53ರ ಮಹಿಳೆಗೆ 23ರ ಯುವತಿಯ ಚರ್ಮ! 30 ವರ್ಷ ಹಿಂದಿನ ಸ್ಥಿತಿಗೆ ತರುವಲ್ಲಿ ಯಶಸ್ವಿ
ಚರ್ಮದ ಕೋಶಗಳನ್ನು ಪುನರುಜ್ಜೀವನಗೊಳಿಸಿದ ವಿಜ್ಞಾನಿಗಳು
Team Udayavani, Apr 10, 2022, 7:50 AM IST
ಸಾಂದರ್ಭಿಕ ಚಿತ್ರ.
ಲಂಡನ್: ವಯಸ್ಸಾದಂತೆ ಮನುಷ್ಯನ ಚರ್ಮವು ಸುಕ್ಕುಗಟ್ಟುತ್ತಾ ಹೋಗುತ್ತದೆ. ಆದರೆ, ಚರ್ಮದ ವಯಸ್ಸಾಗುವ ಪ್ರಕ್ರಿಯೆಯನ್ನೇ ರಿವರ್ಸ್ ಮಾಡಿದರೆ?
ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಇಂಥದ್ದೊಂದು ಮಹತ್ವದ ಸಾಧನೆ ಮಾಡಿದ್ದಾರೆ. 53 ವರ್ಷದ ಮಹಿಳೆಯೊಬ್ಬರ ಚರ್ಮದ ಕೋಶಗಳನ್ನು 30 ವರ್ಷಗಳಷ್ಟು ಹಿಂದಕ್ಕೆ ತಂದಿದ್ದಾರೆ!
ಚರ್ಮದ ಕೋಶಗಳನ್ನು ಪುನರುಜ್ಜೀವನಗೊಳಿಸುವ ಹೊಸ ವಿಧಾನವನ್ನು ಅವರು ಪತ್ತೆಹಚ್ಚಿದ್ದು, ಕೋಶಗಳಿಗೆ ಯಾವುದೇ ಹಾನಿ ಆಗದಂತೆ ಕೋಶೀಯ ಜೈವಿಕ ಗಡಿಯಾರವನ್ನು ಸುಮಾರು 30 ವರ್ಷಗಳ ಅವಧಿಯಷ್ಟು ಹಿಂದಕ್ಕೆ ತರಲು ಈ ವಿಧಾನವು ನೆರವಾಗಿದೆ.
ಈ ವಿಧಾನದ ಮೂಲಕವಾಗಿ ಭಾಗಶಃ ಪುನರುಜ್ಜೀವನಗೊಳಿಸಲಾದ ಜೀವಕೋಶಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಅವುಗಳು ಯುವಕೋಶಗಳಂತೆಯೇ ವರ್ತಿಸಿರುವುದು ಕಂಡುಬಂದಿದೆ ಎಂದು ಸಂಶೋಧಕರು ಹೇಳಿದ್ದಾರೆ. ಇಲೈಫ್ ಎಂಬ ನಿಯತಕಾಲಿಕೆಯಲ್ಲಿ ಈ ಸಂಶೋಧನಾ ವರದಿ ಪ್ರಕಟವಾಗಿದೆ.
ಡಾಲಿಗೆ ಬಳಸಿದ ವಿಧಾನ:
25 ವರ್ಷಗಳ ಹಿಂದೆ ಡಾಲಿ ಎಂಬ ಮೇಕೆಯ ತದ್ರೂಪಿಯನ್ನು ಸೃಷ್ಟಿಸಲು ಬಳಸಿದ ತಂತ್ರಜ್ಞಾನವನ್ನೇ ಇದಕ್ಕೂ ಬಳಸಲಾಗಿದೆ. ದೇಹದ ಇತರೆ ಅಂಗಾಂಶಗಳನ್ನೂ ಇದೇ ರೀತಿ ಪುನರುಜ್ಜೀವನಗೊಳಿಸಬಹುದು ಎಂದೂ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಮಧುಮೇಹ, ಹೃದಯ ಸಂಬಂಧಿ ಕಾಯಿಲೆ ಮತ್ತು ನರರೋಗಗಳಂತಹ ವಯೋಸಹಜ ಸಮಸ್ಯೆಗಳಿಗೆ ಚಿಕಿತ್ಸೆ ಒದಗಿಸುವುದೇ ಈ ಸಂಶೋಧನೆಯ ಮುಖ್ಯ ಉದ್ದೇಶ ಎಂದೂ ಅವರು ಹೇಳಿದ್ದಾರೆ.
ಇದನ್ನೂ ಓದಿ:ಬೆಳಗಿನ ಜಾವದವರೆಗೂ ಸಿಎಂ,ಜೋಶಿ ಮತ್ತು ಪ್ರಭಾವಿ ಸಚಿವರ ಚರ್ಚೆ!
ಟೈಮ್ ಜಂಪ್:
ವಯಸ್ಸಾದಂತೆ, ನಮ್ಮ ಕೋಶಗಳ ಕಾರ್ಯಕ್ಷಮತೆ ಕುಗ್ಗುತ್ತಾ ಹೋಗುತ್ತದೆ ಮತ್ತು ವಯಸ್ಸಾಗಿರುವ ಗುರುತುಗಳು ನಮ್ಮ ದೇಹದಲ್ಲಿ ಗೋಚರಿಸತೊಡಗುತ್ತವೆ. ರಿಜನರೇಟಿವ್ ಬಯಾಲಜಿ(ಪುನರುತ್ಪಾದಕ ಜೀವಶಾಸ್ತ್ರ)ಯು ಹಳೆಯದ್ದೂ ಸೇರಿದಂತೆ ಎಲ್ಲ ಕೋಶಗಳನ್ನು ಸರಿಪಡಿಸುವ ಕೆಲಸ ಮಾಡುತ್ತದೆ. ಕೇಂಬ್ರಿಡ್ಜ್ ಸಂಶೋಧಕರು ಮೆಚ್ಯುರೇಷನ್ ಫೇಸ್ ಟ್ರಾನ್ಸಿಯೆಂಟ್ ರೀಪ್ರೊಗ್ರಾಮಿಂಗ್(ಎಂಪಿಟಿಆರ್) ಎಂಬ ವಿಧಾನವನ್ನು ಬಳಸಿಕೊಂಡು, ಕೋಶದ ಕಾರ್ಯನಿರ್ವಹಣೆಯನ್ನು ಹಾಗೆಯೇ ಉಳಿಸಿಕೊಂಡು, ಅವುಗಳು ಯುವ ಕೋಶಗಳಾಗಿ ಕಾಣುವಂತೆ ಮಾಡಿದ್ದಾರೆ. ಈ ಮೂಲಕ ವಯಸ್ಸಾದವರ ಚರ್ಮವನ್ನು 30 ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.