ಇಂಧನ ಬೆಲೆ ಏರಿಕೆ ವಿರುದ್ಧ ಆಕ್ರೋಶ
ಆಟೋಗೆ ಹಗ್ಗ ಕಟ್ಟಿ ಎಳೆದು ವಿನೂತನ ಪ್ರತಿಭಟನೆ
Team Udayavani, Apr 8, 2022, 1:24 PM IST
ದಾವಣಗೆರೆ: ಮಹಾಮಾರಿ ಕೊರೊನಾದಿಂದಾಗಿ ಎರಡು ವರ್ಷಗಳ ಕಾಲ ಸಂಕಷ್ಟದಲ್ಲಿದ್ದ ಜನತೆಗೆ ಸರ್ಕಾರಗಳು ಇಂಧನ, ಅಡುಗೆ ಅನಿಲ, ವಿದ್ಯುತ್ ಶುಲ್ಕ ಮತ್ತು ಅಡುಗೆ ಎಣ್ಣೆ ಬೆಲೆ ಏರಿಕೆ ಮಾಡುವ ಮೂಲಕ ಸಂಕಷ್ಟಕ್ಕೆ ದೂಡಿವೆ ಎಂದು ಆರೋಪಿಸಿ ಗುರುವಾರ ಸುವರ್ಣ ಕರ್ನಾಟಕ ವೇದಿಕೆ ಹಾಗೂ ದಾವಣಗೆರೆ ಜಿಲ್ಲಾ 3 ಮತ್ತು 4 ಚಕ್ರಗಳ ಗೂಡ್ಸ್ ವಾಹನ ಚಾಲಕ ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ವೃತ್ತದಿಂದ ಜಯದೇವ ವೃತ್ತದವರೆಗೆ ಆಪೆ ಗೂಡ್ಸ್ ಆಟೋಕ್ಕೆ ಹಗ್ಗ ಕಟ್ಟಿ ಎಳೆಯುವ ಮೂಲಕ ಕೇಂದ್ರ ಸರ್ಕಾರದ ಇಂಧನ ಬೆಲೆ ಏರಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸುವರ್ಣ ಕರ್ನಾಟಕ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಆರ್. ಸಂತೋಷ್‌ಕುಮಾರ್ ಮಾತನಾಡಿ, ಕಳೆದ ಎರಡು ವರ್ಷದಿಂದ ಬಿಟ್ಟು ಬಿಡದೇ ಕಾಡಿದ ಕೊರೊನಾ, ಲಾಕ್‌ಡೌನ್‌ನಿಂದ ಜನರ ಬದುಕು ದುಸ್ತರವಾಗಿದೆ. ಈಗಷ್ಟೇ ಚೇತರಿಸಿಕೊಳ್ಳುತ್ತಿರುವಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಿನನಿತ್ಯ ಬಳಸುವ ಇಂಧನ, ವಿದ್ಯುತ್ ಹಾಗೂ ಅಡುಗೆ ಎಣ್ಣೆಯ ಬೆಲೆ ಏರಿಸುವ ಮೂಲಕ ಜನರನ್ನು ಇನ್ನಿಲ್ಲದ ಸಮಸ್ಯೆಗೆ ದೂಡುತ್ತಿರುವುದು ಅತ್ಯಂತ ಖಂಡನೀಯ ಎಂದು ದೂರಿದರು.
ಇಂದಿನ ವಾತಾವರಣದಲ್ಲಿ ಸಾಮಾನ್ಯ ಜನರ ಜೀವನ ನಡೆಸುವುದೇ ಕಷ್ಟವಾಗಿದೆ. ದಿನಗೂಲಿ ನೌಕರರು ದಿನಕ್ಕೆ 500 ರೂಪಾಯಿ ದುಡಿದು ಸಾವಿರಾರು ರೂಪಾಯಿ ಖರ್ಚು ಮಾಡುವಂತಾಗಿದೆ.ಹಿಂದೆ ಕಟ್ಟಿಗೆ ಉಪಯೋಗಿಸಿ ಜನಸಾಮಾನ್ಯರು ಜೀವನ ಸಾಗಿಸುತ್ತಿದ್ದರು. ಅಡುಗೆ ಅನಿಲ ಬಳಕೆ ಪ್ರಾರಂಭಿಸಿದ ನಂತರ ಮೊದಲಿಗೆ ಸಬ್ಸಿಡಿ ರೂಪದಲ್ಲಿ ಉಚಿತವಾಗಿ ನೀಡಿದರು. ನಂತರ ಪ್ರತಿ ತಿಂಗಳು ಸಬ್ಸಿಡಿ ರೂಪದಲ್ಲಿ ಜನರ ಖಾತೆ ಹಣ ಜಮಾ ಆಗುತ್ತಿತ್ತು. ಕೊರೊನಾ ಸಮಯದಲ್ಲಿ ಸಬ್ಸಿಡಿ ಹಣ ಜಮಾ ಆಗುತ್ತಿಲ್ಲ. ದಿನದಿಂದ ಅಡುಗೆ ಅನಿಲ ಧಾರಣೆ ಹೆಚ್ಚಾಗುತ್ತಿರುವ ಪರಿಣಾಮ ಹಿಂದಿನ ದಿನಗಳ ಕಾಲದಂತೆ ಕಟ್ಟಿಗೆ ಉಪಯೋಗಿಸುವ ಕಾಲ ದೂರವಿಲ್ಲ ಎಂದು ಆರೋಪಿಸಿದರು.
ಪಳನಿಸ್ವಾಮಿ, ಶಾಂತಕುಮಾರ್ ದೊಡ್ಡಮನಿ, ಶಿವಕುಮಾರ್, ವಿಜಯ್, ಗಣೇಶ್, ಶಶಿ, ಶಿವಾಜಿ, ಅಂಜಿನಪ್ಪ, ಸಂದೀಪ್, ಬಸವರಾಜ್, ಮಾನಪ್ಪ ಇತರರು ಇದ್ದರು. ‘ಅಚ್ಛೇ ದಿನ್’ ಹೆಸರಿನಲ್ಲಿ ಅ ಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಜನರಿಗೆ ನರಕದ ದಿನಗಳ ದರ್ಶನ ಮಾಡಿಸುತ್ತಿದೆ . ದಿನನಿತ್ಯದ ವಸ್ತುಗಳು ಹಾಗೂ ಔಷಧ ಬೆಲೆ ಏರುತ್ತ ಹೋಗುತ್ತಿದೆ. ಸರ್ಕಾರಗಳು ಬೆಲೆ ಏರಿಕೆ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಬೇಕು.
– ಆರ್. ಸಂತೋಷ್‌ಕುಮಾರ್, ಸುವರ್ಣ ಕರ್ನಾಟಕ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.