ಶತ ಶತಮಾನದ ಇತಿಹಾಸ ಸಾರುವ `ಮಲ್ಲಯ್ಯನ ಮಂಗಳಾರತಿ’


Team Udayavani, Apr 9, 2022, 6:21 PM IST

Untitled-1

ರಬಕವಿ-ಬನಹಟ್ಟಿ : ಭಾರತೀಯರ ಆಚರಣೆ ಮತ್ತು ಸಂಪ್ರದಾಯಗಳಿಗೆ ತನ್ನದೇ ಆದ ಮಹತ್ವಗಳಿವೆ. ಈ ಆಚರಣೆಗಳಿಗೆ ಊತಿಹಾಸಿಕ ಹಿನ್ನಲೆಯೂ ಇದೆ. ಈ ಆಚರಣೆಗಳು ಶತಶತಮಾನದಿಂದಲೂ ನಡೆದುಕೊಂಡು ಬಂದಿರುವಂತಹವು. ನಮ್ಮ ಗ್ರಾಮೀಣ ಪ್ರದೇಶಗಳು ಆಧುನಿಕತೆಯ ಜೊತೆಗೆ ಸಂಪ್ರದಾಯಗಳನ್ನು ಬಿಟ್ಟು ಬಿಡದೆ ಆಚರಿಸುತ್ತಾ ಬಂದಿರುವುದಕ್ಕೆ ಐದೇಶಿ ಸಂದರ್ಭದಲ್ಲಿ ಮಲ್ಲಯ್ಯನ ದೇವಸ್ಥಾನದಲ್ಲಿ ನಡೆಯುವ ಐದು ದಿನಗಳ ಮಂಗಳಾರತಿ ಕಾರ್ಯಕ್ರಮ ವಿಶೇಷವಾಗಿದೆ.

ದೇವರನ್ನು ಕರೆದುಕೊಂಡ ದಿನದಿಂದ ಐದು ದಿನಗಳ ಕಾಲ ಪ್ರತಿ ರಾತ್ರಿ 9 ಗಂಟೆಗೆ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಮಲ್ಲಯ್ಯನ ಮಂಗಳಾರತಿ ಕಾರ್ಯಕ್ರಮ ನಡೆಯುತ್ತದೆ. ಈ ಮಂಗಳಾರತಿಗೆ ನಗರದ ನೂರಾರು ಜನರು ಬಂದು ಸಾಮೂಹಿಕವಾಗಿ ಮಂಗಳಾರುತಿ ಮಾಡುತ್ತಾರೆ. ಗಂಡು ಮಕ್ಕಳು ದಿವಟಿಗೆಗಳನ್ನು ಹಿಡಿದುಕೊಂಡು ಬಂದರೆ ಮಹಿಳೆಯರು ಆರತಿಯನ್ನು ತರುತ್ತಾರೆ.

ಹಿಂದಿನ ಕಾಲದಲ್ಲಿ ಶ್ರೀಶೈಲಕ್ಕೆ ಹೋಗಲು ಯಾವುದೇ ಸಾಧನಗಳು ಇರಲಿಲ್ಲ. ಭಕ್ತರು ನಡೆದುಕೊಂಡು ಇಲ್ಲವೆ ಬಂಡಿಗಳನ್ನು ಕಟ್ಟಿಕೊಂಡು ಹೋಗುವುದು ವಾಡಿಕೆ. ಆದರಲ್ಲಿ ನಡೆದುಕೊಂಡು ಹೋಗುವವರೆ ಜಾಸ್ತಿ. ತಮ್ಮ ಸ್ಥಳದಿಂದ ಆಂಧ್ರಪ್ರದೇಶದ ಮಲ್ಲಿಕಾರ್ಜುನ ದೇವಸ್ಥಾನವನ್ನು ತಲುಪುವವರೆಗೆ ಆದ ನೋವು ಸಂಕಟ, ಸುಖ ದುಃಖಗಳನ್ನು ಮತ್ತು ಇಲ್ಲಿಂದ ನಡೆಯುತ್ತ ಶ್ರೀಶೈಲದವರೆಗೆ ಹೋದರೆ ಮಲ್ಲಿಕಾರ್ಜುನ  ಆಶೀರ್ವಾದ ರೂಪದಲ್ಲಿ ಭಕ್ತರಿಗೆ ಏನು ಕೊಡುತ್ತಾನೆ ಇವೆಲ್ಲ ವಿಷಯಗಳು ಮಂಗಳಾರತಿಯಲ್ಲಿವೆ. ನಡೆಯುತ್ತಾ ಹೋಗುವವರ ಅನುಭವದ ಪದಗಳು, ಸಾಲುಗಳು ಮಂಗಳಾರತಿಯಲ್ಲಿವೆ.

ಶ್ರೀಶೈಲಕ್ಕೆ ಹೋಗುವ ಮಾರ್ಗದಲ್ಲಿ ಕಡಿದಾದ ಬೆಟ್ಟಗಳನ್ನು ಹತ್ತಿಕೊಂಡು ಹೋಗಬೇಕು. ಮಂಗಳಾರತಿಯಲ್ಲಿ ಬರುವ ಸಾಲುಗಳು` ಒಬ್ಬರ ಕೈಗಳ ಒಬ್ಬರ ಹಿಡಿಯುತ ಹಬ್ಬಿದ ಗಿರಿಗಳ ಏರುತಲಿ, ಹುಬ್ಬಿ ಹಾಳಿಗಳ ಬೀಸುತಲಿ, ಯಾಲಕಿ ಪುಡಿಗಳ ನೀಡುತಲಿ’ ಅದೇ ರೀತಿಯಾಗಿ ಗಿರಿಗಳನ್ನು ಏರುವಾಗ ಆಯ ತಪ್ಪಿದರೆ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಅದಕ್ಕಾಗಿ`ಕಾಲ ಜಾರಿತೋ ಕೋಲ ಮುರಿಯಿತೋ ಕೊಪ್ಪರಿಗೆ ಒಡಿಯಿತೋ ಮಲ್ಲಯ್ಯ’

ಇದು ಒಂದು ನುಡಿಯಾದರೆ ಇನ್ನೋಂದು ನುಡಿ ‘ಇಲ್ಲಿಂದ ಅಲ್ಲಿಗೆ ಹೋದರತ್ತ ಏನ್ ಕೋಡುವಣೋ ಮಲ್ಲಯ್ಯ, ಏರಿನೆಂದರ ಕುದರಿ ಛತ್ತರಗಿ ಸಂಪತ್ತು ಕೊಡುವಣೋ ಮಲ್ಲಯ್ಯ, ಧನವ ಕೊಟ್ಟವ ಕೊಟ್ಟ ಧಾನ್ಯವ ಕೊಟ್ಟ ಸಿರಿಯ ಕೊಟ್ಟ ಸಂಪತ್ತು ಕೊಟ್ಟ’

ಈ ರೀತಿಯ ಒಟ್ಟು ಐವತ್ತಕ್ಕೂ ಹೆಚ್ಚು ನುಡಿಗಳ ಮಂಗಳಾರತಿ ಇದಾಗಿದೆ. ನಡೆಯುತ್ತಾ ಹೋಗುತ್ತಿರುವ ಸಂದರ್ಭದಲ್ಲಿ ಕೆಲವು ಊರು ಮತ್ತು ದೇವಸ್ಥಾನಗಳು ಬರುತ್ತವೆ. ಅವುಗಳ ಮಹತ್ವವನ್ನು ಮಂಗಳಾರತಿಯಲ್ಲಿ ವರ್ಣಿಸಲಾಗಿದೆ.

ಇಂತಹ ವಿಶಿಷ್ಟವಾದ ಮಂಗಳಾರತಿಯನ್ನು ಐದೇಶಿ ಸಂದರ್ಭದಲ್ಲಿ ಇಂದಿನ ದಿನಮಾನಗಳಲ್ಲೂ ಹಾಡುತ್ತಾ ಬಂದಿರುವುದು ಅಪರೂಪ. ಜಾತಿ, ಮತ ಪಂಥ ಹಿರಿಯರು, ಕಿರಿಯರು, ಸ್ತ್ರಿ ಪುರುಷ, ಬಡವ ಶ್ರೀಮಂತ ಎನ್ನದೆ ಎಲ್ಲರೂ ಒಂದಾಗಿ ಹಾಡುವ ಈ ಮಂಗಳಾರುತಿಗೆ ಶತ ಶತಮಾನದ ಇತಿಹಾಸವಿದೆ.

ಕಿರಣ ಶ್ರೀಶೈಲ ಆಳಗಿ

ಟಾಪ್ ನ್ಯೂಸ್

rohit

BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು

kohli

Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ

MB-Patil-Mi

ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್‌

police crime

Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?

Maha Kumbh 2025: ನಾಗಾ ಸಾಧುಗಳಿಗೂ…ಅಘೋರಿಗಳಿಗೂ ಇರುವ ವ್ಯತ್ಯಾಸವೇನು? ಆಹಾರ ಪದ್ಧತಿ ಹೇಗೆ

Maha Kumbh 2025: ನಾಗಾ ಸಾಧುಗಳಿಗೂ…ಅಘೋರಿಗಳಿಗೂ ಇರುವ ವ್ಯತ್ಯಾಸವೇನು? ಆಹಾರ ಪದ್ಧತಿ ಹೇಗೆ

1-dee

Maha Kumbh; 7 ಕೋಟಿ ರುದ್ರಾಕ್ಷಿಗಳಿಂದ 12 ಜ್ಯೋತಿರ್ ಲಿಂಗಗಳ ರಚನೆ

Gudibande: ಬುದ್ದಿವಾದ ಹೇಳಿದ್ದೆ ತಪ್ಪಾಯ್ತು… ವಿದ್ಯುತ್ ಹರಿಸಿ ವ್ಯಕ್ತಿಯ ಕೊಲೆ ಯತ್ನ

Gudibande: ಬುದ್ದಿವಾದ ಹೇಳಿದ್ದೆ ತಪ್ಪಾಯ್ತು… ವಿದ್ಯುತ್ ಹರಿಸಿ ವ್ಯಕ್ತಿಯ ಕೊಲೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Thimmapura

Excise: ಅಬಕಾರಿ ಇಲಾಖೆಯಲ್ಲಿ ವರ್ಗಾವಣೆಗೆ ಇನ್ನು ಕೌನ್ಸೆಲಿಂಗ್‌: ಸಚಿವ ತಿಮ್ಮಾಪುರ

ನಿರ್ವಹಣೆಯೇ ಇಲ್ಲದ ಬಸ್‌ ನಿಲ್ದಾಣ! ರಾತ್ರಿ ವೇಳೆ ಬಸ್‌ಗಳ ಓಡಾಟ ತೀರಾ ಕಡಿಮೆ

ನಿರ್ವಹಣೆಯೇ ಇಲ್ಲದ ಬಸ್‌ ನಿಲ್ದಾಣ! ರಾತ್ರಿ ವೇಳೆ ಬಸ್‌ಗಳ ಓಡಾಟ ತೀರಾ ಕಡಿಮೆ

2-rabakavi

Rabakavi-Banahatti: ಯಲ್ಲಟ್ಟಿ ಬಳಿ ಸಿಎನ್‌ಜಿ ಟ್ಯಾಂಕರ್ ಪಲ್ಟಿ

Mudhol: ಹಸುಗಳ ಕೆಚ್ಚಲು ಕೋಯ್ದು ವಿಕೃತಿ ಮೆರೆದವರನ್ನು ಕೂಡಲೇ ಬಂಧಿಸಿ: ಪ್ರಮೋದ್ ಮುತಾಲಿಕ್

Mudhol: ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದವರನ್ನು ಕೂಡಲೇ ಬಂಧಿಸಿ: ಪ್ರಮೋದ್ ಮುತಾಲಿಕ್

Mudhol:‌‌ ಎರಡು ದಿನಗಳ ಕಾರ್ಯಾಚರಣೆ ಬಳಿಕ ಮೊಸಳೆ‌ ಸೆರೆ

Mudhol:‌‌ ಎರಡು ದಿನಗಳ ಕಾರ್ಯಾಚರಣೆ ಬಳಿಕ ಮೊಸಳೆ‌ ಸೆರೆ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

rohit

BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು

kohli

Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ

MB-Patil-Mi

ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್‌

puttige-8-

Puthige Matha: ವಿಶ್ವ ಗೀತಾ ಪರ್ಯಾಯಕ್ಕೆ‌ ಇಂದಿಗೆ ವರ್ಷ ಪೂರ್ಣ

police crime

Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.