ಆರ್‌ಸಿಬಿ-ಹೊಂಬಾಳೆ ಫಿಲಂಸ್ ಜತೆಯಾಟ
Team Udayavani, Apr 11, 2022, 6:50 AM IST
ಬೆಂಗಳೂರು: “ಕೆಜಿಎಫ್’ ಮತ್ತು “ಸಲಾರ್’ ಮೊದಲಾದ ಬಿಗ್ ಬಜೆಟ್ ಸಿನೆಮಾಗಳ ನಿರ್ಮಾಣ ಸಂಸ್ಥೆ “ಹೊಂಬಾಳೆ ಫಿಲಂಸ್’ ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಜತೆ ವಿಶೇಷ ಸಹಭಾಗಿತ್ವದಲ್ಲಿ ಕ್ರೀಡೆ ಮತ್ತು ಚಲನಚಿತ್ರ ಮನೋರಂಜನೆಯ ಪರಿಪೂರ್ಣ ಸಮ್ಮಿಳನಕ್ಕೆ ಸಹಿ ಮಾಡಿದೆ.
ಈ ಸಹಭಾಗಿತ್ವವು ನೋಡುಗರಿಗೆ ಭರಪೂರ ಮನೋರಂಜನೆಯನ್ನು ನೀಡುವಂತಹ ಗ್ಲಾಮರ್, ಸಿನೆಮಾ, ಕ್ರೀಡೆಗಳ ಸಂಗಮವಾಗಲಿದೆ ಎಂದು ಆರ್‌ಸಿಬಿ ಮತ್ತು ಹೊಂಬಾಳೆ ಫಿಲಂಸ್ ತಿಳಿಸಿವೆ.
ಈ ಸಹಭಾಗಿತ್ವದ ಬಗ್ಗೆ ಮಾತನಾಡಿರುವ ನಿರ್ಮಾಪಕ ವಿಜಯ್ ಕಿರಗಂದೂರು, ಕನ್ನಡಿಗನಾಗಿ ಕ್ರಿಕೆಟ್ ನನ್ನನ್ನು ಯಾವಾಗಲೂ ಆಕರ್ಷಿಸುತ್ತಿದೆ. ನಮ್ಮ ಅಭಿಮಾನಿಗಳಿಗೆ ಭರಪೂರ ಮನೋರಂಜನೆ ಮತ್ತು ಥ್ರಿಲ್ ಅನ್ನು ಖಚಿತಪಡಿಸಿಕೊಳ್ಳಲು ತೊಡಗಿಸಿಕೊಂಡಿರುವ ಹೊಂಬಾಳೆ ಫಿಲಂಸ್ ಮತ್ತು ಆರ್‌ಸಿಬಿ ಎರಡಕ್ಕೂ ನಮ್ಮ ಬೆಂಗಳೂರೇ ತವರಾಗಿರುವುದರಿಂದ ಈ ಪಾಲುದಾರಿಕೆ ಸಹಜವಾಗಿದೆ.
2022 ನಮ್ಮೆಲ್ಲರಿಗೂ ರಾಯಲ್ ಆಗಿರಲಿದೆ. ಕ್ರೀಡೆ ಮತ್ತು ಮನೋರಂಜನೆ ವಿಚಾರದಲ್ಲಿ ಕ್ಷಣಮಾತ್ರದಲ್ಲಿ ಬದಲಾಗುವ ಅಭಿಮಾನಿಗಳ ನಡವಳಿಕೆ ಮತ್ತು ಆದ್ಯತೆಗಳನ್ನು ಅರಿತು ಅವರ ನಾಡಿಮಿಡಿತಕ್ಕೆ ಬಲ ನೀಡುವ ಜತೆ ಹೊಸ ಮನೋರಂಜನ ಮಾರ್ಗಗಳಿಗಾಗಿ ಹೆಚ್ಚುತ್ತಿರುವ ಬೇಡಿಕೆಗಳನ್ನು ಈಡೇರಿಸುವ ಮೂಲಕ ಈ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಹಾಗೂ ಪ್ರಸರಣ ಉದ್ಯಮಕ್ಕೆ ಕೊಡುಗೆ ನೀಡುವ ಗುರಿ ಹೊಂದಿದ್ದೇವೆ. ಇದಕ್ಕಾಗಿ ಕೈ ಜೋಡಿಸಲು, ಆರಂಭಿಸಲು ಮತ್ತು ರಾಯಲ್ ಆಗಿ ಸೆಲಬ್ರೇಟ್ ಮಾಡಲು ಎದುರು ನೋಡುತ್ತಿದ್ದೇವೆ. ಕ್ರೀಡೆ ಮತ್ತು ಚಲನಚಿತ್ರ ಮನೋರಂಜನ ವಲಯದಲ್ಲಿ ನಮ್ಮ ಅಭಿಮಾನಿಗಳಿಗೆ ಮ್ಯಾಜಿಕ್ ಕ್ಷಣಗಳನ್ನು ಸೃಷ್ಟಿಸಲು ನಾವು ಒಟ್ಟಾಗಿ ಪ್ರಯತ್ನಿಸುತ್ತೇವೆ’ ಎಂದಿದ್ದಾರೆ.
#ನಮ್ಮHombale is proud & ecstatic to associate with #ನಮ್ಮRCB
Together let’s usher into a new era of entertainment with infinite possibilities @RCBTweets @VKiragandur
Born in Bangalore to thrill the nation#RCBxHombale pic.twitter.com/jDJy1wcsVT— Hombale Films (@hombalefilms) April 10, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
Team Indiaಕ್ಕೆ ಆಸೀಸ್ ಪ್ರಧಾನಿ ಔತಣ: ಆಟದಲ್ಲಿ ಸ್ವಲ್ಪ ಮಸಾಲೆ ಬೇಕು
ICC ಇಂದು ಸಭೆ: ಚಾಂಪಿಯನ್ಸ್ ಟ್ರೋಫಿ; ಹೈಬ್ರಿಡ್ ಮಾದರಿಗೆ ಮತದಾನ?
Test; ದಕ್ಷಿಣ ಆಫ್ರಿಕಾ ಎದುರು ನಿಕೃಷ್ಟ ಮೊತ್ತಕ್ಕೆ ಶ್ರೀಲಂಕಾ ಆಲೌಟ್
Badminton; ಸಯ್ಯದ್ ಮೋದಿ ಇಂಟರ್‌ನ್ಯಾಶನಲ್: ಸಿಂಧು, ಸೆನ್ ಕ್ವಾರ್ಟರ್‌ಫೈನಲಿಗೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್: ಏನಿದರ ಅಸಲೀಯತ್ತು?
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.