ಮಣಿಪಾಲ ಉದಯವಾಣಿ ಕಚೇರಿಗೆ ಸಿಎಂ ಬೊಮ್ಮಾಯಿ ಭೇಟಿ

ಉದಯವಾಣಿ ಎಲ್ಲರ ಮನೆಯ, ಮನದ ಮಾತಾಗಿದೆ

Team Udayavani, Apr 11, 2022, 9:31 PM IST

1-dsdsdsad

ಉಡುಪಿ: ಜಿಲ್ಲಾ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆ ಮಣಿಪಾಲದ ಉದಯವಾಣಿ ಪ್ರಧಾನ ಕಚೇರಿಗೆ ಭೇಟಿ ನೀಡಿದರು.

ಅತಿಥಿ ಸಂಪಾದಕರಾಗಿ ಆಗಮಿಸಿದ ಸಿಎಂ ಸಮಾರಂಭವನ್ನುದ್ದೇಶಿಸಿ ಮಾತನಾಡಿ, ಉದಯವಾಣಿ ಈ ಭಾಗದ ಜನರ ಧ್ವನಿಯಾಗಿದೆ. ಕರಾವಳಿ ಕರ್ನಾಟಕದಿಂದ ಪ್ರಾರಂಭವಾಗಿ ಇಡೀ ಕರ್ನಾಟಕವನ್ನು ವ್ಯಾಪಿಸಿದೆ. ಎಲ್ಲರ ಮನೆಯ ಮಾತಾಗಿದೆ, ಮನದ ಮಾತಾಗಿದೆ ಎಂದರು.

ಪತ್ರಿಕೆಯ ವೈಶಿಷ್ಟ್ಯತೆಯ ಗುಟ್ಟು ವೈಶಿಷ್ಟ್ಯ ಸಂಪಾದಿಸಬೇಕು, ನಾನು ಪತ್ರಿಕೆ ನಡೆಸುತ್ತಿಲ್ಲ.ಆದರೆ ನಾನೊಬ್ಬ ಒಳ್ಳೆಯ ಓದುಗ, ಉದಯವಾಣಿ ವಸ್ತು ನಿಷ್ಠ ವರದಿ ನೀಡುತ್ತದೆ, ಈಗ ಹಲವಾರು ಪತ್ರಿಕೆಗಳಿವೆ. ಓದುಗರಿಗೆ ಬಹಳ ಆಯ್ಕೆಗಳಿವೆ. ಓದುಗ ವಿಶ್ವಾಸ ಉಳಿಸಿಕೊಂಡ ಪತ್ರಿಕೆ ಯ ಮೇಲೆ ಅವಲೋಕನ ಮಾಡಬಹುದಾಗಿದೆ. ಉದಯವಾಣಿ ವರದಿಗಳಲ್ಲಿ ಪರ ವಿರೋಧವಿಲ್ಲದ ವರದಿಗಳನ್ನು ಕಾಣಬಹುದಾಗಿದೆ ಎಂದರು.

ವಿಭಿನ್ನ ವಿಶ್ಲೇಷಣೆ ಸತ್ಯವನ್ನು ಹೇಳಬೇಕು, ವಸ್ತು ನಿಷ್ಠವಾಗಿರಬೇಕು, ಅತ್ಯಂತ ಅಮೂಲ್ಯವಾಗಿ ಹೊರ ಹೊಮ್ಮಿದ ಪತ್ರಿಕೆ ಉದಯವಾಣಿ. ೫೦ ವರ್ಷ ಪತ್ರಿಕೆ ಯಶಸ್ವಿಯಾಗಿ ನಡೆಸುವುದು ಸುಲಭದ ಮಾತಲ್ಲ.ನಿಮ್ಮದೇ ಆದ ಛಾಪನ್ನು ಪತ್ರಿಕಾ ರಂಗದಲ್ಲಿ ಮೂಡಿಸಿದ್ದೀರಿ ಎಂದರು.

ರಾಷ್ಟ್ರ ಮೆಚ್ಚಿದ ಬನ್ನಂಜೆ ಗೋವಿಂದ ಆಚಾರ್ಯ ಅಂತಹ ತತ್ವಜ್ಞಾನಿಗಳು ಇಲ್ಲಿ ಸಂಪಾದಕರಾಗಿ ಕೆಲಸ ಮಾಡಿದ್ದು ಪತ್ರಿಕೆಯ ಗುಣಮಟ್ಟ ತೋರಿಸುತ್ತದೆ ಎಂದರು.

ಉದಯವಾಣಿ ಸುದ್ದಿಕೊಡುವ ಮಾಧ್ಯಮ ಅಲ್ಲ ಮಾರ್ಗದರ್ಶನ ಮಾಡುವ ಮಾಧ್ಯಮ. ನಾನು ಉದಯವಾಣಿಯ ವರದಿಗಳನ್ನು ನೋಡಿ ಹಲವು ನಿರ್ಣಯಗಳನ್ನು ಕೈಗೊಂಡಿದ್ದೇನೆ ಎಂದರು.

ರಾಜಕಾರಣಿ ಮಾಧ್ಯಮ ಇಲ್ಲದೆ ಬೆಳೆಯಲು ಸಾಧ್ಯವಿಲ್ಲ, ಅಂತೆಯೇ ಮಾಧ್ಯಮಕ್ಕೂ ರಾಜಕಾರಣಿಗಳ ಅವಶ್ಯಕತೆ ಇದೆ. ನಮಗೆ ಅವಿನಾಭಾವ ಸಂಬಂಧ ಇದೆ. ಟೀಕೆ ಮಾಡಿದಾಗ ಸಮನಾಗಿ ತೆಗೆದುಕೊಂಡು ಹೋಗಬೇಕು. ನಾವು ಹೇಳಿದ್ದನ್ನ ಪ್ರಕಟ ಮಾಡಿ ನಮ್ಮ ಅಭಿಪ್ರಾಯ ಜನರಿಗೆ ತಲುಪಿಸುವ ಕಾರ್ಯ ಆಗಬೇಕು, ಹಾಗಾದಾಗ ಆರೋಗ್ಯಕರವಾದ ಸಮಾಜ ನಿರ್ಮಾಣ ಆಗುತ್ತದೆ. ಉದಯವಾಣಿಯಿಂದ ಕರ್ನಾಟಕದ ಉದಯವಾಗಲಿ ಎಂದರು.

ಉದಯವಾಣಿ ಸಂಸ್ಥೆಯ ಪರವಾಗಿ ಮಣಿಪಾಲ್ ಮೀಡಿಯಾ ನೆಟ್ ವರ್ಕ್ ಕಾರ್ಯನಿರ್ವಾಹಕ ಅಧ್ಯಕ್ಷ ಟಿ.ಸತೀಶ್ ಪೈ, ತರಂಗ ವಾರಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಎಸ್ . ಪೈ, ಮಣಿಪಾಲ ಟೆಕ್ನಾಲಜಿಸ್‌ ಲಿ. ಕಾರ್ಯನಿರ್ವಾಹಕ ಅಧ್ಯಕ್ಷ ಟಿ.ಗೌತಮ್‌ ಪೈ, ಮಣಿಪಾಲ್ ಮೀಡಿಯಾ ನೆಟ್ ವರ್ಕ್ ಲಿಮಿಟೆಡ್ ನ ಸಿಇಒ& ಎಂಡಿ ವಿನೋದ್ ಕುಮಾರ್, ಸಂಪಾದಕರಾದ ಅರವಿಂದ ನಾವಡ ಮುಖ್ಯಮಂತ್ರಿಗಳನ್ನು ಸ್ವಾಗತಿಸಿದರು.

ಸಿಎಂ ಜತೆಯಲ್ಲಿ ಸಚಿವರಾದ ಸುನಿಲ್ ಕುಮಾರ್, ಶಾಸಕರಾದ ರಘುಪತಿ ಭಟ್, ಜಿಲ್ಲಾಧಿಕಾರಿ ಕೂರ್ಮ ರಾವ್ ಸೇರಿ ಹಿರಿಯ ಅಧಿಕಾರಿಗಳು ಆಗಮಿಸಿದ್ದರು.

ಟಾಪ್ ನ್ಯೂಸ್

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

1-kuu

ಕಾರ್ಗಿಲ್‌ ದಾಳಿ ಮಾಹಿತಿ ಕೊಟ್ಟ ಕುರಿಗಾಹಿ ಸಾವು: ಸೇನೆ ನಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.