ಪರೀಕ್ಷೆಗೆ ತೆರಳುವಾಗ ಅಪಘಾತ: ಆಂಬುಲೆನ್ಸ್ ನಲ್ಲೇ ತೆರಳಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿ
ಬಳಿಕ ತಾಯಿ ತನ್ನ ಮಗಳ ಶಾಲಾ ಆಡಳಿತ ಮಂಡಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
Team Udayavani, Apr 11, 2022, 10:35 AM IST
ಬೆಳ್ತಂಗಡಿ : ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ವಿದ್ಯಾರ್ಥಿನಿಯೊಬ್ಬಳು ತನ್ನ ತಾಯಿ ಜೊತೆ ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ ಅಪಘಾತವಾಗಿ, ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ಆಂಬುಲೆನ್ಸ್ ನಲ್ಲೇ ಪರೀಕ್ಷೆ ಕೇಂದ್ರಕ್ಕೆ ತೆರಳಿಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಘಟನೆಯ ವಿವರ: ಎಸ್ ಎಸ್ ಎಲ್ ಸಿ ವಿಧ್ಯಾರ್ಥಿಗಳ ಕೊನೆಯ ವಿಜ್ಞಾನ ಪರೀಕ್ಷೆಯಾಗಿರುವ ಇಂದು ಬೆಳ್ತಂಗಡಿ ತಾಲೂಕಿನ ಲಾಯಿಲ ಸೈಂಟ್ ಮೇರೀಸ್ ಆಂಗ್ಲಮಾಧ್ಯಮ ಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಸಂಪಿಂಜಾ ನಿವಾಸಿ ಲಕ್ಷ್ಮಣ -ಮಮತಾ ದಂಪತಿಯ ಪುತ್ರಿ ತನ್ವಿ(15) ಇಂದು ಪರೀಕ್ಷೆ ಬರೆಯಲು ತನ್ನ ತಾಯಿ ಮಮತಾ ಜೊತೆ ಸ್ಕೂಟರ್ ನಲ್ಲಿ ಪರೀಕ್ಷಾ ಕೇಂದ್ರವಾದ ಬೆಳ್ತಂಗಡಿ ವಾಣಿ ಕಾಲೇಜ್ ಗೆ ಬರುತ್ತಿದ್ದಾಗ ಬೆಳ್ತಂಗಡಿಯ ಲಾಯಿಲದ ಪುತ್ರಬೈಲ್ ಅಂಗನವಾಡಿ ಎದುರು ಸ್ಕೂಟರ್ ಸ್ಕೀಡ್ ಅಗಿ ಪಲ್ಟಿಯಾಗಿದೆ. ಈ ವೇಳೆ ತಾಯಿ ಮಮತಾಗೆ ಯಾವುದೇ ಗಾಯವಾಗಿಲ್ಲ ಮಗಳು ತನ್ವಿಗೆ ಮಾತ್ರ ಗಾಯವಾಗಿದ್ದು ತಕ್ಷಣ ಉಜಿರೆ ಬೆನಕ ಆಸ್ಪತ್ರೆಗೆ ದಾಖಲಿಸಿ ವೈದ್ಯರು ಚಿಕಿತ್ಸೆ ನೀಡಿದ್ದು ಕೈ,ಕಾಲು ಹಾಗೂ ಮುಖಕ್ಕೆ ಗಾಯವಾಗಿದ್ದು ಯಾವುದೇ ಪ್ರಾಣಕ್ಕೆ ಅಪಾಯವಿಲ್ಲ ಎಂದು ವೈದ್ಯರು ಪರೀಕ್ಷೆ ಮಾಡಿ ತಿಳಿಸಿದ್ದಾರೆ.
ಇದನ್ನೂ ಓದಿ:ಹನೂರು: ಪರೀಕ್ಷೆಗೆ ಹೊರಡೋ ಮುನ್ನ ಅಸುನೀಗಿದ ತಾಯಿ; ನೋವಿನ ನಡುವೆಯೂ SSLC ಪರೀಕ್ಷೆ ಬರೆದ ಮಗ
ಬಳಿಕ ತಾಯಿ ತನ್ನ ಮಗಳ ಶಾಲಾ ಆಡಳಿತ ಮಂಡಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣ ಆಸ್ಪತ್ರೆಗೆ ಬಂದು ವಿಚಾರಿಸಿದ ಆಡಳಿತ ಮಂಡಳಿ, ಪರೀಕ್ಷೆ ಬರೆಯಲು ಸಾಧ್ಯವಾಗದೆ ಇರುವುದರಿಂದ ಅದೇ ಶಾಲೆಯ 9 ನೇ ತರಗತಿ ವಿದ್ಯಾರ್ಥಿನಿಯೊಬ್ಬಳ ದಾಖಲೆಗಳನ್ನು ನೀಡಿ, 9 ನೇ ವಿದ್ಯಾರ್ಥಿನಿಯ ಮೂಲಕ ತನ್ವಿ ಸ್ಟಚ್ಚರ್ ನಲ್ಲಿಯೇ ಪರೀಕ್ಷಾ ಕೊಠಡಿಯಲ್ಲಿ ಮಲಗಿಕೊಂಡು ಆಕೆ ಹೇಳಿದ ಹಾಗೆ ಪಕ್ಕದಲ್ಲಿ ಕುಳಿತುಕೊಂಡು ಪರೀಕ್ಷೆ ಬರೆದು ಮುಗಿಸಿದ್ದಾರೆ. ಅದಲ್ಲದೆ ಸೈಂಟ್ ಮೇರೀಸ್ ಆಂಗ್ಲಮಾಧ್ಯಮ ಶಾಲಾ ಆಡಳಿತ ಮಂಡಳಿಯವರು ತಾಯಿಯ ಜೊತೆಯಲ್ಲಿದ್ದರು.
ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ವಾಣಿ ಕಾಲೇಜಿನ ಪರೀಕ್ಷಾ ಮೇಲ್ವಿಚಾರರಿಗೆ ಮನವಿ ಮಾಡಿದ ಮೇರೆಗೆ 11:45 ರಿಂದ 2:45 ವರೆಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ.
ಉಜಿರೆ ಬೆನಕ ಆಸ್ಪತ್ರೆಯ ಮುಖಸ್ಥರಾದ ಡಾ.ಗೋಪಾಲಕೃಷ್ಣ ತಮ್ಮ ಆಸ್ಪತ್ರೆಯ ಆಂಬುಲೆನ್ಸ್ ನೀಡಿ ಅದರಲ್ಲಿ ನರ್ಸ್ ನಳಿನಾಕ್ಷಿ ಮತ್ತು ಚಾಲಕ ದಿನೇಶ್ ಇಬ್ಬರನ್ನು ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿನಿ ಜೊತೆ ನೋಡಿಕೊಳ್ಳಲು ಕಳುಹಿಸಿದ್ದು ,ಬೆಳಿಗ್ಗೆ 11:45 ರಿಂದ 2:45 ಗಂಟೆವರೆಗೆ ನರ್ಸ್ ಮತ್ತು ಆಂಬುಲೆನ್ಸ್ ಇದ್ದು ಪರೀಕ್ಷೆ ಮುಗಿದ ಬಳಿಕ ವಾಪಸ್ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆತಂದು ತ್ರೀವನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಿದ್ದಾರೆ.
ತನ್ವಿಯ ಆಸ್ಪತ್ರೆಯ ಚಿಕಿತ್ಸಾ ಖರ್ಚು ವೆಚ್ಚವನ್ನೆಲ್ಲ ಲಾಯಿಲ ಸೈಂಟ್ ಮೇರೀಸ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಭರಿಸಿದೆ ಎಂದು ಮೂಲಗಳು ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Puttur: ಮಾದಕ ವಸ್ತು ಎಂಡಿಎಂಎ ಸಾಗಾಟ ಪ್ರಕರಣ; ಆರೋಪಿಗೆ ಜಾಮೀನು
Rain: ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ; ರಸ್ತೆಗೆ ಬಿದ್ದ ಮರ; ತಪ್ಪಿದ ಭಾರೀ ಅನಾಹುತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.