ಅಗ್ನಿ ಅವಘಡ: ಸಚಿವ ಆನಂದಸಿಂಗ್ ಸಾಂತ್ವನ
Team Udayavani, Apr 10, 2022, 3:02 PM IST
ಮರಿಯಮ್ಮನಹಳ್ಳಿ: ಗುರುವಾರ ರಾತ್ರಿ ನಡೆದ ಅಗ್ನಿ ದುರಂತದಲ್ಲಿ ಕುಟುಂಬದ ಮಗ ಸೊಸೆ ಮೊಮ್ಮಕ್ಕಳನ್ನು ಕಳೆದುಕೊಂಡ ಡಿ. ರಾಘವೇಂದ್ರಶೆಟ್ಟಿ ದಂಪತಿಗೆ ದುಃಖ ಮರೆಸುವ ಶಕ್ತಿ ನೀಡಲಿ ಎಂದು ಬೇಡಿಕೊಳ್ಳುವೆ ಎಂದು ಪ್ರವಾಸೋದ್ಯಮ ಮತ್ತು ಅರಣ್ಯ ಮತ್ತು ಪರಿಸರ ವಿಜ್ಞಾನ ಇಲಾಖೆ ಸಚಿವ ಆನಂದ ಸಿಂಗ್ ಹೇಳಿದರು.
ಅವರ ಪಟ್ಟಣದಲ್ಲಿ ಅಗ್ನಿದುರಂತ ಸಂಭವಿಸಿ ಕುಟುಂಬದ ನಾಲ್ಕು ಸದಸ್ಯರನ್ನು ಕಳೆದಕೊಂಡ ಡಿ. ರಾಘವೇಂದ್ರ ಶೆಟ್ಟಿ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಕುಟುಂಬದವರ ಕುಶಲೋಪರಿ ವಿಚಾರಿಸಿ ಡಿ. ರಾಘವೇಂದ್ರ ಶೆಟ್ಟಿ ದಂಪತಿಯೊಂದಿಗೆ ಮಾತನಾಡಿ ಪುತ್ರ ಶೋಕಂ ನಿರಂತರ ಅನ್ನುತ್ತಾರೆ. ಆದರೆ ನೀವು ಮಗ ಸೊಸೆ ಮೊಮ್ಮಕ್ಕಳನ್ನೂ ಕಳೆದುಕೊಂಡಿದ್ದೀರಿ. ಎಲ್ಲವೂ ವಿಧಿಯಾಟ. ಅದನ್ನು ಯಾರೂ ಮೀರಲು ಸಾಧ್ಯವಿಲ್ಲ. ಆನಂದವನ್ನು ಹಂಚಿಕೊಳ್ಳಬಹುದು ಆದರೆ ದುಃ ಖವನ್ನು ಹಂಚಲಾಗದು. ದೇವರು ಹೆಚ್ಚಿನ ಧೈರ್ಯ ನೀಡಲಿ. ಈ ಸಂಕಷ್ಟ ಹರಿಶ್ಚಂದ್ರನಿಗೂ ತಪ್ಪಿಲ್ಲ ಎಂದು ಸಾಂತ್ವನ ಹೇಳಿದರು.
ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಇದೊಂದು ದೊಡ್ಡ ದುರಂತ. ಇಂಥ ಘಟನೆಗಳು ಮರುಕಳಿಸಬಾರದು. ಯಾವ ವೈರಿಗೂ ಇಂಥ ಸಂಕಷ್ಟ ಬರಬಾರದು ಎಂದರು. ಇದೇ ಸಂದರ್ಭದಲ್ಲಿ ಶಾಸಕ ಭೀಮಾನಾಯ್ಕ, ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಅರುಣ್ ಕೆ., ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್, ಡಿಎಸ್‌ಪಿ ಹರೀಶ್, ಸಿಪಿಐ ಮಂಜಪ್ಪ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.