ಐತಿಹಾಸಿಕ ಕಟ್ಟಡದಲ್ಲಿ ಡಿಜಿಟಲ್ ಗ್ರಂಥಾಲಯ
Team Udayavani, Apr 10, 2022, 5:50 PM IST
ಶಿಡ್ಲಘಟ್ಟ: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಭಕ್ತರಹಳ್ಳಿ ಗ್ರಾಮವು ದೇಶಭಕ್ತರ ಹಳ್ಳಿಯೆಂದೇ ಹೆಸರು ವಾಸಿ ಆಗಿದ್ದು, ಸ್ವಾತಂತ್ರ್ಯದ ಹೋರಾಟದಲ್ಲಿ ಬ್ರಿಟಿಷರ ಬಂದೂಕಿನ ಗುಂಡಿಗೆ ಎದೆಯೊಡ್ಡಿ ನಿಂತ ದೇಶಪ್ರೇಮಿ ಗಳ ಹೋರಾಟ ಇತಿಹಾಸವನ್ನು ನೆನಪಿಸುತ್ತದೆ. ಈ ಗ್ರಾಮದಲ್ಲಿ ಬ್ರಿಟಿಷರ ಕಾಲದಲ್ಲಿನ ಕಟ್ಟಡಗಳಿದ್ದು, ಅವುಗಳನ್ನು ಉಳಿಸಿ ಸ್ಮಾರಕಗಳನ್ನಾಗಿಸುವ ಕೆಲಸ ಭಕ್ತರಹಳ್ಳಿ ಗಾಪಂನಿಂದ ನಡೆಯುತ್ತಿರುವುದು ದೇಶ ಪ್ರೇಮಿಗಳಲ್ಲಿ ಖುಷಿ ತಂದಿದೆ.
ತಾಲೂಕಿನ ಭಕ್ತರಹಳ್ಳಿಯಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಿಸಿದ ಹಲವು ಕಟ್ಟಡ, ವೃತ್ತಗಳೂ ಇವೆ. ಬ್ರಿಟಿಷರ ಬಂದೂಕಿನ ಗುಂಡಿಗೆ ಎದೆಕೊಟ್ಟು ಹುತಾತ್ಮರಾದವರ ಸ್ತೂಪವೂ ಇವೆ. ಇವೆಲ್ಲವೂ ಆಗಿನ ಬ್ರಿಟಿಷರ ವಿರುದ್ಧ ಹೋರಾಟ, ಸ್ವಾತಂತ್ರ್ಯ ಸಂಗ್ರಾಮದ ನೆನಪುಗಳನ್ನು ತರುತ್ತವೆ. ಈ ಪೈಕಿ ಕೆಲವೊಂದು ಕಟ್ಟಡ ಪಾಳು ಬಿದ್ದಿದ್ದು, ಪಾಳು ಬಿದ್ದ ಕಟ್ಟಡ ಸಂರಕ್ಷಿಸಿ ಅವುಗಳಿಗೆ ಮರುಜೀವ ನೀಡುವ ಜೀರ್ಣೋದ್ಧಾರದ ಕೆಲಸ ಗ್ರಾಪಂ ನೇತೃತ್ವದಲ್ಲಿ ಜಿಪಂ, ತಾಪಂ ಹಾಗೂ ಸಂಘ- ಸಂಸ್ಥೆಗಳ ನೆರವಿನಿಂದ ನಡೆಯುತ್ತಿದೆ.
ಬರೋಬ್ಬರಿ 110 ವರ್ಷದ ಹಿಂದೆ 1912ರಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿ ಬ್ರಿಟೀಷ್ ಅಧಿಕಾರಿಗಳ ಕಚೇರಿ ಯಾ ಗಿ ದ್ದ, ಆನಂತರ ಶಾಲೆಯಾಗಿ ಮಾರ್ಪಟ್ಟು, ತದ ನಂತರ ಬಳಕೆಯಿಲ್ಲದೆ ಪಾಳು ಬಿದ್ದಿದ್ದ ಕಟ್ಟಡದಲ್ಲಿ ಇದೀಗ ಡಿಜಿಟಲ್ ಲೈಬ್ರರಿ ಆರಂಭಿಸುವ ಮೂಲಕ ಕಟ್ಟಡವನ್ನು ಉಳಿಸುವ ಕೆಲಸ ನಡೆದಿದೆ.
ಕಟ್ಟಡ ಹೇಗಿದೆಯೋ ಹಾಗೆಯೆ ದುರಸ್ತಿ ಮಾಡಿದ್ದು, ಸುಣ್ಣಬಣ್ಣ ಬಳಿದು ನೋಡಲು ಅಂದ ಚೆಂದವಾಗಿದೆ. ಅಲ್ಲಿ ಬರೆದ ಎಲ್ಲ ಬರಹ, ಚಿತ್ರಗಳು ಪುಸ್ತಕ ಓದು ವಂತೆ ಪ್ರೋತ್ಸಾಹಿಸಿ ಕೈ ಬೀಸಿ ಕರೆಯುವಂತೆ ಕಾಣುತ್ತಿವೆ. ಈಗಾಗಲೇ 4 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡದ ನವೀಕರಣ ಕಾರ್ಯ ಮುಗಿಸಿದ್ದು, ಗ್ರಾಪಂಗೆ ಈ ವರ್ಷ ಬರುವ ಪುರಸ್ಕಾರದ 10 ಲಕ್ಷ ರೂ. ಅನುದಾನವನ್ನು ಸಹ ಈ ಪಾರಂಪರಿಕ ಕಟ್ಟಡದ ನಿರ್ವಹಣೆ ಅಭಿವೃದ್ಧಿಗೆ ಬಳಸಲು ಭಕ್ತರಹಳ್ಳಿ ಗ್ರಾಪಂ ಪಿಡಿಒ ಹಾಗೂ ಆಡಳಿತ ಮಂಡಳಿ ನಿರ್ಧರಿಸಿದೆ.
ಇದಾದ ನಂತರ ಇನ್ನು ಇತರೆ ಕಟ್ಟಡ ಇದೇ ರೀತಿ ಉಳಿಸಿಕೊಳ್ಳುವ ಉದ್ದೇಶ ಭಕ್ತರಹಳ್ಳಿ ಗ್ರಾಪಂಗೆ ಇದ್ದು,ಇದು ದೇಶಪ್ರೇಮಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ.
ಗ್ರಾಮದಲ್ಲಿ ಪ್ರಾಚೀನ ಕಾಲದ ಕಟ್ಟಡ ಸಂರಕ್ಷಿಸಿ ಡಿಜಿಟಲ್ ಗ್ರಂಥಾಲಯ ಮಾಡಿ ಜ್ಞಾನರ್ಜನೆ ಕೇಂದ್ರವಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರಸಕ್ತ ಸಾಲಿನಲ್ಲಿ ಗ್ರಾಪಂಗೆ ಪುರಸ್ಕಾರ ಬರಲಿದ್ದು, ಅದರ ಪ್ರೋತ್ಸಾಹಧನವನ್ನು ಗ್ರಂಥಾಲಯದ ಅಭಿವೃದ್ಧಿಗೆ ಬಳಸಿ ಮಾದರಿ ಗ್ರಂಥಾಲಯವನ್ನಾಗಿಸಲು ಕ್ರಮ ಕೈಗೊಳ್ಳಲಾಗಿದೆ. ಓದುಗರು ಇದರ ಸದುಪಯೋಗ ಮಾಡಿಕೊಳ್ಳಬೇಕಾಗಿದೆ. –ಅಂಜನ್‌ಕುಮಾರ್, ಭಕ್ತರಹಳ್ಳಿ ಗ್ರಾಪಂ ಪಿಡಿಒ
ಪ್ರಾಚೀನ ಕಟ್ಟಡ ಸಂರಕ್ಷಣೆ ಮಾಡುವ ಕೆಲಸ ಗ್ರಾಪಂ ಮೂಲಕ ಮಾಡುತ್ತಿರುವುದು ಸಂತಸ ತಂದಿದೆ. ಗ್ರಂಥಾಲಯಕ್ಕೆ ಅಗತ್ಯ ಪುಸ್ತಕ, ಸೌಲಭ್ಯ ಒದಗಿಸಲು ಗ್ರಾಪಂ ಆಡಳಿತ ಮಂಡಳಿ ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ. –ಆನಂದ್ ಛಲವಾದಿ, ಭಕ್ತರಹಳ್ಳಿ ಗ್ರಾಮಸ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.