![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Apr 13, 2022, 10:52 AM IST
ತಣ್ಣೀರುಬಾವಿ: ತಣ್ಣೀರು ಬಾವಿ ಬೀಚ್‌ನಲ್ಲಿ ಆಂಧ್ರ ಮೂಲದ ಜಿಎಂಆರ್ ವಿದ್ಯುತ್ ಕಂಪೆನಿಯು ತನ್ನ ಅವಶೇಷವನ್ನು ತೆರವು ಗೊಳಿಸದೆ ಇದ್ದು, ಪ್ರವಾಸಿಗರು ಎಚ್ಚರ ತಪ್ಪಿದರೆ ಜೀವಕ್ಕೆ ಅಪಾಯದ ಆತಂಕ ಎದುರಾಗಿದೆ.
ಸಮುದ್ರದೊಳಗೆ ಹಾಕಿದ ಕಾಂಕ್ರೀಟ್ ಪಿಲ್ಲರ್, ಫೈಪ್‌ಲೈನ್ ತೆರವುಗೊಳಿಸದ ಕಾರಣ ಇದರ ಮೇಲ್ಭಾಗ ಮರಳಿನಲ್ಲಿ ಕಾಣಸಿಗುತ್ತಿದೆ. ಕಬ್ಬಿಣ ತುಕ್ಕು ಹಿಡಿದಿದ್ದು, ಬಹಳಷ್ಟು ಚೂಪಾಗಿಯೂ ಇದ್ದು ಅಪಾಯ ಆಹ್ವಾನಿಸುತ್ತಿದೆ. ಸುಮಾರು 15 ವರ್ಷಗಳ ಹಿಂದೆ ಇಲ್ಲಿ ಜಿಎಂಆರ್ ಕಂಪೆನಿಯು ತೇಲುವ ವಿದ್ಯುತ್ ಘಟಕ ಸ್ಥಾಪಿಸುತ್ತು. ಈ ವೇಳೆ ಬೀಚ್ ದಡದಲ್ಲಿ ಪೈಪ್ ಅಳವಡಿಕೆಗೆ ಕಬ್ಬಿಣ ಬಳಸಿ ಬೃಹತ್ ಕಲ್ಲುಗಳನ್ನು ಹಾಕಿ ಕಾಂಕ್ರೀಟ್ ಪಿಲ್ಲರ್ ನಿರ್ಮಿಸಿತ್ತು. ಬೀಚ್ ಮುಖೇನವಾಗಿ ಸಮುದ್ರಕ್ಕೆ ಪೈಪ್‌ಲೈನ್ ಕೂಡ ಅಳವಡಿಕೆ ಮಾಡಲಾಗಿತ್ತು. ಘಟಕವು ಹಲವು ವರ್ಷಗಳ ಕಾರ್ಯನಿರ್ವಹಣೆ ಬಳಿಕ ಕಾರಣಾಂತರದಿಂದ ಹೈದರಾಬಾದ್‌ಗೆ ಸ್ಥಳಾಂತರಿಸಲ್ಪಟ್ಟಿತ್ತು. ಆದರೆ ಕಬ್ಬಿಣದ ಪಿಲ್ಲರ್ ಪೂರ್ಣವಾಗಿ ತೆಗೆಯದೆ ನಿರ್ಲಕ್ಷ್ಯ ವಹಿಸಿದ್ದು, ಸ್ಥಳೀಯರು ಅಪಾಯಕ್ಕೀಡಾಗುವ ಭೀತಿ ಉಂಟಾಗಿದೆ.
ಸೂಚನ ಫಲಕ ಅಳವಡಿಕೆ
ಪ್ರವಾಸಿಗರು ಮುನ್ನೆಚ್ಚರಿಕೆ ವಹಿಸುವಂತೆ ತಣ್ಣೀರುಬಾರಿ ಬೀಚ್ ಅಭಿವೃದ್ಧಿ ಸಮಿತಿಯವರು ಫಲಕ ಅಳವಡಿಸಿ ದ್ದಾರೆ. ಜತೆಗೆ ಇಲ್ಲಿ ಜೀವರಕ್ಷಕರು ಕೂಡ ಎಚ್ಚರಿಕೆ ವಹಿಸಲು ಸೂಚನೆ ನೀಡುತ್ತಾರೆ. ಈ ಭಾಗದಲ್ಲಿ ಹಲವಾರು ವರ್ಷಗಳ ಹಿಂದೆ ಮುಳುಗಿದ ಹಡಗು ಒಡೆಯಲು ಇತ್ತೀಚೆಗೆ ಅನುಮತಿ ಲಭಿಸಿದ್ದು, ದಡಕ್ಕೆ ಸಮೀಪವಿರುವ ಈ ಕಬ್ಬಿಣದ ಪೈಪ್ ತೆರವಿಗೆ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.