ತೆರಿಗೆ ಸಂಗ್ರಹ ಶೇ.34ಕ್ಕೆ ಏರಿಕೆ; 23 ವರ್ಷಗಳಲ್ಲಿಯೇ ಮೊದಲ ಬಾರಿ ಜಿಡಿಪಿಯ ಪಾಲು ಹೆಚ್ಚಳ
ಕೇಂದ್ರ ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಘೋಷಣೆ
Team Udayavani, Apr 8, 2022, 7:40 AM IST
ನವದೆಹಲಿ: ಕೇಂದ್ರ ಸರ್ಕಾರ 2021-22ನೇ ಸಾಲಿನಲ್ಲಿ 27.07 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹಿಸಿದೆ. ಕಾರ್ಪೊರೇಟ್ ತೆರಿಗೆ, ಕಸ್ಟಮ್ಸ್, ಜಿಎಸ್‌ಟಿ ಸಂಗ್ರಹದಲ್ಲಿ ಏರಿಕೆಯಾಗಿದ್ದರಿಂದ ನಿರೀಕ್ಷೆಗೂ ಮೀರಿದ ಗುರಿ ಸಾಧನೆ ಮಾಡಲಾಗಿದೆ ಎಂದು ಕೇಂದ್ರ ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದಾರೆ.
ನವದೆಹಲಿಯಲ್ಲಿ ಶುಕ್ರವಾರ ಮಾತನಾಡಿದ ಅವರು, 1999ರ ಬಳಿಕ 23 ವರ್ಷಗಳಲ್ಲಿಯೇ ಮೊದಲ ಬಾರಿಗೆ ತೆರಿಗೆಗೆ ಸಮನಾಗಿ ಜಿಡಿಪಿ (ಒಟ್ಟು ದೇಶಿಯ ಉತ್ಪಾದನೆ) ಪ್ರಮಾಣ ಶೇ.11.7ಕ್ಕೆ ಏರಿಕೆಯಾಗಿದೆ. 2020-21ನೇ ಸಾಲಿನಲ್ಲಿ ಅದರ ಪ್ರಮಾಣ ಶೇ. 10.3 ಆಗಿತ್ತು ಎಂದು ತರುಣ್ ಬಜಾಜ್ ಹೇಳಿದ್ದಾರೆ.
ಇದನ್ನೂ ಓದಿ:ಬುಲ್ಡೋಜರ್ ಬಳಕೆ ಮಾಫಿಯಾಗಳಿಗೆ ಮಾತ್ರ, ಬಡವರಿಗೆ ಅಲ್ಲ: ಅಧಿಕಾರಿಗಳಿಗೆ ಯೋಗಿ
ದೇಶದಲ್ಲಿ ಒಟ್ಟಾರೆಯಾಗಿ ತೆರಿಗೆ ಸಂಗ್ರಹ ತೃಪ್ತಿದಾಯಕವಾಗಿಯೇ ಇದೆ ಎಂದು ಹೇಳಿದ ಕಂದಾಯ ಕಾರ್ಯದರ್ಶಿ, ಸಾಮಾನ್ಯ ಜಿಡಿಪಿ ಅಭಿವೃದ್ಧಿಯ ಪ್ರಮಾಣಕ್ಕಿಂತ 2ರಷ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಜಿಎಸ್‌ಟಿ ಸಂಗ್ರಹದಲ್ಲಿ ಕೂಡ ಹೆಚ್ಚಿನ ಪ್ರಮಾಣದ ತಾಂತ್ರಿಕ ವ್ಯವಸ್ಥೆ ಅಳವಡಿಸಲಾಗುತ್ತಿದೆ ಎಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.