ಪುತ್ತೂರು: ಹೆಚ್ಚಿನ ಸಿಸಿ ಕೆಮರಾ ಕಾರ್ಯ ಸ್ಥಗಿತ
ದುರಸ್ತಿ ಮಾಡಲು ನಗರಸಭೆಗೆ ಪತ್ರ ಬರೆದ ಪೊಲೀಸ್ ಇಲಾಖೆ
Team Udayavani, Apr 12, 2022, 9:58 AM IST
ಪುತ್ತೂರು : ನಗರದ ಆಯಕಟ್ಟಿನ ಸ್ಥಳಗಳಲ್ಲಿ ಕಣ್ಗಾವಲಿಗಾಗಿ ಪೊಲೀಸ್ ಹಾಗೂ ನಗರಸಭೆ ಸಹಕಾರ ದಲ್ಲಿ ಅಳವಡಿಸಿರುವ ಸಿಸಿ ಕೆಮರಾಗಳ ಪೈಕಿ ಬಹುತೇಕ ಕೆಟ್ಟು ಹೋಗಿದ್ದು ದುರಸ್ತಿ ಮಾಡುವಂತೆ ಪೊಲೀಸ್ ಇಲಾಖೆಯು ನಗರಸಭೆಗೆ ಪತ್ರ ಬರೆದಿದೆ. ಬೊಳುವಾರು, ದರ್ಬೆ, ಕೆಎಸ್ ಆರ್‌ಟಿಸಿ ಬಸ್ ನಿಲ್ದಾಣ ಸಂಪರ್ಕ ರಸ್ತೆ ಸೇರಿದಂತೆ ವಿವಿಧ ಭಾಗಗಳಲ್ಲಿ ಸಿಸಿ ಕೆಮರಾ ಅಳವಡಿಸಿದ್ದು ಹೆಚ್ಚಿನವು ನಿರ್ವಹಣೆ ಇಲ್ಲದೆ ಕಾರ್ಯಾಚರಣೆ ಸ್ಥಗಿತಗೊಳಿಸಿದೆ.
ಕಳ್ಳರ ಕರಾಮತ್ತು
ಸಿಸಿ ಕೆಮರಾ ಇಲ್ಲದ ಕಾರಣ ಕಳ್ಳರ ಕುರುಹು ಪತ್ತೆ ಹಚ್ಚುವುದು ಪೊಲೀಸರಿಗೆ ಹರ ಸಾಹಸವಾಗಿ ಪರಿಣಮಿಸಿದೆ. ರಾಜ್ಯ ಹೆದ್ದಾರಿಗಳಲ್ಲಿಯೂ ರಾತ್ರಿ ಹೊತ್ತಿನಲ್ಲಿ ಕೆಲವು ಆಯಕಟ್ಟಿನ ಸ್ಥಳಗಳಲ್ಲಿ ಅಪರಿಚಿತ ವಾಹನಗಳು ದ್ವಿಚಕ್ರ ವಾಹನ ಹಾಗೂ ಲಘು ವಾಹನಗಳಿಗೆ ಹಿಟ್‌ಆ್ಯಂಡ್ ರನ್ ಮಾಡಿ ಪಲಾಯನ ಮಾಡುವ ಘಟನೆಗಳೂ ಹೆಚ್ಚಾಗುತ್ತಿವೆ. ಆದರೆ ಈ ಕಡೆಗಳಲ್ಲೂ ಸಿಸಿ ಕೆಮರಾಗಳು ಕಾರ್ಯಾಚರಿಸದ ಕಾರಣ ಇಂಥಹ ಪ್ರಕರಣಗಳನ್ನೂ ಪತ್ತೆಹಚ್ಚುವುದು ಕಷ್ಟ ಸಾಧ್ಯವಾಗುತ್ತಿದೆ. ಇದೀಗ ಪುತ್ತೂರು ಜಾತ್ರೆಯು ಆರಂಭಗೊಂಡಿದ್ದು ಸುರಕ್ಷತೆ ದೃಷ್ಟಿಯಿಂದ ಸಿಸಿ ಕೆಮರಾದ ಅಗತ್ಯ ಇರುವುದರಿಂದ ನಗರಾಡಳಿತ ತತ್‌ಕ್ಷಣ ದುರಸ್ತಿಗೆ ಕ್ರಮ ಕೈಗೊಳ್ಳಬೇಕಿದೆ.
ಸ್ವಚ್ಛ ಪರಿಸರಕ್ಕೂ ಅನುಕೂಲ ನಗರದಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶಕ್ಕೂ ಸಿಸಿ ಕೆಮರಾಗಳನ್ನು ಬಳಸಲಾಗುತ್ತಿದ್ದು ಅಲ್ಲಲ್ಲಿ ಕಸ, ತ್ಯಾಜ್ಯ ಎಸೆಯುವ ಕಿಡಿ ಗೇಡಿಗಳನ್ನು ಪತ್ತೆ ಮಾಡಲು ಇದರ ದೃಶ್ಯಗಳು ಆಧಾರವಾಗಿದೆ. ಹಲವೆಡೆ ಕೈ ಕೊಟ್ಟಿರುವ ಕಾರಣ ಕಾರ್ಯಾಚರಣೆಗೂ ತೊಡಕು ಉಂಟಾಗಿದೆ.
ಶೀಘ್ರ ದುರಸ್ತಿ
ಸಾರ್ವಜನಿಕ ಸೇವೆಗೆ ಅನುಕೂಲವಾಗುವಂತೆ ನಗರಸಭೆ ವತಿಯಿಂದ ಅಳವಡಿಸಿರುವ ಸಿಸಿ ಕೆಮರಾಗಳ ದುರಸ್ತಿ, ನಿರ್ವಹಣೆ ಮತ್ತು ಹೊಸದಾಗಿ ಅಳವಡಿಸಿ ನಿರ್ವಹಿಸಲು ನಗರ ಠಾಣಾ ಪೊಲೀಸ್ ನಿರೀಕ್ಷಕರು ನಗರಸಭೆಗೆ ಪತ್ರ ಬರೆದಿದ್ದು ಅದರಂತೆ ದುರಸ್ತಿ ನಡೆಸಲು ನಿರ್ಧರಿಸಲಾಗಿದೆ. –ಜೀವಂಧರ್ ಜೈನ್, ಅಧ್ಯಕ್ಷ, ನಗರಸಭೆ ಪುತ್ತೂರು
ಗಮನಕ್ಕೆ ತರಲಾಗಿದೆ
ನಗರದ 46 ಕಡೆಗಳಲ್ಲಿ ಸಿಸಿ ಕೆಮರಾ ಇದ್ದು ಅವುಗಳಲ್ಲಿ ಅಂದಾಜು 28 ಕೆಮರಾ ಹಾಳಾಗಿದೆ. ಇದರ ದುರಸ್ತಿಗಾಗಿ ನಗರಸಭೆಯ ಗಮನಕ್ಕೆ ತರಲಾಗಿದೆ. –ರಾಜೇಶ್ ಕೆ.ವಿ., ಎಸ್‌ಐ, ನಗರ ಠಾಣೆ ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.