ತಮಗೆ ಮಾಹಿತಿ ಇಲ್ಲ. ತಹಶೀಲ್ದಾರ್‌ ಅವರೊಂದಿಗೆ ಚರ್ಚಿಸಿ, ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು. -ವೆಂಕಟ್‌ರಾಜಾ, ಜಿಲ್ಲಾಧಿಕಾರಿ

ಟಾಪ್ ನ್ಯೂಸ್

ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್‌

Firing; ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್‌

‌INDvsBAN; ಬಸವಳಿದ ಬಾಂಗ್ಲಾ ಎದುರು ಪಂತ್-ಗಿಲ್‌ ಸೂಪರ್‌ ಶತಕ; ಡಿಕ್ಲೇರ್ ಘೋಷಿಸಿದ ಭಾರತ

‌INDvsBAN; ಬಸವಳಿದ ಬಾಂಗ್ಲಾ ಎದುರು ಪಂತ್-ಗಿಲ್‌ ಸೂಪರ್‌ ಶತಕ; ಡಿಕ್ಲೇರ್ ಘೋಷಿಸಿದ ಭಾರತ

Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು

Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು

Parvin Dabas: ಬಾಲಿವುಡ್ ನಟ ಪರ್ವಿನ್ ದಾಬಾಸ್ ಕಾರು ಅಪಘಾತ… ಐಸಿಯುನಲ್ಲಿ ಚಿಕಿತ್ಸೆ

Parvin Dabas: ಬಾಲಿವುಡ್ ನಟ ಪರ್ವಿನ್ ದಾಬಾಸ್ ಕಾರು ಅಪಘಾತ… ಐಸಿಯುನಲ್ಲಿ ಚಿಕಿತ್ಸೆ

Upendra: ‘ಭಗವಂತನೇ ಈ ಸಿನಿಮಾ ಮಾಡ್ಸಿದಾನೆ..’: ‘ಉಪೇಂದ್ರ’ ನೋಡಿ ಉಪೇಂದ್ರ ಭಾವುಕ

Upendra: ‘ಭಗವಂತನೇ ಈ ಸಿನಿಮಾ ಮಾಡ್ಸಿದಾನೆ..’: ‘ಉಪೇಂದ್ರ’ ನೋಡಿ ಉಪೇಂದ್ರ ಭಾವುಕ

Artificial Intelligence: ಕೃತಕ ಬುದ್ಧಿಮತ್ತೆ ಕ್ರಾಂತಿ- ಹೊಸ ಸಂಗಾತಿ ಹೊಸ ಅವಕಾಶ!

Artificial Intelligence: ಕೃತಕ ಬುದ್ಧಿಮತ್ತೆ ಕ್ರಾಂತಿ- ಹೊಸ ಸಂಗಾತಿ ಹೊಸ ಅವಕಾಶ!

Mangaluru: ಶೋಷಣೆ ಎಲ್ಲ ರಂಗದಲ್ಲೂ ಇದೆ: ಡಾ| ಗುರುಕಿರಣ್‌

Mangaluru: ಶೋಷಣೆ ಎಲ್ಲ ರಂಗದಲ್ಲೂ ಇದೆ: ಡಾ| ಗುರುಕಿರಣ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kolar: ಹಕ್ಕಿಪಿಕ್ಕಿ ಕಾಲೋನಿ ಮಕ್ಕಳಿಗೆ ಅಕ್ಕಿ,ಮೊಟ್ಟೆ ಕೊಟ್ಟಿಲ್ಲ!

Kolar: ಹಕ್ಕಿಪಿಕ್ಕಿ ಕಾಲೋನಿ ಮಕ್ಕಳಿಗೆ ಅಕ್ಕಿ,ಮೊಟ್ಟೆ ಕೊಟ್ಟಿಲ್ಲ!

Kolar ಗುಂಪು ಘರ್ಷಣೆ: ಮಾರಕಾಸ್ತ್ರಗಳಿಂದ ಹಲ್ಲೆ

Kolar ಗುಂಪು ಘರ್ಷಣೆ: ಮಾರಕಾಸ್ತ್ರಗಳಿಂದ ಹಲ್ಲೆ

10

Lok Adalat: ವಿಚ್ಛೇದನಕ್ಕೆ ಬಂದಿದ್ದ ದಂಪತಿ, ಅದಾಲತ್‌ನಲ್ಲಿ ಒಂದಾದರು!

Kolar: ಜಿಲ್ಲೆಯಲ್ಲಿ ದಿಢೀರ್‌ ಸದ್ದು ಮಾಡಿದ ಡಿಜೆ!

Kolar: ಜಿಲ್ಲೆಯಲ್ಲಿ ದಿಢೀರ್‌ ಸದ್ದು ಮಾಡಿದ ಡಿಜೆ!

High-Court

Kolar: ಬಾಲಕಿಯರ ಖಾಸಗಿ ಫೋಟೋ ತೆಗೆದ ಶಿಕ್ಷಕ; ಪ್ರಕರಣ ರದ್ದುಪಡಿಸಲು ಹೈಕೋರ್ಟ್‌ ನಕಾರ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್‌

Firing; ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್‌

‌INDvsBAN; ಬಸವಳಿದ ಬಾಂಗ್ಲಾ ಎದುರು ಪಂತ್-ಗಿಲ್‌ ಸೂಪರ್‌ ಶತಕ; ಡಿಕ್ಲೇರ್ ಘೋಷಿಸಿದ ಭಾರತ

‌INDvsBAN; ಬಸವಳಿದ ಬಾಂಗ್ಲಾ ಎದುರು ಪಂತ್-ಗಿಲ್‌ ಸೂಪರ್‌ ಶತಕ; ಡಿಕ್ಲೇರ್ ಘೋಷಿಸಿದ ಭಾರತ

Mahalingapura: ಗಮನ ಸೆಳೆದ ಮಹಾಲಿಂಗೇಶ್ವರ ಜಾತ್ರೆಯ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ…

Mahalingapura: ಗಮನ ಸೆಳೆದ ಮಹಾಲಿಂಗೇಶ್ವರ ಜಾತ್ರೆಯ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ…

Desi Swara: ಮೊಂತಿ ಆಚರಣೆ- ವರ್ಷದ ಮೊದಲ ಸುಗ್ಗಿ ಸಂಭ್ರಮ

Desi Swara: ಮೊಂತಿ ಆಚರಣೆ- ವರ್ಷದ ಮೊದಲ ಸುಗ್ಗಿ ಸಂಭ್ರಮ

Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು

Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.