ಲೂಪ್ ರಸ್ತೆ ಪೂರ್ಣಗೊಂಡ ಬಳಿಕ ಕ್ಲಾಕ್‌ಟವರ್ ಉದ್ಘಾಟನೆ
ಸ್ಮಾರ್ಟ್‌ಸಿಟಿಯಿಂದ ಮೂಲ ಸೌಕರ್ಯಗಳ ಅಭಿವೃದ್ಧಿ
Team Udayavani, Apr 13, 2022, 10:36 AM IST
ಹಂಪನಕಟ್ಟೆ: ಸ್ಮಾರ್ಟ್ ಸಿಟಿಯಿಂದ ದುಬಾರಿ ವೆಚ್ಚದಲ್ಲಿ ನಿರ್ಮಾಣಗೊಂಡ ಕ್ಲಾಕ್ ಟವರ್ ಕಾಮಗಾರಿ ಪೂರ್ಣಗೊಂಡು ವರ್ಷ ಕಳೆದರೂ ಇನ್ನೂ ಉದ್ಘಾಟನೆಗೊಂಡಿಲ್ಲ. ಕ್ಲಾಕ್‌ಟವರ್ ಪ್ರದೇಶದ ಸುತ್ತ ಲೂಪ್ ರಸ್ತೆಯಾಗಿ ಬದಲಾಗುತ್ತಿದ್ದು, ಈ ಕಾಮಗಾರಿ ಮುಗಿದ ಬಳಿಕವಷ್ಟೇ ಅಧಿಕೃತ ಉದ್ಘಾಟನೆ ನಡೆಯಲಿದೆ.
ಕ್ಲಾಕ್‌ಟವರ್-ಎ.ಬಿ. ಶೆಟ್ಟಿ ವೃತ್ತ, ಹ್ಯಾಮಿಲ್ಟನ್ ವೃತ್ತ, ರಾವ್ ಆ್ಯಂಡ್ ರಾವ್ ವೃತ್ತದಿಂದ ಮತ್ತೆ ಕ್ಲಾಕ್‌ಟವರ್‌ಗೆ ಸುತ್ತಲೂ ಏಕಮುಖ ಸಂಚಾರ ಕಲ್ಪಿಸಲಾಗಿದ್ದು, ಈ ರಸ್ತೆಯಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಪುರಭವನ ಬಳಿ ಅಂಡರ್‌ಪಾಸ್ ಕಾಮಗಾರಿಯೂ ಕೊನೆಯ ಹಂತದಲ್ಲಿದೆ. ಸ್ಟೇಟ್‌ಬ್ಯಾಂಕ್, ಹಂಪನಕಟ್ಟೆ ಸುತ್ತಲಿನ ಪರಿಸರಲ್ಲಿ ಫುಟ್‌ಪಾತ್ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಈ ಎಲ್ಲ ಅಭಿವೃದ್ಧಿ ಕೆಲಸಗಳು ಪೂರ್ಣಗೊಳ್ಳಲು ಕೆಲವು ವಾರಗಳು ಬೇಕು. ಬಳಿಕ ಈ ಎಲ್ಲ ಅಭಿವೃದ್ಧಿ ಕಾಮಗಾರಿಗಳು ಒಟ್ಟುಗೂಡಿಸಿ ಉದ್ಘಾಟಿಸಲು ತೀರ್ಮಾನಿಸಲಾಗಿದೆ.
ಸದ್ಯ ಕ್ಲಾಕ್‌ಟವರ್‌ನ ನಾಲ್ಕೂ ದಿಕ್ಕಿಗೂ ಗಡಿಯಾರವನ್ನು ಅಳವಡಿಸಲಾಗಿದೆ. ಗೋಪುರದ ಸುತ್ತಲೂ ಕಟ್ಟೆ ನಿರ್ಮಾಣ ಮಾಡಲಾಗಿದ್ದು, ಗಾರ್ಡನ್ ವ್ಯವಸ್ಥೆ ಇದೆ. ರಾತ್ರಿ ವೇಳೆ ಆಕರ್ಷಣೀಯವಾಗಿ ಕಾಣಲೆಂದು ಗೋಪುರದಲ್ಲಿ ಲೈಟ್ ವ್ಯವಸ್ಥೆ ಮಾಡಲಾಗಿದೆ. ನಗರದಲ್ಲಿ ಸಮಯ ಸೂಚಕವಾಗಿ ಹಲವು ವರ್ಷಗಳ ಹಿಂದೆ ಹಂಪನಕಟ್ಟೆಯಲ್ಲಿ ಕ್ಲಾಕ್ ಟವರ್ ನಿರ್ಮಾಣ ಮಾಡಲಾಗಿತ್ತು.
ನಗರದಲ್ಲಿ ವಾಹನ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗಬಾರದು ಎಂಬ ಉದ್ದೇಶದಿಂದ ಕೆಲವು ವರ್ಷಗಳ ಹಿಂದೆ ಟವರ್ ಅನ್ನು ಕೆಡಹಲಾಗಿತ್ತು. ಬಳಿಕ ಇದೇ ಜಾಗದಲ್ಲಿ ಹಿಂದಿನ ಕ್ಲಾಕ್ ಟವರ್‌ನ ನೆನಪಿಗಾಗಿ ಹೊಸದಾಗಿ ನಿರ್ಮಿಸಲು ಪಾಲಿಕೆ ಮೇಯರ್ ಆಗಿದ್ದ ಕವಿತಾ ಸನಿಲ್ ನಿರ್ಧರಿಸಿ 2018ರಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಬಳಿಕ ಈ ಯೋಜನೆಯನ್ನು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಕಾಮಗಾರಿ ಮುಂದುವರಿಸಲಾಗಿತ್ತು. ಕಳೆದ ಒಂದೂವರೆ ವರ್ಷಗಳ ಹಿಂದೆಯೇ ಕಾಮಗಾರಿ ಪೂರ್ಣಗೊಂಡಿದ್ದರೂ, ಕ್ಲಾಕ್‌ಟವರ್‌ಗೆ ಇನ್ನೂ ಉದ್ಘಾಟನೆ ಭಾಗ್ಯ ದೊರಕಿಲ್ಲ.
ಗೋಪುರಕ್ಕೆ ಇಟಲಿ ಮೂಲದ ಯಂತ್ರ
ಸುಮಾರು 88 ಅಡಿ ಸುತ್ತಳತೆ ಹೊಂದಿರುವ ಈ ಕ್ಲಾಕ್‌ಟವರ್‌ನಲ್ಲಿ ಬಳಕೆಯಾಗುವ ಗಡಿಯಾರಕ್ಕೆ ಯಂತ್ರೋಪಕರಣಗಳು ಇಟಲಿ ದೇಶದಿಂದ ಆಮದು ಮಾಡಿಕೊಳ್ಳಲಾಗಿದೆ. 8 ಬಗೆಯ ಬೆಲ್ ಮಾಡುವ ಸಾಮರ್ಥ್ಯ ಇರುವ ಮೈಕ್ರೋ ಪ್ರೊಸೆಸರ್ ಕೂಡ ಇದರಲ್ಲಿದೆ. ಈ ಕ್ಲಾಕ್‌ಗೆ ಅಕ್ರೇಲಿಕ್ ಶೀಟ್, ಸ್ಟೈನ್‌ಲೆಸ್ ಸ್ಟೀಲ್, ಎಸಿಪಿ ಶೀಟ್‌ಗಳನ್ನು ಬಳಸಿಕೊಂಡು ಸಿದ್ಧಪಡಿಸಿಕೊಂಡಿದ್ದು, ಈಗಾಗಲೇ ಗೋಪುರದ ನಾಲ್ಕು ಬದಿಗಳಿಗೆ ನಾಲ್ಕು ಕ್ಲಾಕ್‌ನ ಮಾದರಿಗಳಿಗೆ ನಾಲ್ಕು ಯಂತ್ರಗಳನ್ನು ಅಳವಡಿಸಲಾಗಿದೆ.
ಅಭಿವೃದ್ದಿ ಕಾಮಗಾರಿ
ಹಂಪನಕಟ್ಟೆ ಪರಿಸರದಲ್ಲಿ ಸದ್ಯ ವಿವಿಧ ಅಭಿವೃದಿ ಕಾಮಗಾರಿಗಳು ನಡೆಯುತ್ತಿದೆ. ಇಲ್ಲಿನ ಹಂಪನಕಟ್ಟೆ-ಎ.ಬಿ. ಶೆಟ್ಟಿ ವೃತ್ತ, ಹ್ಯಾಮಿಲ್ಟನ್ ವೃತ್ತ-ರಾವ್ ಆ್ಯಂಡ್ ರಾವ್ ವೃತ್ತ ಸಹಿತ ಮತ್ತೆ ಹಂಪನಕಟ್ಟೆವರೆಗೆ ಲೂಪ್ ರಸ್ತೆಯಾಗಿ ಅಭಿವೃದ್ಧಿಯಾಗುತ್ತಿದೆ. ಮತ್ತೊಂದೆಡೆ ಟೌನ್‌ಹಾಲ್ ಬಳಿ ಅಂಡರ್‌ಪಾಸ್ ಕಾಮಗಾರಿ ನಡೆಯುತ್ತಿದೆ. ಇಲ್ಲಿನ ಕ್ಲಾಕ್‌ಟವರ್ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಲೂಪ್ ರಸ್ತೆ ಪೂರ್ಣಗೊಂಡ ಬಳಿಕ ಕ್ಲಾಕ್‌ಟವರ್ ಉದ್ಘಾಟನೆಗೊಳಿಸಲಾಗುವುದು. –ಡಿ. ವೇದವ್ಯಾಸ ಕಾಮತ್, ಶಾಸಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.