ಜೆಡಿಎಸ್‌ನಿಂದ ಜನತಾ ಜಲಧಾರೆ ಆರಂಭ

ಪ್ರಮುಖ ನೀರಾವರಿ ಯೋಜನೆ ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಮಹದಾಸೆಯೊಂದಿಗೆ ಸಂಚಾರ

Team Udayavani, Apr 12, 2022, 4:03 PM IST

17

ಆಲಮಟ್ಟಿ: ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಮಹದಾಶೆಯೊಂದಿಗೆ ಜೆಡಿಎಸ್‌ ಪಕ್ಷದ ವತಿಯಿಂದ ಜನತಾ ಜಲಧಾರೆ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್‌ ಬಾಗಲಕೋಟ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಹೇಳಿದರು.

ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಜೆಡಿಎಸ್‌ ಪಕ್ಷದ ವಿಜಯಪುರ-ಬಾಗಲಕೋಟೆ ಜಿಲ್ಲಾ ಘಟಕಗಳ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಮಾಜಿ ಪ್ರಧಾನಿ ದೇವೇಗೌಡ ಅವರು ರಾಜ್ಯದಲ್ಲಿ ನೀರಾವರಿ ಮಂತ್ರಿ ಹಾಗೂ ಮುಖ್ಯಮಂತ್ರಿಯಾಗಿರುವ ವೇಳೆ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಲ್ಲೊಂದಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ಸಾಕಾರಕ್ಕೆ ಶ್ರಮಿಸಿದ್ದಾರೆಂಬುದು ಈ ಭಾಗದ ಜನರಿಗೆ ತಿಳಿದಿದೆ ಎಂದರು.

ಜೆಡಿಎಸ್‌ ವರಿಷ್ಠ ಪ್ರಧಾನಿಯಾಗಿರುವ ವೇಳೆ ಎಐಬಿಪಿ ಅನುದಾನ ಸೇರಿದಂತೆ ಪ್ರಮುಖವಾಗಿ ನೀರಾವರಿಯಾಗಿ ವಿಶೇಷ ಆದ್ಯತೆ ನೀಡಿದ್ದರು. ರಾಜ್ಯದಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿರುವ ವೇಳೆ ನೀರಾವರಿ ಯೋಜನೆಗಳ ಅನುಷ್ಠಾನ ಮತ್ತು ರೈತರ ಏಳ್ಗೆಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿರುವ ಸಂಗತಿ ನಾಡಿನ ಜನರು ಅರಿತಿದ್ದಾರೆ ಎಂದರು.

ರಾಜ್ಯದ 15 ಕಡೆಯಿಂದ ಯಾತ್ರೆ: ರಾಜ್ಯದ ಒಟ್ಟು 15 ಕಡೆಯಿಂದ ಜನತಾ ಜಲಧಾರೆ ಯಾತ್ರೆ ಹೊರಡಲಿದ್ದು, ಕೊನೆಗೆ ಬೆಂಗಳೂರಿನಲ್ಲಿ ಬೃಹತ್‌ ಸಮಾವೇಶ ಜರುಗಲಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಏ.16ರಂದು ಕೃಷ್ಣೆಯ ದಡದಲ್ಲಿರುವ ಯಲಗೂರ ಗ್ರಾಮದ ಯಲಗೂರೇಶ್ವರ ದೇವಸ್ಥಾನಕ್ಕೆ ತೆರಳಿ ಪವನಸುತನ ದರ್ಶನ ಪಡೆದು ನಂತರ ಆಲಮಟ್ಟಿಯಲ್ಲಿ ಕೃಷ್ಣೆಯ ಜಲವನ್ನು ಕಳಶದಲ್ಲಿ ಸಂಗ್ರಹಿಸಿಕೊಂಡು ಜನತಾ ಜಲಧಾರೆ ಸಂಕಲ್ಪ ಯಾತ್ರೆಯ ಬೃಹತ್‌ ಸಮಾವೇಶ ನಡೆಸಲಾಗುವುದು ಎಂದರು.

ರಾಜ್ಯದಲ್ಲಿ ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಮಹಾದಾಯಿ, ತುಂಗಭದ್ರೆ, ಭೀಮಾ, ಕಾವೇರಿ, ಗೋದಾವರಿ, ಕಾರಂಜಾ, ಮುಲ್ಲಾಮಾರಿ, ಅಮರ್ಜಾ, ಅಘನಾಶಿನಿ, ಶರಾವತಿ, ಚಕ್ರ, ವಾರಾಹಿ, ನೇತ್ರಾವತಿ ನದಿಗಳು ಹರಿದಿದ್ದರೂ ಇನ್ನೂವರೆಗೆ ಸಮಗ್ರ ನೀರಾವರಿಯಾಗಿಲ್ಲ. ಇನ್ನು ಕೆಲ ಜಲಾಶಯಗಳನ್ನು ನಿರ್ಮಿಸಿ 3-4ದಶಕಗಳು ಗತಿಸಿದ್ದರೂ ರೈತರ ಜಮೀನಿಗೆ ನೀರುಣಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ಕೆಲ ಜಲ ವಿವಾದಗಳು ನೆರೆ ರಾಜ್ಯಗಳ ತಕರಾರಿನಿಂದ ಸರ್ವೋತ್ಛ ನ್ಯಾಯಾಲಯದಲ್ಲಿ ನನೆಗುದಿಗೆ ಬಿದ್ದಿವೆ. ಕೆಲ ಜಲಾಶಯಗಳ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಕಾಲುವೆಗಳು, ವಿತರಣಾ ಕಾಲುವೆಗಳನ್ನು ಪುನಃ ಶ್ಚೇತನ ಮತ್ತು ಆಧುನೀಕರಣಗೊಳಿಸದಿರುವುದರಿಂದ ರೈತರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಈ ಎಲ್ಲ ಯೋಜನೆಗಳಿಗೆ ಕಾಯಕಲ್ಪ ಕಲ್ಪಿಸಿ ರಾಜ್ಯದ ನದಿಗಳ ನೀರು ಸದ್ಬಳಕೆ ಮಾಡಿ ರಾಜ್ಯದ ಜನತೆಗೆ ಜಲಶ್ಯಾಮಲ- ಸಸ್ಯಶ್ಯಾಮಲ ವಾಗಿಸಲು ಜಾತ್ಯತೀತ ಜನತಾದಳ ಕಟಿಬದ್ಧವಾಗಿದೆ ಎಂದರು. ನಾಗಠಾಣ ಕ್ಷೇತ್ರದ ಶಾಸಕ ದೇವಾನಂದ ಚವ್ಹಾಣ, ಬಿ.ಡಿ.ಪಾಟೀಲ, ಬಸನಗೌಡ ಮಾರಡಗಿ, ಸಿದ್ದು ಬಂಡಿ, ಮಂಗಳಾದೇವಿ ಬಿರಾದಾರ, ಸಲೀಂ ಮೋಮಿನ್‌ ಮತ್ತಿತರರಿದ್ದರು

ಟಾಪ್ ನ್ಯೂಸ್

Sahakara-saptha

Cooperation: ನಬಾರ್ಡ್‌ ನೆರವು ಕಡಿತದಿಂದ ರಾಜ್ಯದ ರೈತರಿಗೆ ದೊಡ್ಡ ಅನ್ಯಾಯ: ಸಿದ್ದರಾಮಯ್ಯ

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

1-erqrer

Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Siddu-Bagalakote

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ

: ಸಿಎಂ ಸಿದ್ದರಾಮಯ್ಯ

Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ

ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ

ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ

ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ

ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ

ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ

ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

2

Udupi: ಯುವತಿ ನಾಪತ್ತೆ; ದೂರು ದಾಖಲು

Sahakara-saptha

Cooperation: ನಬಾರ್ಡ್‌ ನೆರವು ಕಡಿತದಿಂದ ರಾಜ್ಯದ ರೈತರಿಗೆ ದೊಡ್ಡ ಅನ್ಯಾಯ: ಸಿದ್ದರಾಮಯ್ಯ

Devadurga

Karkala: ಅಕ್ರಮ ಮದ್ಯ ದಾಸ್ತಾನು; ಆರೋಪಿ ಸೆರೆ

Brahmavar

Malpe: ಅಸ್ವಾಭಾವಿಕ ಸಾವು; ಪ್ರಕರಣ ದಾಖಲು

WhatsApp Image 2024-11-17 at 21.09.50

Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.