ಕೇಂದ್ರದ ಡೀಸೆಲ್ ಸಬ್ಸಿಡಿ ರದ್ದು : ಖಾಸಗಿ ಬಂಕ್‌ನತ್ತ ಕೆಎಸ್ಸಾರ್ಟಿಸಿ ಮುಖ!
Team Udayavani, Apr 9, 2022, 9:50 AM IST
ಸುಳ್ಯ: ಕೆಎಸ್ಸಾರ್ಟಿಸಿ ಬಸ್‌ಗಳಿಗೆ ತುಂಬಿಸಲು ಸಂಸ್ಥೆಯ ಡಿಪೋಗೆ ಸರಬರಾಜು ಆಗುತ್ತಿದ್ದ ಡೀಸೆಲ್ ಇಂಧನದ ಸಬ್ಸಿಡಿಯನ್ನು ಕೇಂದ್ರ ಸರಕಾರ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಡೀಸೆಲ್ ಬೆಲೆ ಗಗನಕ್ಕೇರಿದ ಕಾರಣ ಕೆಎಸ್ಸಾರ್ಟಿಸಿಯು ತನ್ನ ಬಸ್‌ಗಳಿಗೆ ಡಿಸೇಲ್ ತುಂಬಿಸಲು ಖಾಸಗಿ ಪೆಟ್ರೋಲ್ ಬಂಕ್‌ಗಳನ್ನು ಆಶ್ರಯಿಸಲಾರಂಭಿಸಿದೆ.
ಸುಳ್ಯ ಕೆಎಸ್ಸಾರ್ಟಿಸಿಯವರು ಗುರುವಾರ ಸಂಜೆಯಿಂದ ಬಸ್ ನಿಲ್ದಾಣದ ಬಳಿಯ ಖಾಸಗಿ ಬಂಕ್‌ನಲ್ಲಿ ಡೀಸೆಲ್ ತುಂಬಿಸುತ್ತಿರುವುದು ಕಂಡುಬಂದಿದೆ.
ಕಾರಣ ಏನು?
ಕೇಂದ್ರ ಸರಕಾರದಿಂದ ಸಬ್ಸಿಡಿ ಇರುವಾಗ ಲೀಟರ್‌ಗೆ 65ರಿಂದ 70 ರೂ. ವರೆಗೆ ಕೆಎಸ್ಸಾರ್ಟಿಸಿಗೆ ಡೀಸೆಲ್ ದೊರೆಯುತ್ತಿತ್ತು. ಇದೀಗ ಸಬ್ಸಿಡಿ ರದ್ದಾಗಿರುವುದರಿಂದ ಲೀಟರ್‌ಗೆ 107 ರೂ. ಆಗುತ್ತದೆ ಎಂದು ತಿಳಿದುಬಂದಿದೆ. ಖಾಸಗಿ ಪೆಟ್ರೋಲ್ ಬಂಕ್‌ಗಳಲ್ಲಿ 94 ರೂ.ಗಳಿಗೆ ಒಂದು ಲೀಟರ್ ಡೀಸೆಲ್ ದೊರೆಯುತ್ತದೆ. ಆ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ಅವರು ಖಾಸಗಿ ಅವರ ಮೊರೆ ಹೋಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಡಿಆರ್‌ಡಿಒದ ಕ್ಷಿಪಣಿ ಛೇದನ ಪರೀಕ್ಷೆ ಯಶಸ್ವಿ : ರಕ್ಷಣ ಸಚಿವರಿಂದ ಅಭಿನಂದನೆ
ಮಂಗಳೂರು ವಿಭಾಗ ವಾಪ್ತಿಗೆ ಬರುವ ಮಂಗಳೂರಿನ 3 ಹಾಗೂ ಕುಂದಾಪುರ, ಉಡುಪಿ ಡಿಪೋಗೆ ದಿನವೊಂದಕ್ಕೆ ಸುಮಾರು 50,000 ಲೀಟರ್ ಡೀಸೆಲ್ ಇದೆ ಆವಶ್ಯಕತೆ ಇದೆ ಎನ್ನಲಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣವನ್ನು ಖಾಸಗಿ ಬಂಕ್‌ಗಳಿಂದ ತುಂಬಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇತರ ರಾಜ್ಯಗಳಲ್ಲೂ ಇದೇ ಸ್ಥಿತಿ
ಕೇರಳ, ತಮಿಳುನಾಡು ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್‌ಗಳು ಇದೀಗ ಖಾಸಗಿ ಪೆಟ್ರೋಲ್ ಬಂಕ್‌ಗಳನ್ನು ಇಂಧನಕ್ಕಾಗಿ ಆಶ್ರಯಿಸುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.