ಕುರಿ ಮಾಲಿಕನ ಹತ್ಯೆಕೋರರ ಬಂಧಿಸಿ
ನಾಲ್ಕು ದಿನಗಳಲ್ಲಿ ಆರೋಪಿಗಳ ಬಂಧಿಸದಿದ್ದರೆ ನ್ಯಾಯಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಬಂದ್: ಪಾಟೀಲ
Team Udayavani, Apr 7, 2022, 2:39 PM IST
ರಾಣಿಬೆನ್ನೂರ: ತಾಲೂಕಿನ ಗಂಗಾಪುರ ಗ್ರಾಮದ ವೆಂಕಟೇಶ್ ರಂಗಪ್ಪ ಮತ್ತೂರು (50) ಅವರನ್ನು ತಮ್ಮ ಜಮೀನಿನಲ್ಲಿರುವ ಕುರಿ ದೊಡ್ಡಿಯಲ್ಲಿ ಬುಧವಾರ ಕಟ್ಟಿ ಹಾಕಿ ಹತ್ಯೆ ಮಾಡಿ, 40 ಕುರಿಗಳನ್ನು ಕಳ್ಳತನ ಮಾಡಿದ ಹಿನ್ನೆಲೆಯಲ್ಲಿ, ನಾಲ್ಕು ದಿನಗಳಲ್ಲಿ ಕೊಲೆ ಆರೋಪಿಗಳನ್ನು ಬಂಧಿಸದಿದ್ದರೆ ನ್ಯಾಯಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದೆಂದು ರೈತ ಸಂಘದ ರಾಜ್ಯ ಸಂಚಾಲಕ ರವೀಂದ್ರಗೌಡ ಪಾಟೀಲ ಎಚ್ಚರಿಕೆ ನೀಡಿದರು.
ತಾಲೂಕಿನ ಗಂಗಾಪುರದಲ್ಲಿ ಬುಧವಾರ ಗಂಗಾಪುರ ಕುರಿ ಮಾಲಿಕ ವೆಂಕಟೇಶ ಹತ್ಯೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ನಡೆದ ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆಯಿಂದ ಕುರಿಗಾಹಿಗಳಿಗೆ ಅಷ್ಟೇ ಅಲ್ಲ ರೈತರಿಗೂ ಆತಂಕ ಉಂಟಾಗಿದೆ. ಪೊಲೀಸರು ಕೂಡಲೇ ಕೊಲೆ ಆರೋಪಿಗಳನ್ನು ಬಂಧಿಸಬೇಕು. ಮೃತ ವೆಂಕಟೇಶ ಮತ್ತೂರು ಕುಟುಂಬಕ್ಕೆ ಸೂಕ್ತ ಪರಿಹಾರ ಘೋಷಣೆ ಮಾಡಬೇಕು. ಕಳ್ಳತನವಾದ ಪ್ರತಿ ಕುರಿಗೆ 20 ಸಾವಿರ ರೂ.ಪರಿಹಾರವನ್ನು ತಕ್ಷಣವೇ ನೀಡಬೇಕೆಂದು ಮನವಿ ಮಾಡಿದರು.
ಕಳೆದ ಒಂದು ವಾರದ ಹಿಂದೆ ತಾಲೂಕಿನ ಕಾಕೋಳ ತಾಂಡಾದ ಕುರಿಗಾಹಿ ಭೀಮಪ್ಪ ತಾರೆಪ್ಪ ಲಮಾಣಿ ಎಂಬುವರನ್ನು ಬೆದರಿಸಿ, 30 ಕುರಿಗಳು ಹಾಗೂ ಏ.3 ರಂದು ಸುಣಕಲ್‌ಬಿದರಿ ಗ್ರಾಮದ ಗಂಗಮ್ಮ ಶಿದ್ಲಿಂಗಪ್ಪ ಕೋಲಕಾರ ಅವರಿಗೆ ಸೇರಿದ 32 ಕುರಿಗಳನ್ನು ಇದೇ ಮಾದರಿಯಲ್ಲಿ ಕದ್ದೊಯ್ದುದ್ದಾರೆ. ಪ್ರಕರಣ ದಾಖಲಾದರೂ ಕಳ್ಳರು ಇಂದಿಗೂ ಪತ್ತೆಯಾಗಿಲ್ಲ. ಯಾವುದೇ ಪರಿಹಾರ ಕೂಡ ಸಿಕ್ಕಿಲ್ಲ. 3 ತಿಂಗಳ ಹಿಂದೆ ತಾಲೂಕಿನ ಕುದರಿಹಾಳ ಗ್ರಾಮದ ಶಿವಪುತ್ರಪ್ಪ ಹಲವಾಗಲ ಮತ್ತು 8 ದಿನಗಳ ಹಿಂದೆ ಅಂಕಸಾಪುರದ ಹನುಮಂತಪ್ಪ ಹರಿಜನ ಅವರ ಕುರಿಗಳು ಕಳ್ಳತನವಾಗಿವೆ ಎಂದು ದೂರಿದರು.
ರೈತ ಮುಖಂಡ ಹನುಮಂತಪ್ಪ ಕಬ್ಟಾರ ಮಾತನಾಡಿ, ತಾಲೂಕಿನಲ್ಲಿ ಒಂದೇ ತಿಂಗಳಲ್ಲಿ 6 ಪ್ರಕರಣಗಳು ನಡೆದಿದೆ. ಪೊಲೀಸ್ ಇಲಾಖೆ ಈ ಪ್ರಕರಣ ಬೇಧಿಸದೇ ಇದ್ದದ್ದು ಕೂಡ ಈ ಕೊಲೆಗೆ ಪುಷ್ಠಿ ನೀಡಿದಂತಾಗಿದೆ. ಹೀಗಾಗಿ, ಕುರಿಗಾರರು ತೀವ್ರ ಭಯಭೀತರಾಗಿದ್ದಾರೆ. ಕಳ್ಳರನ್ನು ಬಂ ಧಿಸಿ ಭಯದ ವಾತಾವರಣ ತಿಳಿಸಗೊಳಿಸಬೇಕೆಂದರು.
ಎಸ್ಪಿ ಹನುಮಂತರಾಯ ಅವರು ಮಾತನಾಡಿ, 4 ದಿನಗಳ ಕಾಲಾವಕಾಶ ಕೊಡಿ. ಕೊಲೆಗಾರರನ್ನು, ಕುರಿ ಕಳ್ಳರ ತಂಡವನ್ನು ಬಂ ಧಿಸಿಯೇ ತೀರುತ್ತೇವೆ ಎಂದು ಭರವಸೆ ನೀಡಿದರು.
ಶಾಸಕ ಅರುಣಕುಮಾರ ಪೂಜಾರ, ಗಂಗಾಪುರ ಸಿದ್ಧಾರೂಢ ಮಠದ ಮರುಳಶಂಕರ ಸ್ವಾಮೀಜಿ, ಕಾಂಗ್ರೆಸ್ ಮುಖಂಡ ಕೆ.ಬಿ. ಕೋಳಿವಾಡ, ಜಿಪಂ ಮಾಜಿ ಅಧ್ಯಕ್ಷ ಏಕನಾಥ ಭಾನುವಳ್ಳಿ, ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತನ ಪತ್ನಿ ನಾಗರತ್ನಾ ಅವರಿಗೆ ಸಾಂತ್ವನ ಹೇಳಿದರು.
ತಹಶೀಲ್ದಾರ್ ಶಂಕರ್ ಜಿ.ಎಸ್., ಪುಟ್ಟಪ್ಪ, ಶ್ರೀಧರ, ಗಂಗಾಧರ ಗಂಗಣ್ಣನವರ, ಧರ್ಮರಾಜ ಕುಪ್ಪೇಲೂರು, ಗ್ರಾಪಂ ಸದಸ್ಯ ಸೋಮಜ್ಜ ಚಿಕ್ಕಳವರ, ದಿಳ್ಳೆಪ್ಪ ಸತ್ಯಪ್ಪನವರ, ಹರಿಹರಗೌಡ ಪಾಟೀಲ, ಇಕ್ಬಾಲ್‌ಸಾಬ್ ರಾಣಿಬೆನ್ನೂರು, ಮಲ್ಲೇಶಪ್ಪ ಧೂಳೇಹೊಳೆ, ಬಸವರಾಜ ಕೊಂಗಿ, ಎಸ್.ಡಿ. ಹಿರೇಮಠ ಸೇರಿದಂತೆ ಗ್ರಾಮಸ್ಥರು ಇದ್ದರು.
ಸಿಪಿಐಗಳಾದ ಶ್ರೀಶೈಲ ಚೌಗಲಾ, ಎಂ.ವೈ. ಗೌಡಪ್ಪಗೌಡ, ಭಾಗ್ಯವತಿ ಗಂತಿ, ಪಿಎಸ್‌ಐ ವಸಂತ, ಹಲಗೇರಿ ಪಿಎಸ್‌ಐ ಮೇಘರಾಜ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.