ಯುವಕನ ಕೊಲೆ; ಇಬ್ಬರು ಆರೋಪಿಗಳ ಬಂಧನ
Team Udayavani, Apr 10, 2022, 2:15 PM IST
ಹರಿಹರ: ಕಳೆದ ಮಾ. 16 ರಂದು ನಗರದ ಗಾಂಧಿ ಮೈದಾನದ ವಾಣಿಜ್ಯ ಸಂಕೀರ್ಣದ ಅಂಬೇಮಾ ವೈನ್ಸ್ ಅಂಗಡಿ ಮುಂಭಾಗ ಶವವಾಗಿ ಪತ್ತೆಯಾಗಿದ್ದ ಗಂಗನರಸಿ ಗ್ರಾಮದ ಗಿರೀಶ್ ಎಂಬ ಯುವಕ ಕೊಲೆಗೀಡಾಗಿರುವುದು ಖಚಿತವಾಗಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ನಗರದ ಎ.ಕೆ. ಕಾಲೋನಿ ಒಂದನೇ ಕ್ರಾಸ್ ನ ನಿವಾಸಿಗಳಾದ ಮಂಜ (31) ಮತ್ತು ಶಿವು (22) ಬಂಧಿತ ಆರೋಪಿಗಳು.
ರಕ್ತದ ಮಡುವಿನಲ್ಲಿದ್ದ ಶವದ ತಲೆ ಪಕ್ಕದಲ್ಲಿ ದೊಡ್ಡ ಸೆ„ಜಗಲ್ಲು ಇದ್ದುದರಿಂದ, ತಲೆಯಲ್ಲಿ ಒಂದು ಕಡೆ ಮಾತ್ರ ಗಾಯವಾಗಿದ್ದು, ತಲೆ ಹಾಗೂ ಮುಖ ಜಜ್ಜಿರದ ಕಾರಣ ಯುವಕನೇ ಕಲ್ಲಿಗೆ ಬಿದ್ದು ಗಾಯ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ಕೊಲೆ ಪ್ರಕರಣವೆಂದು ಗಿರೀಶ್ ಕುಟುಂಬದವರು ದೂರು ದಾಖಲಿಸಿದ ನಂತರ ಪೊಲೀಸರು ಪ್ರಕರಣದ ಬೆನ್ನು ಹತ್ತಿದ್ದರು. ಆರೋಪಿಗಳು ಅತಿಯಾದ ಮದ್ಯ ಸೇವನೆ ಮಾಡುವವರಾಗಿದ್ದು, ಅಂಗಡಿ, ಮುಂಗಟ್ಟುಗಳ ಮುಂದೆ ಮಲಗಿದವರ ಮೇಲೆ ಹಲ್ಲೆ ನಡೆಸಿ ಮೊಬೈಲ್, ಹಣ ಕಿತ್ತುಕೊಳ್ಳುತ್ತಿದ್ದರು.
ಇತ್ತೀಚಿಗೆ ನಗರದ ತಾಪಂ ಕಚೇರಿ ಎದುರು ಮಲಗಿದ್ದ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಸೇರಿದಂತೆ ಆರೋಪಿಗಳು ಈಗಾಗಲೆ ಇಂಥದ್ದೇ ನಾಲ್ಕು ಪ್ರಕರಣ ಎಸಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ವಿಕೃತ ಮನೋಭಾವದವರಿದ್ದು, ಇಂತಹವರ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಅಂಗಡಿ, ಮುಂಗಟ್ಟುಗಳ ಮುಂದೆ, ಮನೆ ಕಟ್ಟೆ ಮೇಲೆ ಯಾರೂ ಮಲಗಬಾರದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಡಿವೈಎಸ್‌ಪಿ ಬಸವರಾಜ್ ಬಿ.ಎಸ್., ಸಿಪಿಐ ಸತೀಶ್‌ಕುಮಾರ್ ಯು., ಪಿಎಸ್‌ಐ ಸುನೀಲ್‌ಕುಮಾರ್ ತೇಲಿ, ಎಎಸ್‌ಐ ಯಾಸೀನ್ ಉಲ್ಲಾ, ಸಿಬ್ಬಂದಿಗಳಾದ ಸುಣಗಾರ ನಾಗರಾಜ್, ಶಾಂತಕುಮಾರ್, ಸೈಯದ್ ಗಫಾರ್, ರಾಜಶೇಖರ್, ಶಿವರಾಜ್, ನಾಗರಾಜ್, ಸಿದ್ದೇಶ್, ಸಿಸಿಟಿವಿ ಮಂಜುನಾಥ್ ಪ್ರಕರಣ ಪತ್ತೆ ತಂಡದಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.