ನಿಷೇಧ ಮುಗಿಸಿ ಬಂದ ರಾಸಿಖ್ ಖಾನ್
Team Udayavani, Apr 8, 2022, 6:55 AM IST
ಪುಣೆ: ಮುಂಬೈ-ಕೆಕೆಆರ್ ನಡುವಿನ ಮುಖಾಮುಖೀಯಲ್ಲಿ ಕೇವಲ ಪ್ಯಾಟ್ ಕಮಿನ್ಸ್, ಡೇನಿಯಲ್ ಸ್ಯಾಮ್ಸ್ ಮಾತ್ರ ಸುದ್ದಿಯಾಗಿಲ್ಲ, ಜಮ್ಮು ಕಾಶ್ಮೀರದ ಮಧ್ಯಮ ವೇಗಿ ರಾಸಿಖ್ ಸಲಾಂ ಖಾನ್ ಕೂಡ ಗಮನ ಸೆಳೆದಿದ್ದಾರೆ. ಅವರು 3 ವರ್ಷಗಳ ಬಳಿಕ ಐಪಿಎಲ್‌ನಲ್ಲಿ ಮೊದಲ ಪಂದ್ಯವಾಡಿದರು!
ಕೆಕೆಆರ್ ತಂಡದ ಸದಸ್ಯ ರಾಗಿರುವ ರಾಸಿಖ್, ಉಮೇಶ್ ಯಾದವ್ ಅವ ರೊಂದಿಗೆ ಬೌಲಿಂಗ್ ಆರಂಭಿಸಿದರು. 2019ರಲ್ಲಿ ಮುಂಬೈ ಪರ ಆಡಿದ್ದ ರಾಸಿಖ್, ಈ ಬಾರಿ ಮುಂಬೈ ವಿರುದ್ಧ ಆಡುವ ಮೂಲಕ ಐಪಿಎಲ್‌ನ ದ್ವಿತೀಯ ಇನ್ನಿಂಗ್ಸ್ ಆಡಿದರು. 3 ಓವರ್‌ಗಳಲ್ಲಿ ಕೇವಲ 18 ರನ್ ನೀಡಿ ಗಮನಾರ್ಹ ಪ್ರದರ್ಶನವಿತ್ತರು.
ಅಂದಹಾಗೆ, ರಾಸಿಖ್ ಖಾನ್ ಅವರ “ಐಪಿಎಲ್ ಮಿಸ್ಸಿಂಗ್’ಗೆ ಬಲ ವಾದ ಕಾರಣವಿದೆ. 2019ರಲ್ಲಿ ತಮ್ಮ ಜನನ ಪ್ರಮಾಣಪತ್ರದಲ್ಲಿ ಮೋಸ ಮಾಡಿದ ಪ್ರಕರಣವೊಂದರಲ್ಲಿ ರಾಸಿಖ್ ಖಾನ್ ಅವರನ್ನು ಬಿಸಿಸಿಐ 2 ವರ್ಷಗಳ ಕಾಲ ನಿಷೇಧಿಸಿತ್ತು. ಹೀಗಾಗಿ ಅವರನ್ನು ಅಂಡರ್-19 ತಂಡದಿಂದ ಕೈಬಿಡಲಾಯಿತು. ನಿಷೇಧದಿಂದಾಗಿ ರಾಸಿಖ್‌ಗೆ ಐಪಿಎಲ್ ಬಾಗಿಲು ಕೂಡ ಮುಚ್ಚಲ್ಪಟ್ಟಿತ್ತು. ಈ ಬಾರಿಯ ಮೆಗಾ ಹರಾಜಿನಲ್ಲಿ ರಾಸಿಖ್ ಖಾನ್ ಅವರನ್ನು ಕೆಕೆಆರ್ 20 ಲಕ್ಷ ರೂ. ಮೂಲ ಬೆಲೆಗೆ ಖರೀದಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Koppala: ಬಂದ್ ಕರೆಗೆ ಅಂಗಡಿ- ಮುಂಗಟ್ಟು ಬಂದ್
Chhattisgarh: ಪತ್ರಕರ್ತ ಮುಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹೈದರಾಬಾದ್‌ನಲ್ಲಿ ಬಂಧನ
Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
Honnavara: ಲಾರಿ ಪಲ್ಟಿಯಾಗಿ ಇಬ್ಬರು ಸಾವು; ಮೂವರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.