ಮಲ್ಪೆ ಕೊಳ ಬಾಲಕರ ಶ್ರೀರಾಮ ಭಜನ ಮಂದಿರ: ಇಂದು ಬ್ರಹ್ಮ ಕುಂಭಾಭಿಷೇಕ
Team Udayavani, Apr 10, 2022, 5:23 AM IST
ಮಲ್ಪೆ: ಮಲ್ಪೆ ಕೊಳ ಬಾಲಕರ ಶ್ರೀರಾಮ ಭಜನ ಮಂದಿರದ ಸುವರ್ಣ ಮಹೋತ್ಸವ, ಮಹಾ ಮಂಗಲದ ಅಂಗವಾಗಿ ಎ. 10ರಂದು ಬ್ರಹ್ಮಕುಂಭಾಭಿಷೇಕ ಮತ್ತು ಮಹಾ ಅನ್ನಸಂತರ್ಪಣೆ ನಡೆಯಲಿದೆ.
ಬೆಳಗ್ಗೆ 4.30ರಿಂದ ಗುಜ್ಜರ್‌ಬೆಟ್ಟು ಪರಾರಿ ಮಠ ವೇ| ಮೂ| ಹಯವದನ ಭಟ್ ನೇತೃತ್ವದಲ್ಲಿ ಪುಣ್ಯಾಹ ವಾಚನ, ಗಣಪತಿ ಯಾಗ, ಪ್ರಧಾನ ಹೋಮ, ಸಪ್ತದಶೋತ್ತರ ದ್ವಿಶತ ಕಲಶಾರ್ಚನೆ, ಶ್ರೀ ದೇವರಿಗೆ ವಿಶೇಷ ಪ್ರಮಾಣದ ಶರ್ಕರಾಭಿಷೇಕ ಪೂರ್ವಕ ಪಂಚಾಮೃತ ಸ್ನಪನ, 8.45ರ ವೃಷಭ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕುಂಭ ಕಲಶಾಭಿಷೇಕ, 9.30ರಿಂದ ಲಕ್ಷ ತುಳಸಿ ಅರ್ಚನೆ, ಮಧ್ಯಾಹ್ನ 11.30ಕ್ಕೆ ಮಹಾಪೂಜೆ, ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ, ಸಂಜೆ 5.30ರಿಂದ ಪುಷ್ಪಾಲಂಕಾರ ಪೂಜೆ, ದೀಪಾರಾಧನೆ ಸಹಿತ ರಂಗಪೂಜೆ ನಡೆಯಲಿರುವುದು.
ಸಂಜೆ 7.30ರಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಯುವ ಬ್ರಿಗೇಡ್‌ನ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಮುಖ್ಯ ಭಾಷಣ ಮಾಡಲಿರುವರು.
ಸಮ್ಮಾನ ಹಾಗೂ ಸಮಾಜಸೇವಾ ಸಂಘ ಸಂಸ್ಥೆ, ವ್ಯಕ್ತಿಗಳಿಗೆ ಗೌರವಧನ, ಆಟೋಟ ಸ್ಫರ್ಧೆಯ ಬಹುಮಾನ ವಿತರಣೆ, ಮಂದಿರದ ಹಿರಿಯ ಸದಸ್ಯರಿಗೆ ಗೌರವ ಸಮರ್ಪಣೆ ನಡೆಯಲಿದೆ.
ನಾಳೆ ಮುಖ್ಯಮಂತ್ರಿ ಭೇಟಿ
ಎ. 11ರಂದು ಸಂಜೆ 5.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಜನ ಮಂದಿರಕ್ಕೆ ಭೇಟಿ ನೀಡಲಿದ್ದಾರೆ ಎಂದು ಮಂದಿರದ ಅಧ್ಯಕ್ಷ ಕರುಣಾಕರ್ ಎಸ್. ಸಾಲ್ಯಾನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.