ಮಗು ಪಡೆಯಲು 15 ದಿನ ಪತಿಯನ್ನು ಬಿಡುಗಡೆ ಮಾಡಿ; ರಾಜಸ್ಥಾನ ಹೈಕೋರ್ಟ್‌ಗೆ ಕೈದಿಯ ಪತ್ನಿ ಅರ್ಜಿ
ಮಹಿಳೆಯ ಬೇಡಿಕೆಗೆ ಸಮ್ಮತಿಯಿತ್ತ ನ್ಯಾಯಪೀಠ
Team Udayavani, Apr 9, 2022, 8:00 AM IST
ಜೈಪುರ: “ನನ್ನ ವಂಶ ಬೆಳೆಸುವ ನಿಟ್ಟಿನಲ್ಲಿ ಪತಿಯ ಜತೆಗೆ ಹದಿನೈದು ದಿನ ಇರಬೇಕಾಗಿದೆ. ಅದಕ್ಕಾಗಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಅವರನ್ನು ಅಲ್ಪಾವಧಿಗೆ ಬಿಡುಗಡೆ ಬೇಕಾಗಿದೆ’ – ಹೀಗೆಂದು ಶಿಕ್ಷೆ ಅನುಭವಿಸುತ್ತಿರುವ ವ್ಯಕ್ತಿಯ ಪತ್ನಿ ರಾಜಸ್ಥಾನ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದಾಳೆ.ಅದನ್ನು ಅಂಗೀಕರಿಸಿ ಆದೇಶವನ್ನೂ ನೀಡಿದ ವಿಶೇಷ ಪ್ರಕರಣ ವರದಿಯಾಗಿದೆ.
ನಂದಲಾಲ್ ಎಂಬಾತ ಪ್ರಕರಣವೊಂದರಲ್ಲಿ 2019 ಫೆ.6ರಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಅದಕ್ಕಿಂತ ಕೊಂಚ ದಿನಗಳ ಮೊದಲು ಆತನ ವಿವಾಹವಾಗಿತ್ತು. ಹೀಗಾಗಿ, ಅವರಿಗೆ ದಾಂಪತ್ಯ ನಡೆಸಲು ಅವಕಾಶ ಸಿಕ್ಕಿರಲಿಲ್ಲ. ಆರಂಭದಲ್ಲಿ ಜೈಲಧಿಕಾರಿಗಳಿಗೆ ಪತಿಯನ್ನು ಬಿಡುಗಡೆ ಮಾಡುವ ಬಗ್ಗೆ ಮನವಿ ಸಲ್ಲಿಸಿದ್ದರೂ, ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ.
ಹೀಗಾಗಿ, ಆಕೆ ವಕೀಲರ ಮೂಲಕ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದಳು.ಅನಿರೀಕ್ಷಿತವಾಗಿ ಪತಿ ತಪ್ಪನ್ನೆಸಗಿದ್ದಾರೆ ಮತ್ತು ಆತ ವೃತ್ತಿಪರ ಕೊಲೆಗಾರ ಅಲ್ಲ. ಜತೆಗೆ ಕಾರಾಗೃಹದ ನಿಯಮಗಳನ್ನೂ ಪಾಲಿಸಿದ್ದಾರೆ. ಮಗು ಪಡೆಯುವ ನಿಟ್ಟಿನಲ್ಲಿ 15 ದಿನಗಳ ಕಾಲ ನನ್ನ ಜತೆ ಇರಲು ಪತಿಯನ್ನು ಬಿಡುಗಡೆ ಮಾಡಬೇಕು. ಇದರಿಂದ ಮಗು ಪಡೆವ ಹಂಬಲ ಈಡೇರಲಿದೆ ಎಂದು ನ್ಯಾಯಪೀಠದ ಮುಂದೆ ಅರಿಕೆ ಮಾಡಿದ್ದಳು.
ಇದನ್ನೂ ಓದಿ:ಬುಲ್ಡೋಜರ್ ಬಳಕೆ ಮಾಫಿಯಾಗಳಿಗೆ ಮಾತ್ರ, ಬಡವರಿಗೆ ಅಲ್ಲ: ಅಧಿಕಾರಿಗಳಿಗೆ ಯೋಗಿ
ದಾಂಪತ್ಯ ಜೀವನದಲ್ಲಿ ಅವರು ಅನ್ಯೋನ್ಯವಾಗಿದ್ದ ರೀತಿ ಮತ್ತು ಹಿಂದೂ ಧರ್ಮದಲ್ಲಿ ಉಲ್ಲೇಖಗೊಂಡ 16 ಸಂಸ್ಕಾರಗಳಲ್ಲಿ ವಂಶಾಭಿವೃದ್ಧಿಯೂ ಒಂದಾಗಿದೆ. ಇದರ ಜತೆಗೆ ಶಿಕ್ಷೆ ಅನುಭವಿಸುತ್ತಿರುವ ಪತಿಯನ್ನು ಮಕ್ಕಳನ್ನು ಪಡೆಯಬೇಕು ಎಂಬ ಕಾರಣಕ್ಕೆ ಬಿಡುಗಡೆ ಮಾಡುವ ಬಗ್ಗೆ ಕಾನೂನಿನಲ್ಲಿ ಯಾವುದೇ ಉಲ್ಲೇಖ ಇಲ್ಲ. ಹೀಗಾಗಿ, ಮಾನವೀಯತೆಯ ಹಿನ್ನೆಲೆಯಲ್ಲಿ ನಂದಲಾಲ್‌ನ್ನು 15 ದಿನಗಳ ಮಟ್ಟಿಗೆ ಬಿಡುಗಡೆ ಮಾಡಬಹುದು ಎಂದು ನ್ಯಾಯಪೀಠ ಆದೇಶಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
MUST WATCH
ಹೊಸ ಸೇರ್ಪಡೆ
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.