ಈತನಿಗೆ 30 ಕೋಟಿ ರೂ. ವಿದ್ಯಾರ್ಥಿ ವೇತನ!
27 ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಕಾಲೇಜಿಗೆ ಆಯ್ಕೆಯಾದ ಜಾಣರ ಜಾಣ
Team Udayavani, Apr 14, 2022, 7:45 AM IST
ಫ್ಲೋರಿಡಾ: ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಸಿಗಬೇಕೆಂದರೆ ಅದು ಸುಲಭದ ಮಾತಲ್ಲ. ಹಾಗಿರುವಾಗ ಅಮೆರಿಕದ ಫ್ಲೋರಿಡಾದ ಪೋರನೊಬ್ಬನನ್ನು ಒಂದಲ್ಲ, ಎರಡಲ್ಲ ಬರೋಬ್ಬರಿ 27 ಕಾಲೇಜುಗಳು ಆಯ್ಕೆ ಮಾಡಿಕೊಂಡಿವೆ.
ರುದರ್‌ಫೋರ್ಡ್ ಸೀನಿಯರ್ ಹೈ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಜೊನಾಥನ್ ವಾಲ್ಕರ್(18) ತನ್ನಿಷ್ಟದ ಕಾಲೇಜುಗಳಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಲೆಂದು ಅರ್ಜಿ ಹಾಕಿದ್ದ. ಅರ್ಜಿ ಹಾಕಿದ್ದ ಕಾಲೇಜುಗಳ ವಿಶ್ವವಿದ್ಯಾಲಯಗಳ ಪೈಕಿ, ಹಾರ್ವರ್ಡ್ ವಿವಿ, ಜಾನ್ ಹಾಪ್ಕಿನ್ಸ್ ವಿವಿ, ಯಾಲೆ ವಿವಿ, ಪೆನ್ಸಿಲ್ವೇನಿಯಾ ವಿವಿಯಂತಹ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಸೇರಿ ಒಟ್ಟು 27 ವಿದ್ಯಾಸಂಸ್ಥೆಗಳು ಜೊನಾಥನ್‌ಗೆ ತಮ್ಮ ಕಾಲೇಜಿನಲ್ಲಿ ಸೀಟು ಕೊಡಲು ತುದಿಗಾಲಲ್ಲಿ ನಿಂತಿವೆ. ಅಷ್ಟೇ ಅಲ್ಲದೆ ವಾರ್ಷಿಕ 4 ಮಿಲಿಯನ್ ಡಾಲರ್(30 ಕೋಟಿ ರೂ.) ವಿದ್ಯಾರ್ಥಿವೇತನವನ್ನೂ ಕೊಡಲು ಕಾಲೇಜುಗಳು ಸಿದ್ಧವಿವೆ.
ಬೆಸ್ಟ್ ಬರುವವರೆಗೂ ಬಿಡದ ಯುವಕ:
ಇಷ್ಟೊಂದು ಕಾಲೇಜುಗಳು ಜೊನಾಥನ್‌ನನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಕಾರಣ ಆತನಲ್ಲಿರುವ ಟ್ಯಾಲೆಂಟ್. ವಿಜ್ಞಾನ, ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಒಲವಿರುವ ಆತ ಈಗಾಗಲೇ ಇಂಟರ್‌ನಲ್ ಕಂಬಸcನ್ ಇಂಜಿನ್ ಫಿಲ್ಟರ್ ಸೇರಿ ಕೆಲ ಮಿಷನ್‌ಗಳು ತಯಾರಿಸಿದ್ದಾನೆ. ಮುಂದೆ ದಿವ್ಯಾಂಗರ ನೆರವಿಗಾಗಿ ಏನಾದರೂ ವಿಶೇಷ ಮಿಷನ್ ತಯಾರಿಸಬೇಕೆಂಬ ಆಸೆ ಇಟ್ಟುಕೊಂಡಿದ್ದಾನೆ. ಈಗಾಗಲೇ ಕಣ್ಣು, ಕಿವಿ ಇಲ್ಲದವರಿಗಾಗಿ ವಿಶೇಷ ಮಿಷನ್ ಒಂದನ್ನು ತಯಾರಿಸಿದ್ದಾನೆ ಕೂಡ. ಯಾವುದೇ ವಿಷಯವನ್ನು ಕೈಗೆತ್ತಿಕೊಂಡರೂ ಅದರಲ್ಲಿ ಬೆಸ್ಟ್ ಫಲಿತಾಂಶ ಸಿಗುವ ತನಕ ಬಿಡುವ ವ್ಯಕ್ತಿತ್ವ ಆತನದ್ದಲ್ಲ ಎನ್ನುತ್ತಾರೆ ಅವರ ಗುರುಗಳು. ಫುಟ್ ಬಾಲ್ ಆಟದಲ್ಲೂ ಮುಂದಿರುವುದು ಆತನ ಪ್ಲಸ್ ಪಾಯಿಂಟ್.
ಇದನ್ನೂ ಓದಿ:ಉತ್ತರ ಕನ್ನಡ ಹೆದ್ದಾರಿ ಅಪಘಾತದಲ್ಲಿ 5000ಕ್ಕೂ ಹೆಚ್ಚು ಜಾನುವಾರುಗಳ ಸಾವು
ಕಾಲೇಜಿನ ಬಗ್ಗೆಯೇ ಪ್ರಬಂಧ:
ಹತ್ತಾರು ಕಾಲೇಜುಗಳಿಗೆ ಅರ್ಜಿ ಹಾಕಿದ್ದ ಜೊನಾಥನ್, ಅರ್ಜಿ ಹಾಕುವುದಕ್ಕೂ ಮೊದಲು ಆ ಕಾಲೇಜಿನ ಇತಿಹಾಸದ ಬಗ್ಗೆ ತಿಳಿದುಕೊಂಡಿದ್ದಾನೆ. ಆಯಾ ಕಾಲೇಜಿನ ಬಗ್ಗೆ ಚಂದದೊಂದು ಪ್ರಬಂಧವನ್ನೂ ಬರೆದು ಅರ್ಜಿಯೊಂದಿಗೆ ಕಳುಹಿಸಿಕೊಟ್ಟಿದ್ದನಂತೆ. ಇದೂ ಸಹ ವಿದ್ಯಾಸಂಸ್ಥೆಗಳನ್ನು ಆಕರ್ಷಿಸಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.