ಸ್ವಚ್ಛ ಸರ್ವೇಕ್ಷಣೆ; ಅಭಿಪ್ರಾಯ ದಾಖಲಿಸಿ ಮಂಗಳೂರು ಗೆಲ್ಲಿಸಿ
Team Udayavani, Apr 7, 2022, 11:35 AM IST
ಲಾಲ್‌ಬಾಗ್: ಇದು ನಮ್ಮ ಮಂಗಳೂರು ! ಪ್ರತಿಭೆ, ಪರಿಶ್ರಮಗಳೆರಡರಿಂದಲೂ ಜಗದ್ವಿಖ್ಯಾತ ವಾಗಿರುವ ಊರು. ಈಗ ಸ್ವಚ್ಛತೆಯಲ್ಲೂ ಅಂಥದ್ದೇ ಒಂದು ಮೈಲಿಗಲ್ಲು ತಲುಪಬಹುದಾದ ಅವಕಾಶ ನಮ್ಮೆದುರಿಗಿದೆ.
ಪ್ರತಿ ವರ್ಷವೂ ಕೇಂದ್ರ ನಗರಾ ಭಿವೃದ್ಧಿ ಇಲಾಖೆಯ ಪೌರಾಡಳಿತ ನಿರ್ದೇಶನಾಲಯ ‘ಸ್ವಚ್ಛ ಸರ್ವೇ ಕ್ಷಣಾ’ ಸಮೀಕ್ಷೆ ನಡೆಸುತ್ತದೆ. ಅದು ಆನ್ ಲೈನ್ ಮೂಲಕ ನಡೆಯುವ ಸಮೀಕ್ಷೆ. ಇದರಲ್ಲಿ ಪಾಲ್ಗೊಳ್ಳ ಬೇಕಾದವರು ಸ್ವತಃ ನಾಗರೀಕರೇ.
ಸ್ವತಂತ್ರ ಪರಿಶೀಲನ ತಂಡ ಬಂದು ಪರಿಶೀಲಿಸುವುದಲ್ಲದೇ, ನಾಗರಿಕರು ನೀಡುವ ಅಭಿಪ್ರಾಯಕ್ಕೆ ವಿಶೇಷ ಮನ್ನಣೆ ಇದೆ. ಹಾಗಾಗಿಯೇ ಪ್ರತಿಯೊಬ್ಬರೂ ಈ ಸಮೀಕ್ಷೆಯಲ್ಲಿ ಪಾಲ್ಗೊಂಡು ಧನಾತ್ಮಕ ಅಭಿಪ್ರಾಯ ನೀಡಬೇಕೆಂಬುದು ಮಹಾನಗರ ಪಾಲಿಕೆಯ ಮನವಿ. ದೇಶಾದ್ಯಂತ ನಗರ ಸ್ವಚ್ಛತಾ ಪರಿಕಲ್ಪನೆ ಯಲ್ಲಿ ನಡೆಯಲಿರುವ ನಗರದ ‘ಸ್ವಚ್ಛ ಸರ್ವೇಕ್ಷಣಾ -2022′ ಕ್ಕೆ ಮಂಗಳೂರು ಪರ ಎ. 12 ರೊಳಗೆ ನಿಮ್ಮ ಅಭಿಪ್ರಾಯಗಳನ್ನು ಸಂಬಂಧಪಟ್ಟ ಆ್ಯಪ್ ಮೂಲಕ ನೀಡಬಹುದಾಗಿದೆ. ವಾಸಯೋಗ್ಯ ನಗರ ಹಾಗೂ ತಮ್ಮ ನೆರೆಹೊರೆಯಲ್ಲಿ ಸ್ವಚ್ಛತೆ ಸಾಧಿಸುವಲ್ಲಿ ತಮ್ಮ ನಗರದ ಪ್ರಗತಿ ಕುರಿತು ನೀವು ಅಭಿಪ್ರಾಯ ನೀಡಬೇಕು.
ಏನು ಮಾಡಬೇಕು?
ಸ್ವಚ್ಛತಾ ಆ್ಯಪ್’, ಮೈ ಗವರ್ನಮೆಂಟ್ ಆ್ಯಪ್’ ಡೌನ್‌ಲೋಡ್ ಮಾಡಿ ಅದರ ಮೂಲಕವೂ ಪಾಲ್ಗೊಳ್ಳಬಹುದು. ನೇರವಾಗಿ ಎಂದು ನಿಮ್ಮ ಮೊಬೈಲ್‌ನ ವೆಬ್ ಬ್ರೌಸರ್ ನಲ್ಲಿ ಟೈಪ್ ಮಾಡಿ. ಆಗ ಈ ಲಿಂಕ್ ಮೂಲಕ ತೆರೆದುಕೊಳ್ಳುವ ‘ವೋಟ್ ಫಾರ್ ಯುವರ್ ಸಿಟಿ ಸಿಟಿಜನ್ಸ್ ಫೀಡ್‌ಬ್ಯಾಕ್’ ಪುಟ (ವೆಬ್ ಪುಟ) ಕಾಣಸಿಗುತ್ತದೆ. ಇಲ್ಲಿ ಇಂಗ್ಲಿಷ್, ಕನ್ನಡ ಸಹಿತ ಭಾಷೆಯ ಆಯ್ಕೆಗೆ ಅವಕಾಶವಿದೆ. ಬಳಿಕ ರಾಜ್ಯ, ಜಿಲ್ಲೆ, ನಗರದ ಹೆಸರನ್ನು ಆಯ್ಕೆ ಮಾಡಬೇಕು. ವಯಸ್ಸು, ನಗರ ನಿವಾಸಿಯಾಗಿದ್ದೀರಾ? ಎಂಬ ಅಂಶವನ್ನೂ ಭರ್ತಿ ಮಾಡಿ, ನಿಮ್ಮ ಹೆಸರು ಹಾಗೂ ಮೊಬೈಲ್ ಫೋನ್ ನಂಬರ್ ಅನ್ನು ತುಂಬಬೇಕು. ಕೂಡಲೇ ನಿಮ್ಮ ಮೊಬೈಲ್ ಫೋನ್ ಗೆ ಒಟಿಪಿ ಬರಲಿದೆ. ಅದನ್ನು ಮುಂದಿನ ಪ್ರಶ್ನೆಗಳಿಗೆ ಉತ್ತರ ನೀಡಿದ ಬಳಿಕ ಅಂತಿಮವಾಗಿ ನಮೂದಿಸಬೇಕು.
ಪ್ರಶ್ನೆಗಳು ಯಾವುದು?
ಸ್ವಚ್ಛ ಸರ್ವೇಕ್ಷಣಾ 2022ನಲ್ಲಿ ನಿಮ್ಮ ನಗರ ಭಾಗವಹಿಸುತ್ತಿದೆ ಎಂದು ನೀವು ತಿಳಿದಿರುವಿರಾ? ಗೂಗಲ್ ಮ್ಯಾಪ್‌ನಲ್ಲಿ ಹತ್ತಿರದ ಸಾರ್ವಜನಿಕ ಶೌಚಾಲಯವನ್ನು ನೀವು ಹುಡುಕಬಹುದು ಎಂದು ನಿಮಗೆ ತಿಳಿದಿದೆಯೇ? ನಿಮ್ಮ ನೆರೆಹೊರೆಯ ಪ್ರದೇಶ ಯಾವಾಗಲೂ ಸ್ವಚ್ಛವಾಗಿರುವುದನ್ನು ನೀವು ನೋಡಿರುವಿರಾ? ಹೋಮ್ ಕಾಂಪೋಸ್ಟಿಂಗ್/ಮನೆಗೊಬ್ಬರ ನೀವು ತಿಳಿದಿರುವಿರಾ? ಎಂಬ ಪ್ರಶ್ನೆಗಳಿಗೆ ಹೌದು-ಇಲ್ಲ ಎಂಬ ಉತ್ತರದ ಪೈಕಿ ಒಂದನ್ನು ಆಯ್ಕೆ ಮಾಡಬೇಕು. ಬಳಿಕ ಬಗಂದ ಒಟಿಪಿ ದಾಖಲಿಸಿ ಸಲ್ಲಿಸಿದರಾಯಿತು. (ಸಬ್ ಮಿಟ್ ಎಂಬ ಆಯ್ಕೆ ಇರುತ್ತದೆ. ಅದನ್ನು ಒತ್ತಬೇಕು). ಉದ್ಯೋಗಿಗಳು, ವಿದ್ಯಾರ್ಥಿಗಳು ಸಹಿತ ಎಲ್ಲ ಸಾರ್ವಜನಿಕರು ಇದರಲ್ಲಿ ಪಾಲ್ಗೊಳ್ಳಬಹುದು.
ಧನಾತ್ಮಕವಾಗಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಿ
ದೇಶದ ಇತರ ನಗರಗಳಿಗೆ ಹೋಲಿಸಿದರೆ ಮಂಗಳೂರು ಸ್ವಚ್ಛ ಹಾಗೂ ಸುಂದರವಾಗಿದೆ. ಈ ನಿಟ್ಟಿನಲ್ಲಿ ಈ ಬಾರಿಯ ಸ್ವತ್ಛ ಸರ್ವೇಕ್ಷಣೆ ಸ್ಪರ್ಧೆಯಲ್ಲಿ ನಗರದ ನಾಗರಿಕರು ವಿಶೇಷ ಆದ್ಯತೆಯಿಂದ ತಮ್ಮ ಅಭಿಪ್ರಾಯಗಳನ್ನು ಮೊಬೈಲ್ ಮುಖೇನ ದಾಖಲಿಸಬೇಕು. ಧನಾತ್ಮಕವಾಗಿ ಅಭಿಪ್ರಾಯ ನೀಡಿದರೆ ಮಂಗಳೂರಿಗೆ ದೇಶದ ಮಟ್ಟದಲ್ಲಿ ಒಳ್ಳೆ ರ್‍ಯಾಂಕ್ ಸಿಗಬಹುದು. -ಅಕ್ಷಯ್ ಶ್ರೀಧರ್, ಆಯುಕ್ತರು, ಮಂಗಳೂರು ಪಾಲಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.