ಶೂಟಿಂಗ್‌ನತ್ತ ಹೊರಟ “ಬಾಂಡ್ ರವಿ’
Team Udayavani, Apr 11, 2022, 3:37 PM IST
ಯುವನಟ ಪ್ರಮೋದ್ ನಾಯಕನಾಗಿ ಅಭಿನಯಿಸುತ್ತಿರುವ “ಬಾಂಡ್ ರವಿ’ ಸಿನಿಮಾದ ಮುಹೂರ್ತ ಇತ್ತೀಚೆಗೆ ನೆರವೇರಿತು. “ಬಾಂಡ್ ರವಿ’ ಸಿನಿಮಾದ ಮೊದಲ ದೃಶ್ಯಕ್ಕೆ ನಟ ವಿನೋದ್ ಪ್ರಭಾಕರ್ ಕ್ಲಾಪ್ ಮಾಡಿದರೆ, ಧ್ರುವ ಸರ್ಜಾ ಕ್ಯಾಮರಾ ಸ್ವಿಚ್ ಆನ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.
ಇನ್ನು “ಬಾಂಡ್ ರವಿ’ ಸಿನಿಮಾದಲ್ಲಿ ನಟ ಪ್ರಮೋದ್, ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ತಮ್ಮ ಪಾತ್ರದ ಬಗ್ಗೆ ಮಾತನಾಡುವ ಪ್ರಮೋದ್, “ಈ ಸಿನಿಮಾದಲ್ಲಿ ನನ್ನದು ಅಭಿಮಾನಿಯ ಪಾತ್ರ. “ಅಣ್ಣಾ ಬಾಂಡ್’ ಸಿನಿಮಾದಲ್ಲಿ ಪುನೀತ್ ರಾಜಕುಮಾರ್ ಬಾಂಡ್ ರವಿ ಎಂಬ ಹೆಸರಿನ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದರು. ಈ ಸಿನಿಮಾದ ಟೈಟಲ್ “ಬಾಂಡ್ ರವಿ’ ಅಂತಿದ್ದು, ನಾನು ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿ ಕಾಣಿಸಿಕೊಳ್ಳುತ್ತೇನೆ. ಸಿನಿಮಾದ ಪಾತ್ರದಲ್ಲಿ ಪುನೀತ್ ರಾಜಕುಮಾರ್ ಅವರಂತೆ ಮ್ಯಾನರಿಸಂ ನನ್ನ ಪಾತ್ರಕ್ಕೂ ಇರುತ್ತದೆ. ಇದರ ಹಿಂದೊಂದು ಲವ್, ಥ್ರಿಲ್ಲರ್, ಕ್ರೈಂ ಎಲಿಮೆಂಟ್ಸ್ ಕೂಡ ಇರುತ್ತದೆ’ ಎಂದು ಕಥಾಹಂದರ ಮತ್ತು ಪಾತ್ರ ಪರಿಚಯ ಮಾಡಿಕೊಟ್ಟರು.
ಇದನ್ನೂ ಓದಿ:ಅಧಿಕಾರಿಗಳಿಂದ ಪತ್ನಿಗೆ ಲೈಂಗಿಕ ಕಿರುಕುಳ : ನಟಿ ಆಯೇಷಾ ಪತಿಯ ಆರೋಪ
“ಬಾಂಡ್ ರವಿ’ ಚಿತ್ರದಲ್ಲಿ ಕಾಜಲ್ ಕುಂದರ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ರವಿಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಸುಮಾರು ಒಂದು ದಶಕದಿಂದ ಚಿತ್ರರಂಗ ದಲ್ಲಿ ಸಕ್ರಿಯವಾಗಿರುವ, ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿರುವ ಪ್ರಜ್ವಲ್ ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. “ಲೈಫ್ ಲೈನ್ ಫಿಲಂಸ್’ ಬ್ಯಾನರ್ ನಡಿ ನರಸಿಂಹಮೂರ್ತಿ ಬಂಡವಾಳ ಹೂಡಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಮಲ್ಲಿಕಾರ್ಜುನ್ ಕಾಶಿ ಹಾಗೂ ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಣವಿದೆ.
ಚಿತ್ರಕ್ಕೆ ಕೆ. ಎಸ್ ಚಂದ್ರಶೇಖರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಸುನಿಲ್ ದೇವರಾಜ್ ಸಂಭಾಷಣೆ, ಮನೋಮೂರ್ತಿ ಸಂಗೀತವಿದೆ. ಚಿತ್ರದ ಹಾಡುಗಳಿಗೆ ಜಯಂತ್ ಕಾಯ್ಕಿಣಿ, ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ ಸದ್ಯ ಮುಹೂರ್ತ ನೆರವೇರಿಸಿಕೊಂಡು ಚಿತ್ರೀಕರಣಕ್ಕೆ ಹೊರಟಿರುವ ಚಿತ್ರತಂಡ, ಶಿವಮೊಗ್ಗ, ಕೊಡಚಾದ್ರಿ ಸುತ್ತಮುತ್ತ ಸುಮಾರು ಐವತ್ತು ದಿನಗಳ ಕಾಲ “ಬಾಂಡ್ ರವಿ’ ಶೂಟಿಂಗ್ ಮಾಡಲು ಪ್ಲಾನ್ ಹಾಕಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.