ಸಗರಾದ್ರಿ ಮಡಿಲಲಿ ಚರಬಸವ ತಾತಾನ ಸಂಭ್ರಮದ 100 ನೇ ರಥೋತ್ಸವ
Team Udayavani, Apr 7, 2022, 1:00 PM IST
ಶಹಾಪುರ : ಕಳೆದ ಎರಡು ವರ್ಷಗಳಿಂದ ಕೋವಿಡ್ ಮಹಾಮಾರಿಯಿಂದ ಜಾತ್ರೆ, ಉತ್ಸವ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳಿಗೆ ಮಂಕು ಕವಿದಿತ್ತು. ಈ ವರ್ಷ ಇಲ್ಲಿನ ಸಗರನಾಡಿನ ಆರಾಧ್ಯ ದೈವ ಸಗರಾದ್ರಿ ಬೆಟ್ಟಗಳ ಮಧ್ಯದಲ್ಲಿ ನೆಲೆ ನಿಂತ ಶ್ರೀ ಚರಬಸವೇಶ್ವರರ 100 ನೇ ವರ್ಷದ ಮಹಾ ರಥೋತ್ಸವ ಅಸಂಖ್ಯಾತ ಭಕ್ತರ ಜಯಘೋಷಗಳ ನಡುವೆ ಬುಧವಾರ ಸಂಜೆ 6 ಗಂಟೆಗೆ ಸಂಭ್ರಮದಿಂದ ಜರುಗಿತು.
ಈ ಬಾರಿ ವಿಶೇಷವಾಗಿ ಚರಬಸವ ತಾತಾ ಹಲವಾರು ಗ್ರಾಮಗಳಲ್ಲಿ ನೆಲೆಸಿ ಅಲ್ಲಿನ ಜನರಿಗೆ ಉತ್ತಮ ಮಾರ್ಗದರ್ಶನ ನೀಡಿ, ಕಾಯಕ, ದಾಸೋಹ ತತ್ವ ಪ್ರತಿಪಾದಿಸಿದ್ದ, ಹಲವಾರು ಪವಾಡಗಳನ್ನು ಮೆರೆದಿದ್ದ ಚರಬಸವ ತಾತಾನ ಭಕ್ತರು ಆಯಾ ಗ್ರಾಮಗಳಿಂದ ತಾತನ ಬೆತ್ತ ಅಂದರೆ ಮಂತ್ರದಂಡವನ್ನು ಹೊತ್ತು ಮೆರವಣಿಗೆ, ಕಾಲ್ನಡಿಗೆ ಮೂಲಕ ರಥೋತ್ಸವಕ್ಕೆ ಆಗಮಿಸಿರುವದು ವಿಶೇಷವಾಗಿತ್ತು.
ಪ್ರಥಮವಾಗಿ ರಥೋತ್ಸವಕ್ಕೆ ಬಾಡಿಯಾಳ ಶ್ರೀಗಳು ಪೂಜೆ ಸಲ್ಲಿಸಿ ಚಾಲನೆ ನೀಡಿದ್ದರು. ರಥೋತ್ಸವಕ್ಕೆ ಚಾಲನೆ ದೊರೆಯುತ್ತಿದ್ದಂತೆ ನೆರೆ ಭಕ್ತಾಧಿಗಳು ಉತ್ತುತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಣೆಗೈದರು. ನಾಳೆಯಿಂದ ದೊಡ್ಡ ಪ್ರಮಾಣದಲ್ಲಿ ಜಾನುವಾರು ಜಾತ್ರೆ ಒಂದು ವಾರಗಳ ವರೆಗೆ ನಡೆಯಲಿದೆ. ಜಾತ್ರೆಗೆ ಬೇಕಾದ ಮೂಲ ಸೌಲಭ್ಯವನ್ನು ತಾಲೂಕು ಆಡಳಿತ ಕಲ್ಪಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.