ಬರಿದಾಗುತ್ತಿದೆ ಕೃಷ್ಣೆಯ ಒಡಲು ; ಕೃಷ್ಣೆಯನ್ನೇ ನಂಬಿದ ನೂರಾರು ಹಳ್ಳಿಯ ರೈತರಲ್ಲಿ ಆತಂಕ
Team Udayavani, Apr 9, 2022, 6:14 PM IST
ರಬಕವಿ-ಬನಹಟ್ಟಿ : ತಾಲೂಕಿನ ಹಿಪ್ಪರಗಿ ಸೇತುವೆ ಕೆಳಭಾಗದಲ್ಲಿ ಕೃಷ್ಣಾ ನದಿ ಸಂಪೂರ್ಣ ಬರಿದಾಗುತ್ತಿದ್ದು, ನದಿ ಅಕ್ಕಪಕ್ಕದ ಜನರಿಗೆ ನೀರಿನ ಅಭಾವದ ಶಂಕೆ ಮೂಡಿ ಆತಂಕ ಪಡುವಂತಾಗಿದೆ.
ಕೃಷ್ಣೆಯನ್ನೇ ನಂಬಿದ ರಬಕವಿ ಬನಹಟ್ಟಿ, ಜಮಖಂಡಿ ಹಾಗೂ ಅಥಣಿ ತಾಲೂಕಿನ ನೂರಾರು ಹಳ್ಳಿಗಳು ಸಾವಿರಾರು ಏಕರೆ ಜಮೀನಿಗೆ ಈ ನದಿಯೇ ಜೀವನದಿಯಾಗಿದೆ. ಇನ್ನೂ ಖಾಲಿಯಾಗುವ ಲಕ್ಷಣಗಳು ಗೋಚರಿಸುತ್ತಿರುವುದರಿಂದ ಈ ಭಾಗದ ರೈತರಲ್ಲಿ ಆತಂಕದ ಚಾಯೆ ಮೂಡಿದೆ.
ಈಗತಾನೇ ಕಬ್ಬು ಕಟಾವು ಮುಗಿದು ಕುಳೆ ಬೆಳೆಗಳು ಚಿಗುರುತ್ತಿವೆ. ಈಗ ನದಿಯಲ್ಲಿ ನೀರು ಕಡಿಮೆಯಾದರೆ ಬೆಳೆಗಳು ಒಣಗುತ್ತವೆ ಎಂಬ ಭಯ ಶುರುವಾಗಿದೆ. ಆದರೆ ಅಧಿಕಾರಿಗಳು ಹೇಳುವಂತೆ ಈ ಬಾರಿ ಬೇಸಿಗೆಯಲ್ಲಿ ನೀರಿನ ಯಾವುದೇ ಅಭಾವವಾಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದರೂ ಬೆಸಿಗೆಯಲ್ಲಿನ ಬೆಳೆಗಳಾದ ಶೇಂಗಾ, ಮೆಕ್ಕೆಜೋಳ ಈಗ ತೆನೆಗಟ್ಟುತ್ತಿವೆ ಈಗ ನೀರಿನ ತೊಂದರೆಯಾದರೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗುತ್ತದೆ.
ಹಿಪ್ಪರಗಿ ಸೇತುವೆಯ ಒಟ್ಟು ನೀರಿನ ಸಾಮರ್ಥ್ಯ 6 ಟಿಎಂಸಿ. ಆದರೆ ಈಗ 5.16 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಸೇತುವೆ ಮೇಲ್ಬಾಗದ ಜನರಿಗೆ ಬೇಸಿಗೆ ಮುಗಿಯುವ ವರೆಗೂ ನಿರಿನ ಅಭಾವವಾಗಲು ಸಾಧ್ಯವಿಲ್ಲ ಎನ್ನುತ್ತಾರೆ ನೀರಾವರಿ ಇಲಾಖೆಯ ಅಧಿಕಾರಿ ವಿಠ್ಠಲ ನಾಯಕ್.
ಇದನ್ನೂ ಓದಿ : ಕೆನಡಾದಲ್ಲಿ ನಡೆದ ಗುಂಡಿನ ದಾಳಿಗೆ ಭಾರತೀಯ ವಿದ್ಯಾರ್ಥಿ ಸಾವು
ಜಲಾಶಯದ ಮುಂಬದಿಯಲ್ಲಿ ನೀರು ಖಾಲಿಯಾದ ಕಾರಣ ಈ ಭಾಗದ ಹಳ್ಳಿಗಳ ರೈತರು ಜಲಾಶಯದಿಂದ 1 ಟಿಎಂಸಿ ಯಷ್ಟಾದರೂ ನೀರನ್ನು ಕೆಳಾಬಾಗಕ್ಕೆ ಬಿಡಲು ಮನವಿ ಮಾಡಲಾಗಿದೆ. ನೀರು ಬಿಟ್ಟರೆ ಅದು ಚಿಕ್ಕಪಡಸಲಗಿ ಬ್ಯಾರೇಜ್‌ವರೆಗೂ ಹೋಗಿ ಸಂಗ್ರಹವಾಗುತ್ತದೆ. ಇದರಿಂದ ಈ ಭಾಗದ ರೈತರಿಗೂ ನೀರಿನ ಯಾವುದೇ ತೊಂದರೆಯಾಗುವುದಿಲ್ಲ ಎನ್ನುತ್ತಾರೆ ತುಬಚಿ ಗ್ರಾಮದ ರೈತರಾದ ಸುರೇಶಗೌಡ ಪಾಟೀಲ.
ರಬಕವಿ ಬನಹಟ್ಟಿ ನಗರಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಜಕ್‌ವೆಲ್ ಇರುವ ಮಹೀಷವಾಡಗಿ ಸೇತುವೆಯಲ್ಲಿ ಎರಡು ಟಿಎಂಸಿ ನೀರು ಸಂಗ್ರಹವಿದ್ದು, ಬೇಸಿಗೆ ಕಾಲ ಮುಗಿಯುವವರೆಗೂ ಈ ಬಾರಿ ಕುಡಿಯುವ ನೀರಿನ ಯಾವುದೇ ತೊಂದರೆಯಾಗುವುದಿಲ್ಲ ಎಂದು ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ
Excise: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್
Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!
MUST WATCH
ಹೊಸ ಸೇರ್ಪಡೆ
Mangaluru: ರಾತ್ರಿ ಪ್ರಿಪೇಯ್ಡ್ ಆಟೋ ಇಲ್ಲದೆ ಪ್ರಯಾಣಿಕರ ಪರದಾಟ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.