ರಣ ಬಿಸಿಲಿಗೆ ಬಿಕೋ ಎನ್ನುತ್ತಿವೆ ರಸ್ತೆಗಳು
Team Udayavani, Apr 9, 2022, 12:56 PM IST
ಚಿಂಚೋಳಿ: ತಾಲೂಕಿನಲ್ಲಿ ಮಾರ್ಚ್ ಕೊನೆ ವಾರದಿಂದ ಪ್ರಾರಂಭವಾದ ಸೂರ್ಯನ ಬಿಸಿಲಿನ ಧಗೆ ಮತ್ತು ರಣಬಿಸಿಲು, ಬಿಸಿ ಗಾಳಿ ಬೀಸುತ್ತಿರುವುದರಿಂದ ರಸ್ತೆಗಳೆಲ್ಲ ಬಿಕೋ ಎನ್ನುತ್ತಿವೆ.
ತಾಲೂಕಿನಲ್ಲಿ ಹೆಚ್ಚಿನ ಬಿಸಿಲಿನ ತಾಪ ಹೆಚ್ಚುತ್ತಿರುವುದರಿಂದ ಬಿಸಿ ಜಳ ಹೆಚ್ಚುತ್ತಿದೆ. ತಂಪು ನೀರು, ಎಳೆ ನೀರು, ಜ್ಯೂಸ್, ಕಲ್ಲಂಗಡಿ, ಮಜ್ಜಿಗೆ, ಲಸ್ಸಿ, ಕೆಂಪು ಮಣ್ಣಿನ ಮಡಿಕೆಗೆ ಬೇಡಿಕೆ ಹೆಚ್ಚಾಗುತ್ತಿದೆ.
ರಣ ಬಿಸಿಲಿನಿಂದಾಗಿ ಪಟ್ಟಣದಲ್ಲಿ ವ್ಯಾಪಾರ ವಹಿವಾಟು ಕಡಿಮೆಯಾಗಿದೆ. ಬಟ್ಟೆ ಅಂಗಡಿ, ಬಳೆ ಅಂಗಡಿ, ಕಿರಾಣಿ, ಚಹಾ ಅಂಗಡಿ, ಖಾನಾವಳಿ, ಬಸ್ ನಿಲ್ದಾಣಗಳಲ್ಲಿ ಕೆಲವೇ ಜನರು ಕಾಣುತ್ತಿದ್ದಾರೆ.
ಸುಲೇಪೇಟ, ಕೊಡ್ಲಿ, ಚಂದನಕೇರಾ, ಕುಂಚಾ ವರಂ, ಚಿಮ್ಮನಚೋಡ, ಮಿರಿಯಾಣ, ಗಡಿಕೇಶ್ವಾರ, ಮೋಘಾ, ಗಡಿಲಿಂಗದಳ್ಳಿ, ಐನಾಪುರ, ವೆಂಕಟಾಪುರ, ಹಸರಗುಂಡಗಿ, ಸಾಲೇಬೀರನಳ್ಳಿ, ಗಡಿಲಿಂಗದಳ್ಳಿ ಗ್ರಾಮಗಳಲ್ಲಿ ಮಧ್ಯಾಹ್ನ ಸಮಯದಲ್ಲಿ ಜನರು ರಸ್ತೆಯಲ್ಲಿ ತಿರುಗಾಡದೇ ಮನೆಯಲ್ಲೇ ಉಳಿಯುತ್ತಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ
ತಾಲೂಕಿನಲ್ಲೂ ಬೇಸಿಗೆ ಪ್ರಮಾಣ ಹೆಚ್ಚಿರುವುದರಿಂದ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗುತ್ತಿದೆ. ಗಂಜಗಿರಿ, ಬೆನಕೆಪಳ್ಳಿ, ತಾಡಪಳ್ಳಿ, ಭುಯ್ನಾರ (ಕೆ), ಚೇಂಗಟಾ, ಗಡಿಲಿಂಗದಳ್ಳಿ, ಸಲಗರ ಕಾಲೋನಿ, ಪಾಲತ್ಯಾ ತಾಂಡಾ, ವಡತ್ಯಾ ತಾಂಡಾ, ಪೆದ್ದಾ ತಾಂಡಾ, ಮೋಘಾ, ರುಮ್ಮನಗೂಡ, ರುಸ್ತಂಪುರ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತಿದೆ. ನೀರಿನ ಅಂರ್ತಜಲಮಟ್ಟ ದಿನೇ ದಿನೇ ಕುಸಿಯುತ್ತಿರುವುದರಿಂದ ಬೊರ್‌ವೆಲ್ ಗಳಲ್ಲಿ ಅಂರ್ತಜಲ ಕಡಿಮೆಯಾಗುತ್ತಿದೆ.ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದಾಗಿ ದನಕರುಗಳಿಗೆ ಮತ್ತು ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.