![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 10, 2022, 4:45 AM IST
ಕಾಪು: ಮೊಗವೀರ ಸಮಾಜದ ಪ್ರಧಾನ ಆರಾಧನ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಶನಿವಾರ ಬ್ರಹ್ಮಕಲಶ ಪುಣ್ಯೋತ್ಸವ ಮತ್ತು ಮಹಾಅನ್ನಸಂತರ್ಪಣೆ ಸಂಪನ್ನಗೊಂಡಿತು.
ವಿದ್ವಾನ್ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿಗಳ ನೇತೃತ್ವದಲ್ಲಿ ಹಿರಿಯ ಅರ್ಚಕ ವೇ| ಮೂ| ವೆಂಕಟ ನರಸಿಂಹ ಉಪಾಧ್ಯಾಯ, ವೇ| ಮೂ| ರಾಘವೇಂದ್ರ ಉಪಾಧ್ಯಾಯ, ವೇ| ಮೂ| ವಿಷ್ಣುಮೂರ್ತಿ ಉಪಾಧ್ಯಾಯ ಅವರ ಸಹಭಾಗಿತ್ವದೊಂದಿಗೆ ವಾಸ್ತುತಜ್ಞ ವಿದ್ವಾನ್ ಸುಬ್ರಹ್ಮಣ್ಯ ಭಟ್ ಹಾಗೂ ಜೋತಿಷಿ ಪಯ್ಯನ್ನೂರು ಮಾಧವನ್ ಪೊದುವಾಳ್ ಉಪಸ್ಥಿತಿಯಲ್ಲಿ ಕಾರ್ಯಕ್ರಮಗಳು ಜರಗಿದವು.
ಬೆಳಗ್ಗೆ 9.36ರ ಮುಹೂರ್ತದಲ್ಲಿ ಶ್ರೀ ಮಹಾಲಕ್ಷಿ$¾àಗೆ ಬ್ರಹ್ಮಕುಂಭಾಭಿಷೇಕ, ಶ್ರೀ ಪ್ರಸನ್ನ ಗಣಪತಿ ಮತ್ತು ಶ್ರೀ ಭದ್ರಕಾಳಿ ಅಮ್ಮನವರಿಗೆ ಬ್ರಹ್ಮಕಲಶ ನಡೆಯಿತು. ಬಳಿಕ ಪಲ್ಲಪೂಜೆಯೊಂದಿಗೆ ಮಹಾ ಅನ್ನಸಂತರ್ಪಣೆಗೆ ಚಾಲನೆ ನೀಡಲಾಯಿತು. 70 ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು.
ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ, ಬ್ರಹ್ಮಕಲಶ ಪುಣ್ಯೋತ್ಸವ ಸಮಿತಿ ಅಧ್ಯಕ್ಷ ಡಾ| ಜಿ. ಶಂಕರ್, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ. ಅಮೀನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಮುಂಬಯಿ ಜೀರ್ಣೋದ್ಧಾರ ಸಮಿತಿ ವೇದಪ್ರಕಾಶ್ ಶ್ರೀಯಾನ್, ಮಹಿಳಾ ಸಂಘದ ಅಧ್ಯಕ್ಷೆ ಅಪ್ಪಿ ಸಾಲ್ಯಾನ್, ಶಾಸಕರಾದ ಲಾಲಾಜಿ ಆರ್. ಮೆಂಡನ್, ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಯು.ಆರ್. ಸಭಾಪತಿ, ಪ್ರಮುಖರಾದ ಯಶ್‌ಪಾಲ್ ಸುವರ್ಣ, ಬಿ. ಕೇಶವ ಕುಂದರ್, ಶ್ರೀಪತಿ ಭಟ್ ಉಚ್ಚಿಲ, ಆನಂದ ಸಿ. ಕುಂದರ್, ನಯನಾ ಯು. ಗಣೇಶ್, ವೈ. ಗಂಗಾಧರ ಸುವರ್ಣ, ಭುವನೇಂದ್ರ ಕಿದಿಯೂರು, ಕೇಶವ ಕೋಟ್ಯಾನ್, ಶಿವಪ್ಪ ಟಿ. ಅಮೀನ್, ಎನ್.ಟಿ. ಅಮೀನ್, ಹರಿಯಪ್ಪ ಕೋಟ್ಯಾನ್, ಆನಂದ ಪಿ. ಸುವರ್ಣ, ಶಿಲ್ಪಾ ಗಂಗಾಧರ ಸುವರ್ಣ, ರಾಜೇಂದ್ರ ಸುವರ್ಣ, ಮೋಹನ್ ಬೆಂಗ್ರೆ, ಅನಿಲ್ ಕುಮಾರ್, ಭರತ್ ಉಳ್ಳಾಲ, ದಯಾನಂದ ಕೆ. ಸುವರ್ಣ, ಉಮೇಶ್ ಕರ್ಕೇರ, ಎನ್.ಟಿ. ಅಮೀನ್ ಮಲ್ಪೆ, ಮಹಾಜನ ಸಂಘದ ಸುಭಾಶ್ಚಂದ್ರ ಕಾಂಚನ್, ಸುಧಾಕರ ಕುಂದರ್, ಭರತ್ ಎರ್ಮಾಳು, ಮೋಹನ ಕರ್ಕೇರ, ಜೀರ್ಣೋದ್ಧಾರ ಸಮಿತಿಯ ಶಂಕರ್ ಸಾಲ್ಯಾನ್, ವಿನಯ ಕರ್ಕೇರ ಮಲ್ಪೆ, ಕ್ಷೇತ್ರಾಡಳಿತ ಸಮಿತಿಯ ನಾರಾಯಣ ಕರ್ಕೇರ, ಶಿವ ಕುಮಾರ್ ಎರ್ಮಾಳು ಮೊದಲಾದವರು ಉಪಸ್ಥಿತರಿದ್ದರು.
You seem to have an Ad Blocker on.
To continue reading, please turn it off or whitelist Udayavani.