ಭಾಸ್ಕರ ಭಯಂಕರ; ಭೂಮಿಯತ್ತ ಘೋರ ಸೌರಮಾರುತ…ಏನಿದು ಆಪತ್ತು
Team Udayavani, Apr 13, 2022, 9:30 AM IST
ಸೌರಮಂಡಲದ ಅಧಿಪತಿ ಸೂರ್ಯ, ಭೂಮಂಡಲದ ಪಾಲಿಗೆ ಈಗೀಗ ಒಂದಲ್ಲ ಒಂದು ಕಿತಾಪತಿಗೆ ಕಾರಣವಾಗುತ್ತಿದ್ದಾನೆ. ಸೂರ್ಯನ ಒಡಲಿನಿಂದ ಚಿಮ್ಮಿಬರುತ್ತಿರುವ ಬೃಹತ್ ಸೌರಮಾರುತ ನಾಳೆ (ಎ.14) ಭೂಕಾಂತೀಯ ವಲಯಕ್ಕೆ ಅಪ್ಪಳಿಸಲಿದ್ದು, ಉಪಗ್ರಹ- ಇಂಟರ್ನೆಟ್ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲ ಮಾಡುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಆತಂಕಿಸುತ್ತಿದ್ದಾರೆ…
ಏನಿದು ಆಪತ್ತು?
ಸೂರ್ಯನ ಮೇಲ್ಪದರದಲ್ಲಿ ಉದ್ಭವಿಸುವ ಜ್ವಾಲಾ ಸ್ಫೋಟವಾದ “ಕರೋನಲ್ ಮಾಸ್ ಇಜೆಕ್ಷನ್’ (ಸಿಎಂಇ) ಅತ್ಯಂತ ಪ್ರಬಲ ಸೌರಮಾರುತಗಳನ್ನು ಉಗುಳಿವೆ. ಸೂರ್ಯನಿಂದ ಚಿಮ್ಮಿದ ಈ ಆವೇಶದ ಕಣಗಳು ಭೂ ಮಂಡಲದ ಕಾಂತೀಯ ಕ್ಷೇತ್ರಕ್ಕೆ ಢಿಕ್ಕಿ ಹೊಡೆದು, ಭೂಕಾಂತೀಯ ಚಂಡಮಾರುತಗಳನ್ನು ಸೃಷ್ಟಿಸಲಿವೆ.
ಗಂಟೆಗೆ 20,69,834 ಕಿ.ಮೀ. ವೇಗ!
ಸಿಎಂಇಯಿಂದ ಸೃಷ್ಟಿಯಾದ ಸೌರಮಾರುತಗಳು ಸೆಕೆಂಡಿಗೆ 429/575 ಕಿ.ಮೀ.ನಂತೆ ಗಂಟೆಗೆ 20,69,834 ಕಿ.ಮೀ. ವೇಗದಲ್ಲಿ ಅಪ್ಪಳಿಸಿವೆ. ಭೂಮಂಡಲದಲ್ಲಿ ಇವು ಮಧ್ಯಮ ಭೂಕಾಂತೀಯ ಪ್ರಕ್ಷುಬ್ಧತೆಗಳನ್ನು ಸೃಷ್ಟಿಸಲಿದೆ.
ಉಪಗ್ರಹಗಳಿಗೆ ಎಫೆಕ್ಟ್
ನಾಸಾ ಸಹಿತ ಹಲವು ಬಾಹ್ಯಾಕಾಶ ಸಂಸ್ಥೆಗಳು ಈಗಾಗಲೇ ಭೂಮಿ ಸುತ್ತ ಸಾಕಷ್ಟು ಉಪಗ್ರಹಗಳನ್ನು ಹಾರಿಬಿಟ್ಟಿವೆ. ಈ ಪೈಕಿ ಹಲವು ಇನ್ನೂ ನಿಗದಿತ ಕಕ್ಷೆ ಸೇರಿಲ್ಲ. ಇಂಥ ಉಪಗ್ರಹಗಳನ್ನು ಭೂಕಾಂತೀಯ ಮಾರುತಗಳು ಆಹುತಿ ತೆಗೆದುಕೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಕೆಲವೆಡೆಯ ಇಂಟರ್ನೆಟ್ ವ್ಯವಸ್ಥೆಯೇ ಸ್ಥಗಿತಗೊಳ್ಳುವ ಅಪಾಯವೂ ಇರಬಹುದು ಎಂದು ವಿಜ್ಞಾನಿಗಳು ಊಹಿಸಿದ್ದಾರೆ.
49 ಉಪಗ್ರಹಗಳು ಭಸ್ಮ!
ಕಳೆದೊಂದು ತಿಂಗಳಲ್ಲಿ ಇದು ಸೂರ್ಯ ಹೊಮ್ಮಿಸಿದ 11ನೇ ಸೌರ ಮಾರುತ. ಸ್ಪೇಸ್ ಎಕ್ಸ್ ಸಂಸ್ಥೆ ಯೋಜನೆಗಾಗಿ, ಫೆ.4ರಂದು 49 ಉಪಗ್ರಹಗಳನ್ನು ಉಡಾಯಿಸಿತ್ತು. ಈ ಪೈಕಿ ಬಹು ತೇಕ ಉಪ ಗ್ರಹಗಳು ಭಸ್ಮವಾಗಿದ್ದು, 50 ಮಿಲಿಯನ್ ಡಾಲರ್ ನಷ್ಟವಾಗಿದೆ.
ಕೈಕೊಟ್ಟಿದ್ದ ಟೆಲಿಗ್ರಾಫ್
1859 ಹಾಗೂ 1952ರಲ್ಲಿ ವಿಶ್ವದಾದ್ಯಂತ ದಿಢೀರನೆ ಟೆಲಿಗ್ರಾಫ್ ವ್ಯವಸ್ಥೆಯೇ ಕೈಕೊಟ್ಟಿತ್ತು.ಟೆಲಿಗ್ರಾಫ್ ಉಪಕರಣಗಳನ್ನು ಮುಟ್ಟಿ ದವರಿಗೆಲ್ಲ ವಿದ್ಯುತ್ ಶಾಕ್ ಹೊಡೆಯುತ್ತಿತ್ತು. ಆಮೇಲೆ ಗೊತ್ತಾಯಿತು, ಇದಕ್ಕೆಲ್ಲ ಕಾರಣ ಭೂಕಾಂತೀಯ ಮಾರುತ ಎನ್ನುವುದು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.