ರೈಲ್ವೇ ಮೇಲ್ಸೇತುವೆಯಲ್ಲಿ ಪೈಪ್ ಅಳವಡಿಕೆ
ಆಕ್ಷೇಪ ಸುಗಮ ವಾಹನ ಸಂಚಾರಕ್ಕೆ ಮತ್ತಷ್ಟು ತೊಡಕು
Team Udayavani, Apr 7, 2022, 10:41 AM IST
ಕುಂದಾಪುರ: ಬಹುತೇಕ ಎಲ್ಲ ಕಡೆಗಳಲ್ಲಿ ರೈಲ್ವೇ ಮೇಲ್ಸೇತುವೆ ಕಿರಿದಾಗಿದ್ದು, ಎರಡು ಘನ ವಾಹನಗಳು ಸಂಚರಿಸಲು ಆಗದಷ್ಟು ಕಿರಿದಾಗಿರುತ್ತವೆ. ಅದರಲ್ಲೂ ಪೈಪ್‌ಗಳನ್ನು ಅಳವಡಿಸಿದರೆ, ಸುಗಮ ವಾಹನ ಸಂಚಾರಕ್ಕೆ ಮತ್ತಷ್ಟು ತೊಡಕಾಗಲಿವೆ. ಇಂತದ್ದೆ ಸಮಸ್ಯೆ ಈಗ ತಲ್ಲೂರು ಸಮೀಪ ಹಾಗೂ ಕಾಳಾವರ ಸಮೀಪದ ರೈಲ್ವೇ ಮೇಲ್ಸೇತುವೆಯಲ್ಲಿ ಕಾಣಿಸಿಕೊಂಡಿದ್ದು, ಇದೀಗ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ತಲ್ಲುರು – ನೇರಳಕಟ್ಟೆ ಮುಖ್ಯ ರಸ್ತೆಯ ಹಟ್ಟಿಯಂಗಡಿಗಿಂತ ತುಸು ಹಿಂದಿರುವ ರೈಲ್ವೇ ಮೇಲ್ಸೇತುವೆಯಲ್ಲಿ ಖಾಸಗಿ ಒಡೆತನದ ನೆಟ್ವರ್ಕ್ ಸಂಪರ್ಕಿಸುವ ಪೈಪ್‌ಲೈನ್‌ಗಳನ್ನು ಅಳವಡಿಸಲಾಗಿದೆ. ಇನ್ನು ಕೋಟೇಶ್ವರ – ಹಾಲಾಡಿ ರಸ್ತೆಯ ಕಾಳಾವರ ಸಮೀಪದ ಸಳ್ವಾಡಿ ಬಳಿಯ ರೈಲ್ವೇ ಮೇಲ್ಸೇತುವೆಯಲ್ಲಿಯೂ ಇದೇ ರೀತಿ ಪೈಪ್ ಅಳವಡಿಸಲಾಗಿದೆ.
ಮೊದಲೇ ರೈಲ್ವೇ ಮೇಲ್ಸೇತುವೆ ಕಿರಿದಾಗಿದ್ದು, ಅದರಲ್ಲಿ ಮತ್ತೆ ಇಂತಹ ಪೈಪ್‌ಗಳನ್ನು ಹಾಕಿದರೆ ಹೇಗೆ ಎನ್ನುವ ಪ್ರಶ್ನೆ ಸಾರ್ವಜನಿಕರದ್ದಾಗಿದೆ. ಪೈಪ್ ಹಾಕಿದ್ದಕ್ಕೆ ಆಕ್ಷೇಪವಲ್ಲ. ಆದರೆ ರಸ್ತೆ ಕಡೆಯ ಮೇಲ್ಸೇತುವೆಯಲ್ಲಿ ಪೈಪ್ ಹಾಕುವ ಬದಲು, ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಬಹುದಿತ್ತು ಎನ್ನುವ ಅಭಿಪ್ರಾಯ ವಾಹನ ಸವಾರರು ಹಾಗೂ ಈ ಭಾಗದ ನಾಗರಿಕರದ್ದಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.