ಕುರಿಗಳಿಗೆ ಶೆಡ್ ನಿರ್ಮಿಸಲು ಕರವೇ ಮನವಿ
Team Udayavani, Apr 10, 2022, 5:41 PM IST
ಮುದ್ದೇಬಿಹಾಳ: ಸರ್ಕಾರಿ ಗೋಮಾಳದಲ್ಲಿ, ಸ್ವಂತ ಜಮೀನಿನಲ್ಲಿ ಸರ್ಕಾರದಿಂದಲೇ ಕುರಿಗಳಿಗೆ ಶೆಡ್ ನಿರ್ಮಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ ಶೆಟ್ಟಿ ಬಣದ ತಾಲೂಕು ಪದಾಧಿಕಾರಿಗಳು ಇಲ್ಲಿನ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಪ್ರತಿ ವರ್ಷ ಗುಡುಗು, ಸಿಡಿಲು, ಭೀಕರ ಗಾಳಿ ಸಮೇತ ಆರಂಭವಾಗುವ ಮಳೆಗಾಲಕ್ಕೆ ಅತಿ ಹೆಚ್ಚು ಆಡು, ಕುರಿಗಳು ಬಲಿಯಾಗುತ್ತವೆ. ಒಂದೇ ಸಿಡಿಲಿಗೆ ನೂರಾರು ಕುರಿಗಳು ಬಲಿಯಾಗುವ ಘಟನೆಗಳು ಹಿಂದೆ ನಡೆದಿವೆ. ಕುರಿಗಳ ಜೊತೆಗೆ ಕುರಿ ಕಾಯುವವರೂ ಬಲಿಯಾಗಿದ್ದಾರೆ. ಕುರಿಗಳನ್ನು, ಕುರಿಗಾರರನ್ನು ಕಳೆದುಕೊಂಡ ಕುಟುಂಬಗಳು ಕಂಗಾಲಾಗುತ್ತಿವೆ. ಈ ಅನಾಹುತ ತಪ್ಪಿಸಲು ಆಯಾ ಗ್ರಾಮಗಳ ಗೋಮಾಳ ಅಥವಾ ಸರ್ಕಾರಿ ಜಾಗದಲ್ಲಿ ಇಲ್ಲವೆ ಕುರಿಗಾರರ ಸ್ವಂತ ಜಮೀನಿನಲ್ಲಿ ಕುರಿ ಶೆಡ್ ನಿರ್ಮಿಸಿ ಅನುಕೂಲ ಮಾಡಿಕೊಡಬೇಕು. ಕುರಿ ಶೆಡ್ ನಿರ್ಮಿಸಿಕೊಳ್ಳಲು ಸರ್ಕಾರ ಜನರಲ್ ಕೆಟರಿಯವರಿಗೆ 16000 ರೂ, ಎಸ್ಸಿ-ಎಸ್ಟಿ ಕೆಟಗರಿಯವರಿಗೆ 40000 ರೂ. ಧನ ಸಹಾಯ ನೀಡುತ್ತಿರುವುದು ಸಾಕಾಗುತ್ತಿಲ್ಲ. ಇದನ್ನು ಕನಿಷ್ಠ 5 ಲಕ್ಷ ರೂ.ಗೆ ಹೆಚ್ಚಿಸಬೇಕು. ಒಂದು ವೇಳೆ ಧನ ಸಹಾಯ ನೀಡದಿದ್ದಲ್ಲಿ ಸುಭದ್ರ, ವಿಶಾಲವಾದ ಶೆಡ್ ನಿರ್ಮಿಸಿಕೊಡುವ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಕೋರಲಾಗಿದೆ.
ಗೌರವಾಧ್ಯಕ್ಷ ಗಂಗಾಧರ ಸಾಲಿಮಠ, ನಗರ ಘಟಕದ ಅಧ್ಯಕ್ಷ ಬಸನಗೌಡ ಗೌಡರ, ಉಪಾಧ್ಯಕ್ಷ ಚಿದಾನಂದ ಬಡಿಗೇರ, ಕಾರ್ಯದರ್ಶಿ ಶಂಕರಗೌಡ ಪಾಟೀಲ, ಸಂಚಾಲಕ ಸಂಗಮೇಶ ಅಡ್ಡಿ, ಬಸವರಾಜ ಹುಲಗಣ್ಣಿ, ಹೊನ್ನೇಶ, ಚೇತನ್ ಕೆಂಧೂಳಿ, ಸದಸ್ಯರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.