ಕೊರಿಯ ಓಪನ್ ಬ್ಯಾಡ್ಮಿಂಟನ್: ಸಿಂಧು, ಶ್ರೀಕಾಂತ್ ಸೆಮಿಫೈನಲಿಗೆ
Team Udayavani, Apr 8, 2022, 11:03 PM IST
ಸಂಚಿಯೋನ್: ಭಾರತದ ಅಗ್ರ ಕ್ರಮಾಂಕದ ಶಟ್ಲರ್ಗಳಾದ ಪಿ.ವಿ. ಸಿಂಧು ಮತ್ತು ಕೆ. ಶ್ರೀಕಾಂತ್ ಸುಲಭ ಗೆಲುವು ಸಾಧಿಸಿ “ಕೊರಿಯ ಓಪನ್ ಸೂಪರ್ 500 ಬ್ಯಾಡ್ಮಿಂಟನ್’ ಕೂಟದ ಸೆಮಿಫೈನಲ್ ಹಂತಕ್ಕೇರಿದರು.
3ನೇ ಶ್ರೇಯಾಂಕದ ಸಿಂಧು ವನಿತೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಥಾಯ್ಲೆಂಡಿನ ಬುಸಾ ನನ್ ಅವರನ್ನು 21-10, 21-16 ಗೇಮ್ಗಳಿಂದ ಸೋಲಿಸಿದರು.
ಸಿಂಧು ಸೆಮಿಫೈನಲ್ ಹೋರಾಟ ದಲ್ಲಿ ದ್ವಿತೀಯ ಶ್ರೇಯಾಂಕದ ಕೊರಿಯದ ಆ್ಯನ್ ಸೆಯಂಗ್ ಅವರನ್ನು ಎದುರಿಸಲಿದ್ದಾರೆ. ಕಳೆದ ವರ್ಷ ಇವರಿಬ್ಬರು ಎರಡು ಬಾರಿ ಮುಖಾಮುಖಿಯಾಗಿದ್ದು, ಸಿಂಧು ಎರಡರಲ್ಲೂ ಸೋತಿದ್ದರು.
ಇದನ್ನೂ ಓದಿ:ಮೋಹನ್ದಾಸ್ ಪೈ ಟ್ವೀಟ್:ಸರ್ಕಾರದ ಯೋಗ್ಯತೆ ಪ್ರಶ್ನಿಸಿದ ಎಚ್ಡಿಕೆ
ಶ್ರೀಕಾಂತ್ಗೆ 3 ಗೇಮ್ ಜಯ
ಕೆ. ಶ್ರೀಕಾಂತ್ 3 ಗೇಮ್ಗಳ ಕಠಿನ ಹೋರಾಟದಲ್ಲಿ ಸ್ಥಳೀಯ ಭರವಸೆ ಸನ್ ವಾನ್ ಹೊ ಅವರನ್ನು ಕೆಡವಿದರು. ಕೊರಿಯದ ಹೊ ಅವರೆದುರು ಶ್ರೀಕಾಂತ್ 4-7ರ ದಾಖಲೆ ಹೊಂದಿದ್ದು, ಕಳೆದ 3 ಮುಖಾಮುಖಿಗಳಲ್ಲಿ ಶ್ರೀಕಾಂತ್ ಸೋತಿದ್ದರು. ಇಲ್ಲಿ ಅಮೋಘ ಪ್ರದರ್ಶನ ನೀಡಿದ ಶ್ರೀಕಾಂತ್ 21-12, 18-21, 21-12 ಗೇಮ್ಗಳಿಂದ ಗೆದ್ದು ಬಂದರು.
ಸೆಮಿಫೈನಲ್ನಲ್ಲಿ ಶ್ರೀಕಾಂತ್ 3ನೇ ಶ್ರೇಯಾಂಕದ ಇಂಡೋನೇಶ್ಯದ ಜೊನಾಥನ್ ಕ್ರಿಸ್ಟೀ ಅವರನ್ನು ಎದುರಿಸಲಿದ್ದಾರೆ. ಕ್ರಿಸ್ಟೀ ಕಳೆದ ತಿಂಗಳು ನಡೆದ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಕೂಟದ ಚಾಂಪಿಯನ್ ಎಂಬುದನ್ನು ಮರೆಯುವಂತಿಲ್ಲ.
ಡಬಲ್ಸ್ನಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಸೆಮಿಫೈನಲ್ ತಲುಪಲು ವಿಫಲರಾದರು. ಅವರು 3 ಗೇಮ್ಗಳ ಕಠಿನ ಹೋರಾಟದಲ್ಲಿ ಕೊರಿಯದ ಕಾಂಗ್ ಮಿನ್ಹ್ಯುಕ್-ಸಿಯೊ ಅವ ರಿಗೆ 20-22, 21-18, 20-22 ಗೇಮ್ಗಳಿಂದ ಶರಣಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.