ಧ್ವನಿಪೆಟ್ಟಿಗೆಯ ಕ್ಯಾನ್ಸರ್‌

ಕಾರಣಗಳು, ಹೊರೆ ಮತ್ತು ಚಿಕಿತ್ಸೆ

Team Udayavani, Apr 10, 2022, 12:31 PM IST

dhvani

ನಮ್ಮ ದೇಹದಲ್ಲಿ ಉಂಟಾಗುವ ಕ್ಯಾನ್ಸರ್‌ಗಳ ಪೈಕಿ ಲ್ಯಾರಿಂಕ್ಸ್‌ ಅಥವಾ ಧ್ವನಿಪೆಟ್ಟಿಗೆಯ ಕ್ಯಾನ್ಸರ್‌ ಪ್ರಕರಣಗಳು ಶೇ. 2.63ರಷ್ಟಿವೆ. ಮಹಿಳೆಯರಿಗಿಂತ ಪುರುಷರಲ್ಲಿ ಇದು ಹತ್ತು ಪಟ್ಟು ಹೆಚ್ಚು ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತದೆ.

ಧ್ವನಿಪೆಟ್ಟಿಗೆಯ ಕ್ಯಾನ್ಸರ್‌ಗೆ ಅತೀ ಸಾಮಾನ್ಯ ಕಾರಣಗಳು ಎಂದರೆ ತಂಬಾಕು ಸೇವನೆ ಮತ್ತು ಮದ್ಯಪಾನ. ಮದ್ಯಪಾನ ಮತ್ತು ತಂಬಾಕು ಸೇವನೆಗಳು ಸಂಯೋಜಿತ ಪರಿಣಾಮ ಹೊಂದಿದ್ದು, ಧ್ವನಿಪೆಟ್ಟಿಗೆಯ ಕ್ಯಾನ್ಸರ್‌ ಉಂಟಾಗುವ ಅಪಾಯವನ್ನು ಶೇ. 50ರಷ್ಟು ಹೆಚ್ಚಿಸುತ್ತವೆ. ಸಿಗರೇಟಿನಲ್ಲಿ ಬೆಂಜೊಪೈರೀನ್‌ ಮತ್ತು ಹೈಡ್ರೊಕಾರ್ಬನ್‌ಗಳಿದ್ದು, ಇವೆಲ್ಲವೂ ಕ್ಯಾನ್ಸರ್‌ಕಾರಕಗಳಾಗಿವೆ.

ಪರೋಕ್ಷ ಧೂಮಪಾನಿಗಳು ಕೂಡ ಧೂಮಪಾನಿಗಳಷ್ಟೇ ಅಪಾಯ ಹೊಂದಿರುತ್ತಾರೆ ಎಂಬುದು ಅಧ್ಯಯನಗಳಿಂದ ದೃಢಪಟ್ಟಿದೆ. ಮದ್ಯಪಾನದ ವಿಚಾರಕ್ಕೆ ಬಂದರೆ, ಬೀರು ಮತ್ತು ಇತರ ಕಡು ಮದ್ಯಗಳು ವೈನ್‌ಗಿಂತ ಹೆಚ್ಚು ಅಪಾಯಕಾರಿಯಾಗಿವೆ.

ಆ್ಯಸ್ಬೆಸ್ಟಾಸ್‌, ನಿಕ್ಕೆಲ್‌ ಸಂಯುಕ್ತಗಳು, ಸಾಸಿವೆ ಅನಿಲ, ಪೆಟ್ರೋಲಿಯಂ ಉತ್ಪನ್ನಗಳಂತಹ ವಿಷಕಾರಿ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವ ಕೆಲವು ಔದ್ಯಮಿಕ ಕಾರ್ಮಿಕರು ಕೂಡ ಧ್ವನಿಪೆಟ್ಟಿಗೆಯ ಕ್ಯಾನ್ಸರ್‌ಗೆ  ತುತ್ತಾಗುವ ಅಪಾಯವನ್ನು ಹೊಂದಿರುತ್ತಾರೆ.

ಧ್ವನಿಪೆಟ್ಟಿಗೆಯ ಕ್ಯಾನ್ಸರ್‌ ರೋಗಿಗಳಿಗೆ ಹೊಟ್ಟೆಯಲ್ಲಿರುವ ವಸ್ತುಗಳು ಅನ್ನನಾಳದ ಮೂಲಕ ಬಾಯಿಗೆ ಬರುವ ರಿಫ್ಲಕ್ಸ್‌ ಕಾಯಿಲೆಯ ಜತೆಗೆ ಸಂಬಂಧ ಹೊಂದಿರುತ್ತಾರೆ. ಗ್ಯಾಸ್ಟ್ರಿಕ್‌ ಆ್ಯಸಿಡ್‌ ರಿಫ್ಲಕ್ಸ್‌ನಿಂದ ಧ್ವನಿಪೆಟ್ಟಿಗೆಯ ದೀರ್ಘ‌ಕಾಲಿಕ ತೊಂದರೆ ಉಂಟಾಗುತ್ತದೆ. ಧ್ವನಿಪೆಟ್ಟಿಗೆಯ ಇತರ ಹಲವು ತೊಂದರೆಗಳು ಕೂಡ ಕಂಡುಬರಬಹುದಾಗಿದ್ದು, ಇವುಗಳನ್ನು ಪ್ರಿಮ್ಯಾಲಿಗ್ನಂಟ್‌ ಹಾನಿಗಳು ಎನ್ನುತ್ತಾರೆ. ಈ ಹಾನಿಗಳು ಕ್ಯಾನ್ಸರ್‌, ಲ್ಯುಕೊಪ್ಲೇಕಿಯಾ, ಹೈಪರ್‌ಕೆರಟೋಸಿಸ್‌ ಮತ್ತು ಕಾರ್ಸಿನೋಮಾ ಆಗಿ ಪರಿವರ್ತನೆಯಾಗುವ ಅಪಾಯಗಳಿವೆ. ಇಂತಹ ಪರಿಸ್ಥಿತಿಯಲ್ಲಿ ರೋಗ ಕಾಣಿಸಿಕೊಂಡ ಬಳಿಕ ಗುಣಹೊಂದಲು ಫ‌ಜೀತಿ ಪಡುವುದಕ್ಕಿಂತ ರೋಗ ಬಾರದಂತೆ ತಡೆಯುವುದು ಮೇಲು ಎಂಬ ಉಕ್ತಿ ಇಲ್ಲಿ ಉಪಯುಕ್ತ.

ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸುವುದು, ವಿಷಾಂಶಮುಕ್ತ ಕೆಲಸದ ಪರಿಸರ ಹಾಗೂ ಆರೋಗ್ಯಕರ ಆಹಾರಾಭ್ಯಾಸ ಮತ್ತು ಜೀವನ ಕ್ರಮಗಳು ಧ್ವನಿಪೆಟ್ಟಿಗೆಗೆ ಹಾನಿ ಉಂಟಾಗದಂತೆ ತಡೆಯುತ್ತವೆ, ಹಾನಿ ಉಂಟಾದರೂ ಬೇಗನೆ ವಾಸಿಯಾಗುವಂತೆ ಮಾಡುತ್ತವೆ. ಧ್ವನಿಪೆಟ್ಟಿಗೆಯ ಕ್ಯಾನ್ಸರ್‌ ರೋಗಿಗಳು ಸಾಮಾನ್ಯವಾಗಿ ಒಡಕು, ದೊರಗು ಧ್ವನಿಯನ್ನು ಹೊಂದಿರುತ್ತಾರೆ. ಕ್ಯಾನ್ಸರ್‌ಗೆ ತುತ್ತಾಗುವ ವಯೋಗುಂಪಿನಲ್ಲಿರುವ, ಅಪಾಯಾಂಶಗಳ ಇತಿಹಾಸ ಹೊಂದಿರುವ, ದೊರಗು- ಒಡಕು ಧ್ವನಿಯನ್ನು ಮೂರು ವಾರಗಳಿಗಿಂತ ಹೆಚ್ಚು ಸಮಯದಿಂದ ಹೊಂದಿರುವ ವ್ಯಕ್ತಿಗಳು ಇಎನ್‌ಟಿ ಶಸ್ತ್ರಚಿಕಿತ್ಸಾ ತಜ್ಞ ವೈದ್ಯರನ್ನು ಸಂಪರ್ಕಿಸಿ ಧ್ವನಿಪೆಟ್ಟಿಗೆಯ ವಿಸ್ತೃತ ತಪಾಸಣೆಗೆ ಒಳಗಾಗಬೇಕು ಎಂದು ಶಿಫಾರಸು ಮಾಡಲಾಗಿದೆ.

ಧ್ವನಿಪೆಟ್ಟಿಗೆಯ ತಪಾಸಣೆಯು ಹೊರರೋಗಿ ವಿಭಾಗದಲ್ಲಿ ನಡೆಸುವ ಪ್ರಕ್ರಿಯೆಯಾಗಿದೆ. ಇದರಲ್ಲಿ ಧ್ವನಿಪೆಟ್ಟಿಗೆಯ ವಿಸ್ತೃತ ದಾಖಲೀಕರಣ ನಡೆಸುವ ಫ್ಲೆಕ್ಸಿಬಲ್‌ ಫೈಬರ್‌ ಆಪ್ಟಿಕ್‌ ಅಥವಾ ರಿಜಿಡ್‌ ಅಥವಾ ವೀಡಿಯೋ ಲ್ಯಾರಿಂಜೊಸ್ಕೊಪಿ ನಡೆಸಲಾಗುತ್ತದೆ. ಪರೀಕ್ಷೆಯ ಸಂದರ್ಭದಲ್ಲಿ ಸಂಶಯಾತ್ಮಕ ಬೆಳವಣಿಗೆ ಕಂಡುಬಂದರೆ ಕ್ಯಾನ್ಸರನ್ನು ಖಚಿತಪಡಿಸಿಕೊಳ್ಳಲು ಧ್ವನಿಪೆಟ್ಟಿಗೆಯ ಬಯಾಪ್ಸಿಯನ್ನು ನಡೆಸಬೇಕು.

ಎಲ್ಲ ರೋಗಿಗಳ ಕುತ್ತಿಗೆ ಮತ್ತು ಎದೆಯ ಸಿಟಿ ಸ್ಕ್ಯಾನ್‌ ನಡೆಸುವುದರಿಂದ ಕ್ಯಾನ್ಸರ್‌ ಎಷ್ಟು ಪ್ರಮಾಣದಲ್ಲಿ ಹರಡಿದೆ ಎನ್ನುವುದನ್ನು ತಿಳಿಯಲು ಸಾಧ್ಯವಾಗುತ್ತದೆ. ತಪಾಸಣೆಯ ಸಂದರ್ಭದಲ್ಲಿ ಗಡ್ಡೆಯ ಗಾತ್ರ, ಹರಡಿರುವ ಪ್ರಮಾಣವನ್ನು ಆಧರಿಸಿ ಧ್ವನಿಪೆಟ್ಟಿಗೆಯ ಹಂತಗಳನ್ನು ಒಂದರಿಂದ 5ರ ವರೆಗೆ ನಿರ್ಧರಿಸಲಾಗುತ್ತದೆ. ಧ್ವನಿಪೆಟ್ಟಿಗೆಯ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲು ಹಲವಾರು ಆಯ್ಕೆಗಳು ಲಭ್ಯವಿವೆ. ರೇಡಿಯೋಥೆರಪಿ, ಕಿಮೊಥೆರಪಿ, ಶಸ್ತ್ರಚಿಕಿತ್ಸೆ (ಕನ್ಸರ್ವೇಟಿವ್‌ ಮತ್ತು ಟೋಟಲ್‌ ಲ್ಯಾರಿಂಜೆಕ್ಟೊಮಿ-ಧ್ವನಿಪೆಟ್ಟಿಗೆಯನ್ನು ಸಂಪೂರ್ಣವಾಗಿ ತೆಗೆದುಹಾಕುವುದು) ಮತ್ತು ಸಂಯೋಜಿತ ಚಿಕಿತ್ಸೆ ಇವುಗಳಲ್ಲಿ ಸೇರಿವೆ.

ಟೋಟಲ್‌ ಲ್ಯಾರಿಂಜೆಕ್ಟೊಮಿಯಲ್ಲಿ ಇಡೀ ಧ್ವನಿಪೆಟ್ಟಿಗೆಯನ್ನು ಮತ್ತು ಆಸುಪಾಸಿನ ವ್ಯವಸ್ಥೆಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುವುದರಿಂದ ಇದಾದ ಬಳಿಕ ಧ್ವನಿ ಸಂಪೂರ್ಣ ನಷ್ಟವಾಗುತ್ತದೆ. ಧ್ವನಿಪೆಟ್ಟಿಗೆಯ ಕ್ಯಾನ್ಸರ್‌ ನಿರ್ವಹಣೆಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಟ್ರೆಂಡ್‌ ಕಿಮೊಥೆರಪಿ+ರೇಡಿಯೋಥೆರಪಿಯನ್ನು ಸಂಯೋಜಿತವಾಗಿ ಬಳಸುವ ಮೂಲಕ ಧ್ವನಿಪೆಟ್ಟಿಗೆಯನ್ನು ಉಳಿಸುವ ಪ್ರಯತ್ನದಲ್ಲಿದೆ. ಟೋಟಲ್‌ ಲ್ಯಾರಿಂಜೆಕ್ಟೊಮಿಗೆ ಒಳಗಾಗಲಿರುವ ರೋಗಿಗಳಿಗೆ ಒಂದು ಕೋರ್ಸ್‌ ಕಿಮೊಥೆರಪಿಯನ್ನು ಒದಗಿಸಲಾಗುತ್ತದೆ. ರೇಡಿಯೋಥೆರಪಿಗೆ ಸಂಪೂರ್ಣ ಪ್ರತಿಸ್ಪಂದನ ಹೊಂದಿರುವ ರೋಗಿಗಳಿಗೆ ಸಂಪೂರ್ಣ ರೇಡಿಯೊಥೆರಪಿ ನೀಡಲಾಗುತ್ತದೆ.

ಯಾವುದೇ ಪ್ರತಿಸ್ಪಂದನೆ ಇಲ್ಲದವರು/ ಆಂಶಿಕ ಪ್ರತಿಸ್ಪಂದನೆ ಹೊಂದಿರುವವರನ್ನು ಶಸ್ತ್ರಚಿಕಿತ್ಸೆ ಮತ್ತು ಆ ಬಳಿಕ ರೇಡಿಯೋಥೆರಪಿ ನೀಡಲಾಗುತ್ತದೆ. ಚಿಕಿತ್ಸೆಯ ಬಳಿಕ ಧ್ವನಿನಷ್ಟವು ರೋಗಿಯ ಕಾರ್ಯಚಟುವಟಿಕೆಗಳ ಮೇಲೆ, ಮಾನಸಿಕ ಆರೋಗ್ಯದ ಮೇಲೆ ಮತ್ತು ಜೀವನ ಗುಣಮಟ್ಟದ ಮೇಲೆ ಭಾರೀ ಪರಿಣಾಮವನ್ನು ಬೀರುತ್ತದೆ.

ಈ ಅಂಶಗಳು ಕ್ಯಾನ್ಸರ್‌ ಬಳಿಕ ಜೀವಿತಾರೈಕೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. ಧ್ವನಿಪೆಟ್ಟಿಗೆಯ ಕ್ಯಾನ್ಸರ್‌ ರೋಗಿಗಳು ಸಾಮಾನ್ಯವಾಗಿ ಸಂಕೀರ್ಣ ಡಿಸ್‌ಫೋನಿಯಾ ಸಮಸ್ಯೆಗಳೊಂದಿಗೆ ವೈದ್ಯರ ಬಳಿಗೆ ಆಗಮಿಸುತ್ತಾರೆ. ಉದಾಹರಣೆಗೆ, ಕಿಮೋರೇಡಿಯೇಶನ್‌ ಬಳಿಕ ಧ್ವನಿಯು ತೀಕ್ಷ್ಣ, ದೊರಗು ಮತ್ತು ಉಸಿರಾಟ ಸಶಬ್ದವಾಗಿರುತ್ತದೆಯಲ್ಲದೆ ಬದಲಾದ ಸ್ಥಾಯಿಯಲ್ಲಿರುತ್ತದೆ; ಇದು ದೀರ್ಘ‌ಕಾಲದ ವರೆಗೆ ಉಳಿಯಬಹುದು. ಧ್ವನಿಪೆಟ್ಟಿಗೆಯ ಕ್ಯಾನ್ಸರ್‌ ಚಿಕಿತ್ಸೆಯ ಬಳಿಕ ರೋಗಿಗಳು ಕಳಪೆ ಧ್ವನಿಮಟ್ಟ, ಗಡಸು ಅಥವಾ ಕೀರಲು ಸ್ವರ, ಗಟ್ಟಿಯಾಗಿ ಧ್ವನಿ ಹೊರಡಿಸಲು ಆಗದೆ ಇರುವುದು, ಧ್ವನಿಯಲ್ಲಿ ದಣಿವು ಮೊದಲಾದ ತೊಂದರೆಗಳನ್ನು ಹೊಂದಬಹುದು. ಶೇ. 41ರಷ್ಟು ರೋಗಿಗಳು ಚಿಕಿತ್ಸೆಗೆ ಮುನ್ನ ಖನ್ನತೆ ಮತ್ತು ಆತಂಕಗಳನ್ನು ಅನುಭವಿಸುತ್ತಾರೆ ಹಾಗೂ ಚಿಕಿತ್ಸೆಯ ಬಳಿಕ ಜೀವನ ಗುಣಮಟ್ಟ ಕುಗ್ಗುವುದರಿಂದ ಈ ತೊಂದರೆಗಳಿಂದ ಬಳಲುವುದನ್ನು ಹಲವು ಅಧ್ಯಯನಗಳು ದೃಢಪಡಿಸಿವೆ.

ಧ್ವನಿಪೆಟ್ಟಿಗೆಯ ಕ್ಯಾನ್ಸರ್‌ ಚಿಕಿತ್ಸೆಯ ಬಳಿಕ ಧ್ವನಿ ಪುನರ್ವಸತಿಯಿಂದ ಧ್ವನಿ, ರೋಗಿ ಸಂವಹನಗಳು ಗಮನಾರ್ಹವಾಗಿ ಉತ್ತಮಗೊಳ್ಳುತ್ತವೆ ಹಾಗೂ ರೋಗಿಗಳ ಜೀವನ ಗುಣಮಟ್ಟ ಮತ್ತು ಸುಧಾರಿಸುತ್ತದೆ ಎಂಬುದನ್ನು ಅಧ್ಯಯನಗಳು ಹೇಳಿವೆ.

-ಡಾ| ಅನುಷಾ ಶಶಿಧರ ಶೆಟ್ಟಿ ಅಸೋಸಿಯೇಟ್‌ ಪ್ರೊಫೆಸರ್‌, ಇಎನ್‌ಟಿ ಸರ್ಜನ್‌, ಡಾ| ಟಿಎಂಎ ಪೈ ಆಸ್ಪತ್ರೆ, ಉಡುಪಿ-ಕಾರ್ಕಳ

ಟಾಪ್ ನ್ಯೂಸ್

1-rewww

B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

muslim marriage

Marriage registration ಪ್ರಮಾಣಪತ್ರ ನೀಡುವ ಅಧಿಕಾರ ವಕ್ಫ್ ಬೋರ್ಡ್‌ಗೆ ಎಲ್ಲಿದೆ?

1-libbb

Libya; 8 ವರ್ಷಗಳ ಬಳಿಕ ಲಿಬಿಯಾಕ್ಕೆ ತೆರಳಲು ಭಾರತೀಯರಿಗೆ ಅನುಮತಿ

sidda dkshi

CM-DCM ಮಹಾರಾಷ್ಟ್ರ ಚುನಾವಣ ಪ್ರಚಾರದಲ್ಲಿ ಭಾಗಿ

Iran: ಹಿಜಾಬ್‌ ನಿರಾಕರಿಸಿದರೆ ವಿಶೇಷ ಕ್ಲಿನಿಕ್‌: ಇರಾನ್‌ ತೀರ್ಮಾನಕ್ಕೆ ಆಕ್ರೋಶ

Iran: ಹಿಜಾಬ್‌ ನಿರಾಕರಿಸಿದರೆ ವಿಶೇಷ ಕ್ಲಿನಿಕ್‌: ಇರಾನ್‌ ತೀರ್ಮಾನಕ್ಕೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ

World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ

3-health

Mother: ತಾಯಂದಿರ ಮಾನಸಿಕ ಆರೋಗ್ಯ

Lip Care Routine; How much do you know about keeping your lips healthy?

Lip Care Routine; ನಿಮ್ಮ ತುಟಿಗಳ ಆರೋಗ್ಯ ಕಾಪಾಡುವ ಬಗ್ಗೆ ನಿಮಗೆಷ್ಟು ಗೊತ್ತು?

16

Vaccines: ವಯಸ್ಕರಿಗೆ ಲಸಿಕೆಗಳು

5-

ಅಂತಾರಾಷ್ಟ್ರೀಯ ಫ್ಲೂ ದಿನ: ಇನ್‌ಫ್ಲುಯೆಂಜಾ ಅರಿವು ಮತ್ತು ತಡೆ: ಕಾರ್ಯಾಚರಣೆಯ ಕರೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

1-rewww

B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

muslim marriage

Marriage registration ಪ್ರಮಾಣಪತ್ರ ನೀಡುವ ಅಧಿಕಾರ ವಕ್ಫ್ ಬೋರ್ಡ್‌ಗೆ ಎಲ್ಲಿದೆ?

1-libbb

Libya; 8 ವರ್ಷಗಳ ಬಳಿಕ ಲಿಬಿಯಾಕ್ಕೆ ತೆರಳಲು ಭಾರತೀಯರಿಗೆ ಅನುಮತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.