ರಬಕವಿ-ಬನಹಟ್ಟಿ : ಜನರಿಗೆ ನಿಷ್ಪ್ರಯೋಜಕ ಉದ್ಯಾನವನಗಳು : ಜನತೆಗೆ ಮುಕ್ತ ಅವಕಾಶ ಯಾವಾಗ?
Team Udayavani, Apr 13, 2022, 7:27 PM IST
ರಬಕವಿ-ಬನಹಟ್ಟಿ : ತಾಲೂಕಾ ಕೇಂದ್ರವಾಗಿರುವ ರಬಕವಿ-ಬನಹಟ್ಟಿ ಅವಳಿ ಪಟ್ಟಣಕ್ಕೆ ಸುಮಾರು 1 ಲಕ್ಷದ ಜನಸಂಖ್ಯೆಯ ಕಿರೀಟವಿದೆ. ಉತ್ತಮ ಶಿಕ್ಷಣ, ಉದ್ಯಮ ಹೀಗೆ ಹಲವಾರು ಯಶಸ್ಸಿನ ಮೆಟ್ಟಿಲುಗಳ ಮೇಲೆ ನಿಂತಿರುವ ಪಟ್ಟಣಕ್ಕೆ ಬೆಳಿಗ್ಗೆ ಅಥವಾ ಸಂಜೆ ಹೊತ್ತು ಹಾಯಾಗಿ ಸಂಚರಿಸಿ ಶುದ್ಧ ಗಾಳಿ ಪಡೆಯಲು ಒಂದೇ ಒಂದು ಉದ್ಯಾನವನ ನಿರ್ವಹಣೆಯಾಗದಿರುವದು ವಿಪರ್ಯಾಸದ ಸಂಗತಿ.
ಬನಹಟ್ಟಿಯ ನೀರಿನ ಟಾಕಿ ಹಾಗು ಅಶೋಕ ಕಾಲನಿಯಲ್ಲಿ ಉದ್ಯಾನವಗಳಿವೆ. ಧೂಳೂ ತಿನ್ನುತ್ತಿರುವ ಆಸನಗಳು, ಒಣಗಿ ನಿಂತು ಯಾವ ಕ್ಷಣದಲ್ಲಾದರೂ ನೆಲಕಚ್ಚುವ ಸ್ಥಿತಿಯಲ್ಲಿರುವ ವೃಕ್ಷಗಳು, ಆಗಾಗ ಕಾಣಿಸಿಕೊಳ್ಳುವ ವಿಷ ಜಂತುಗಳು. ಈ ದೃಶ್ಯ ಕಂಡು ಬರುವದು ಸಾಮಾನ್ಯವಾಗಿವೆ. ಸತತ ಮೂರ್ನಾಲ್ಕು ವರ್ಷಗಳಿಂದ ಉದ್ಯಾನವನಕ್ಕೆ ಬೀಗ ಹಾಕಿದ ಕಾರಣ ನಿರ್ವಹಣೆ ಇಲ್ಲದೆ ಮರ-ಗಿಡಗಳು ಸಂಪೂರ್ಣ ಒಣಗಿದರೆ, ಇಲ್ಲಿನ ಆಸನಗಳು ಧೂಳು ತಿನ್ನುತ್ತಿವೆ. ಅಲ್ಲದೆ ಆಗಾಗ ವಿಷ ಜಂತುಗಳು ಸಹ ಕಾಣಿಸಿಕೊಳ್ಳುತ್ತಿವೆ.
ಲಕ್ಷಾಂತರ ರೂ. ನೀರಿನಂತೆ ಖರ್ಚು ಮಾಡಿ ಇದೀಗ ಉದ್ಯಾನವನ ಸಾರ್ವಜನಿಕರ ಉಪಯೋಗಕ್ಕೆ ಮುಕ್ತವಾಗಿರಿಸದಿರುವದು ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನಾದರೂ ಸಂಬAಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸುವದು ಅವಶ್ಯವಿದೆ.
ಭೂಗಳ್ಳರ ಪಾಲಾದ ಉದ್ಯಾನವನಗಳು: ಕಳೆದೆರಡು ದಶಕಗಳಿಂದ ರಬಕವಿ-ಬನಹಟ್ಟಿ ನಗರಾಭಿವೃದ್ಧಿಯಲ್ಲಿ 50 ಕ್ಕೂ ಹೆಚ್ಚು ಲೇಔಟ್‌ಗಳು ಹುಟ್ಟಿಕೊಂಡಿದ್ದು, ಎಲ್ಲಿಯೂ ಉದ್ಯಾನವನದ ಕುರುಹುಗಳು ದೊರಕುತ್ತಿಲ್ಲ. ಬಹುತೇಕ ಸಮುದಾಯ ಭವನ ಹಾಗು ಉದ್ಯಾನವನಗಳು ಭೂಗಳ್ಳರ ಪಾಲಾಗಿವೆ. ಅವುಗಳನ್ನು ವಶ ಪಡಿಸಿಕೊಂಡು ಅಭವೃದ್ಧಿ ಮಾಡುವುದು ದೊಡ್ಡ ಸವಾಲಾಗದೆ.
ಇವೆಲ್ಲದರ ಕುರಿತಾಗಿ ತುರ್ತು ತನಿಖೆಯಾಗಿ ನಗರಸಭೆ ತನ್ನ ಅಧೀನಕ್ಕೆ ಎಲ್ಲ ಉದ್ಯಾನವನಗಳನ್ನು ವಶಕ್ಕೆ ಪಡೆದು ಅಭಿವೃದ್ಧಿ ಪಡಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಬೇಕೆಂದು ಸ್ಥಳೀಯರ ಒತ್ತಾಯವಾಗಿದೆ.
‘ಸಿಬ್ಬಂದಿ ಕೊರತೆ ಕಾರಣ ಉದ್ಯಾನವನ ನಿರ್ವಹಣೆ ಸಮಸ್ಯೆಯಾಗುತ್ತಿದೆ. ಸಾರ್ವಜನಿಕರು ಜವಾಬ್ದಾರಿಯಿಂದ ನಿರ್ವಹಣೆ ಮಾಡಿದಲ್ಲಿ ಉದ್ಯಾನವನಕ್ಕೆ ಮುಕ್ತ ಅವಕಾಶ ಕಲ್ಪಿಸುವೆ. ಖಾಸಗಿ ಲೇಔಟ್‌ಗಳಲ್ಲಿನ ಉದ್ಯಾನವನಗಳ ಬಗ್ಗೆ ಸಮಗ್ರ ಮಾಹಿತಿ ಪಡೆದಿದ್ದು, ಶೀಘ್ರವೇ ಉದ್ಯಾನವನ ನಿರ್ವಹಣೆಗೆ ಎಲ್ಲವನ್ನೂ ವಶಪಡಿಸಲಾಗುವದು.’-ಶ್ರೀನಿವಾಸ ಜಾಧವ, ಪೌರಾಯುಕ್ತರು, ರಬಕವಿ-ಬನಹಟ್ಟಿ.
`ರಬಕವಿ-ಬನಹಟ್ಟಿ-ಹೊಸೂರ-ರಾಮಪೂರ ಪಟ್ಟಣಗಳಲ್ಲಿ ಮಾದರಿ ಉದ್ಯಾನವನಕ್ಕೆ ಕ್ರಮ ಕೈಗೊಂಡಿದ್ದು, ಬರುವ ಸಾಮಾನ್ಯ ಸಭೆಯಲ್ಲಿ ಉದ್ಯಾನವನ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುವ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.’-ಸಂಜಯ ತೆಗ್ಗಿ, ಅಧ್ಯಕ್ಷರು, ರಬಕವಿ-ಬನಹಟ್ಟಿ.
-ಕಿರಣ ಶ್ರೀಶೈಲ ಆಳಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
Mudhol: ಬಸ್ ಗೆ ಡಿಕ್ಕಿ ಹೊಡೆದ ಬೈಕ್… ಸವಾರರಿಗೆ ಗಂಭೀರ ಗಾಯ
MUST WATCH
ಹೊಸ ಸೇರ್ಪಡೆ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.