ಜೇನು ಕಚ್ಚಿ ವ್ಯಕ್ತಿ ಸಾವು; 8 ಮಂದಿ ಗಂಭೀರ ಗಾಯ
Team Udayavani, Apr 6, 2022, 8:24 PM IST
ಸಾಂದರ್ಭಿಕ ಚಿತ್ರ.
ಸಕಲೇಶಪುರ: ಜೇನುಹುಳುಗಳ ಹಿಂಡೊಂದು ಕಚ್ಚಿದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟರೆ ಏಳೆಂಟು ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನಲ್ಲಿ ತಾಲೂಕಿನ ಬೆಳಗೋಡು ಹೋಬಳಿಯ ಗುಲಗಳಲೆ ಗ್ರಾಮದಲ್ಲಿ ನಡೆದಿದೆ.
ಪಟ್ಟಣದ ರಾಘವೇಂದ್ರ ನಗರ ಬಡಾವಣೆ ನಿವಾಸಿ ಚಂದ್ರು (70) ಮೃತ ಪಟ್ಟ ದುರ್ದೈವಿಯಾಗಿದ್ದಾರೆ .
ಗುಲಗಳಲೆ ಗ್ರಾಮದ ಸಂಬಂಧಿಕರೋರ್ವರ ತೋಟದಲ್ಲಿ ಕೃಷಿ ಕೆಲಸ ಮಾಡಿಕೊಂಡು ಹಿಂತಿರುಗಿ ಬರುವಾಗ ಜೇನಿನ ಹಿಂಡೊಂದು ದಾಳಿ ನಡೆಸಿದ್ದು ಈ ಸಂಧರ್ಭದಲ್ಲಿ ಜೊತೆಗಿದ್ದ ಅವರ ಪತ್ನಿ ಸುಲೋಚನಾ ಹಾಗೂ ಅವರ ತಂಗಿ ಪಾರ್ವತಿ ಎಂಬುವರು ಸಹ ಗಂಭೀರ ಗಾಯಗೊಂಡು ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ:ನೈಸರ್ಗಿಕ ಜೀವಸಂಕುಲ ಮರೆತು ಅಂಜನಾದ್ರಿಗಾಗಿ ಸಾವಿರ ಎಕರೆ ಭೂಮಿ ಸ್ವಾಧೀನಕ್ಕೆ ಸಿದ್ಧತೆ?
ಗುಲಗಳಲೆ ಗ್ರಾಮದ ಶಿವಾನಂದ್ ಹಾಗೂ ಅಜೀಜ್ ಎಂಬುವರು ಸಹ ಜೇನುಹುಳದ ದಾಳಿಯಿಂದ ಗಾಯಗೊಂಡಿದ್ದಾರೆ.ಸಾವಿರಾರು ಜೇನುನೊಣಗಳು ದಾಳಿ ನಡೆಸಿದ್ದು ಈ ಸಂದರ್ಭದಲ್ಲಿ ಅಕ್ಕಪಕ್ಕದ ಮನೆಯವರು ಬಾಗಿಲು ಹಾಕಿಕೊಂಡಿದ್ದರಿಂದ ಜೇನುಹುಳಗಳ ದಾಳಿಯಿಂದ ರಕ್ಷಣೆ ಪಡೆಯಲು ಸಾಧ್ಯವಾಗಿಲ್ಲ. ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ
Devi Temple: ಹಾಸನಾಂಬೆ ದೇವಿ ದರ್ಶನ ಅವ್ಯವಸ್ಥೆ, ಭಕ್ತರ ಆಕ್ರೋಶ: ವಿಶೇಷ ಪಾಸ್ ರದ್ದು
Hasanambe Temple: ಇಂಥ ಹಲವು ಡಿಸಿಗಳನ್ನು ನೋಡಿದ್ದೇನೆ: ಎಚ್.ಡಿ.ರೇವಣ್ಣ ಕಿಡಿ
Party Clean: ಹೊಂದಾಣಿಕೆ ರಾಜಕಾರಣ ಮಾಡೋರಿಗೆ ಬಿಜೆಪಿಯಿಂದ ಗೇಟ್‌ಪಾಸ್: ಬಿ.ವೈ.ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.