6 ವರ್ಷವಾದ್ರೂ ಅಪೂರ್ಣ ಈ ಸಮುದಾಯ ಭವನ
ತಾಲೂಕು ಎಸ್‌ಸಿ, ಎಸ್‌ಟಿ ಕುಂದು ಕೊರತೆ ಸಭೆಯಲ್ಲಿ ಚರ್ಚಿಸಿದರೂ ಪ್ರಯೋಜನವಾಗಿಲ್ಲ
Team Udayavani, Apr 9, 2022, 5:32 PM IST
ಯರಗಟ್ಟಿ: ಮಂಗಳವಾರ ಪಟ್ಟಣದ ಅಂಬೇಡ್ಕರ ನಗರದಲ್ಲಿ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಮ್ ಜಯಂತಿಯನ ನು ಅವರದೇ ಹೆಸರಿನ ಅಪೂರ್ಣಗೊಂಡ ಭವನದಲ್ಲಿ ಆಚರಿಸಲಾಯಿತು. ಇದರಲ್ಲೇನು ವಿಶೇಷ ಅಂತೀರಾ? 2016ರಲ್ಲಿ ಈ ಕಟ್ಟಡದ ನಿರ್ಮಾಣ ಪ್ರಾರಂಭವಾಗಿದ್ದು ಇನ್ನೂ ಮುಗಿದಿಲ್ಲ.
2016 ರಲ್ಲಿ ಈಗಿನ ಉಪಸಭಾಧ್ಯಕ್ಷರಾದ ಆನಂದ ಮಾಮನಿಯವರು 50 ಲಕ್ಷ ರೂ. ಸಮಾಜ ಕಲ್ಯಾಣ ಇಲಾಖೆಯ ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಸವದತ್ತಿಯ ಲ್ಯಾಂಡ್ ಆರ್ಮಿಗೆ ಗುತ್ತಿಗೆ ನೀಡಲಾಗಿತ್ತು.
ಬಾಬು ಜಗಜೀವನರಾಮ್ ಭವನ ನಿರ್ಮಾನಕ್ಕೆ ಇಲಾಖೆಗೆ 2019 ರಲ್ಲಿ ರೂ. 25 ಲಕ್ಷ ಮೊದಲನೇ ಕಂತಿನಲ್ಲಿ ಬಿಡುಗಡೆಯಾಯಿತು. ಅಷ್ಟು ಹಣದಲ್ಲಿ ಎಷ್ಟು ಕೆಲಸ ಸಾಧ್ಯವೋ ಅಷ್ಟನ್ನು ಮಾಡಲಾಯಿತು. ನಂತರ ಈಗ ಉಳಿದ ಹಣ ಬಿಡುಗಡೆಯಾಗಿದ್ದು, ಅತಿ ಶೀಘ್ರದಲ್ಲಿ ಇನ್ನುಳಿದ ಕಾಮಗಾರಿ ಮಾಡಲಾಗುವುದು ಎಂದು ತಾಲೂಕಾ ಸಮಾಜ ಕಲ್ಯಾಣಾಧಿಕಾರಿ ಕುಲಕರ್ಣಿ ಹೇಳುತ್ತಾರೆ.
ಸಮುದಾಯ ಭವನ ನಿರ್ಮಾಣವಾದರೆ ಕಾರ್ಯಕ್ರಮಗಳಿಗೆ ಅನುಕೂಲವಾಗುತ್ತದೆ. ಕಾಮಗಾರಿ ವಿಳಂಬ ನೋಡಿ ಲ್ಯಾಂಡ್ ಆರ್ಮಿ ಅಧಿಕಾರಿಗಳಿಗೆ ಹತ್ತಾರು ಬಾರಿ ಮನವಿ ಮಾಡಿದರೂ, ತಾಲೂಕು ಎಸ್‌ಸಿ, ಎಸ್‌ಟಿ ಕುಂದು ಕೊರತೆ ಸಭೆಯಲ್ಲಿ ಚರ್ಚಿಸಿದರೂ ಪ್ರಯೋಜನವಾಗಿಲ್ಲ. ಅರ್ಧಕ್ಕೆ ಕಟ್ಟಿ ನಿಲ್ಲಿಸಿದ ಕಟ್ಟಡ ಸ್ಮಾರಕದಂತೆ ಕಾಣುತ್ತಿದ್ದು, ಒಂದೊಂದೇ ಇಟ್ಟಂಗಿಗಳು ಬೀಳುತ್ತಿವೆ. ಅಧಿ ಕಾರಿಗಳು ಈಗಲಾದರೂ ಗಮನಹರಿಸಿ ಕಟ್ಟಡ ಪೂರ್ತಿಗೊಳಿಸಬೇಕು ಎನ್ನುತ್ತಾರೆ ಎಸ್.ಸಿ. ಸಮುದಾಯದ ಮುಖಂಡ ಲಕ್ಕಪ್ಪ ಹುಣಸಿಕಟ್ಟಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳಗಾವಿ: ಆರ್ಥಿಕ ಮುಗ್ಗಟ್ಟು ಮಧ್ಯೆಯೇ ದುಂದುವೆಚ್ಚ: ಪಾಲಿಕೆಯಿಂದ ಲಕ್ಷ, ಲಕ್ಷ ವೆಚ್ಚ!
Waqf: ಬಿಜೆಪಿಯ ಪ್ರತಿಷ್ಠಿತ ಕುಟುಂಬಕ್ಕೂ ಶಾಕ್; ಜೊಲ್ಲೆ ಪುತ್ರನ ಜಮೀನಿಗೆ ವಕ್ಫ್ ಹೆಸರು
ಬೆಳಗಾವಿ: ಕೆಎಲ್‌ಇನಲ್ಲಿ ಕ್ಲಿಷ್ಟಕರ ಹೃದಯ ಶಸ್ತ್ರ ಚಿಕಿತ್ಸೆ ಯಶಸ್ವಿ
ಬೈಲಹೊಂಗಲ: ಗಮನಸೆಳೆದ ಜಾನಪದ ಕಲಾಮೇಳ ಮೆರವಣಿಗೆ
BJP: ವಿಜಯೇಂದ್ರ ನಾಯಕತ್ವವನ್ನು ನಾನು ಒಪ್ಪುವುದಿಲ್ಲ: ರಮೇಶ ಜಾರಕಿಹೊಳಿ
MUST WATCH
ಹೊಸ ಸೇರ್ಪಡೆ
Raichur: ಮನೆ ಮುಂದೆ ಪಟಾಕಿ ಹಚ್ಚಿದ್ದಕ್ಕೆ ಕೊಲೆ!
Udupi: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
25 ಬಿಲಿಯನ್ ಕಿ.ಮೀ ದೂರದ ಅಂತರತಾರಾ ಬಾಹ್ಯಾಕಾಶದಲ್ಲಿ ಸಮಸ್ಯೆಗೆ ಸಿಲುಕಿದ ವೊಯೇಜರ್ 1
Bengaluru: ನಗರದಲ್ಲಿ ಪರಭಾಷಿಕರಿಗೆ ಕನ್ನಡ ಭಾಷೆ ಕಲಿಸುವ “ಆಟೋ ಅಜ್ಮಲ್’
Deepawali: ರಾಜಧಾನಿಯಲ್ಲಿ ದೀಪಾವಳಿ ಬೆಳಕಿನ ಚಿತ್ತಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.