ಆಡಿಯೋ ಹೊರಬಂದ ಖುಷಿಯಲ್ಲಿ ‘ಟಕ್ಕರ್’
Team Udayavani, Apr 14, 2022, 3:39 PM IST
ಕನ್ನಡತಿ ಖ್ಯಾತಿಯ ರಂಜನಿ ರಾಘವನ್ ಮತ್ತು ಮನೋಜ್ ಕುಮಾರ್ ನಟನೆಯ ಟಕ್ಕರ್ ಚಿತ್ರ ಮೇ 6ರಂದು ಬರಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಮಣಿಕಾಂತ್ ಕದ್ರಿ ಸಂಗೀತ ನೀಡಿರುವ ‘ಟಕ್ಕರ್’ ಚಿತ್ರದ ಹಾಡುಗಳನ್ನು ಎಟು ಮ್ಯೂಸಿಕ್ ಸಂಸ್ಥೆ ಅತ್ಯುತ್ತಮ ಬೆಲೆ ನೀಡಿ ಖರೀದಿಸಿದೆ.
ವಿಜಯ ಪ್ರಕಾಶ್- ಅನುರಾಧಾ ಭಟ್, ಸಂಜಿತ್ ಹೆಗ್ಡೆ, ಶಶಾಂಕ್ ಶೇಷಗಿರಿ ಹಾಡಿರುವ ಹಾಡುಗಳು ಎಟು ಮ್ಯೂಸಿಕ್ ಮೂಲಕ ಲೋಕಾರ್ಪಣೆಗೊಳ್ಳಲಿದೆ. ಇದರ ಜೊತೆಗೆ ಟ್ರೇಲರ್ ಕೂಡಾ ಇದೇ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ನಾಗೇಶ್ ಕೋಗಿಲು ತಿಳಿಸಿದ್ದಾರೆ. ಎಸ್.ಎಲ್.ಎನ್ ಕ್ರಿಯೇಶನ್ಸ್ ಸಂಸ್ಥೆಯ ಅಡಿಯಲ್ಲಿ ನಾಗೇಶ ಕೋಗಿಲು ಅವರು ಈ ಚಿತ್ರ ವನ್ನು ನಿರ್ಮಿಸಿದ್ದಾರೆ.
ಪ್ರಸ್ತುತ ಜಗತ್ತನ್ನು ನಲುಗಿಸುತ್ತಿರುವ, ಹೆಣ್ಣುಮಕ್ಕಳ ಮಾನ, ಪ್ರಾಣಕ್ಕೆ ಮಾರಕವಾಗಿರುವ ಕಥಾವಸ್ತು ನಮ್ಮ ಚಿತ್ರದಲ್ಲಿದೆ. ತಂತ್ರಜ್ಞಾನ ಹೇಗೆ ಜನರ ನೆಮ್ಮದಿ ಕೆಡಿಸುತ್ತಿದೆ ಮತ್ತು ಅದರಿಂದ ಹೇಗೆ ಎಚ್ಚರವಹಿಸಬೇಕು ಅನ್ನೋದನ್ನು ವಿವರವಾಗಿ ಹೇಳಿದ್ದೇವೆ. ಮನೆಮಂದಿಯೆಲ್ಲಾ ಬಂದು ನೋಡಲೇ ಬೇಕಿರುವ ಚಿತ್ರ “ಟಕ್ಕರ್’ ವಿ. ರಘು ಶಾಸ್ತಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ ಎಂಬುದು ನಿರ್ಮಾಪಕ ನಾಗೇಶ ಕೋಗಿಲು ಮಾತು.
ಇಡೀ ಜಗತ್ತನ್ನು ನಲುಗುವಂತೆ ಮಾಡಿ ರುವ, ಹೆಣ್ಣು ಮಕ್ಕಳನ್ನು ಮಾನ ಸಿ ಕವಾಗಿ ಹಿಂಡುತ್ತಿರುವ ಸೈಬರ್ ಕ್ರೈಂ ಸುತ್ತ ಹೆಣೆದಿರುವ ಕತೆಯನ್ನು ಹಿಡಿದಿಟ್ಟಿರುವ ಚಿತ್ರ “ಟಕ್ಕರ್’. ಭಜರಂಗಿ ಖ್ಯಾತಿಯ ಸೌರವ್ ಲೋಕಿ ಖಳನಾಯಕನಾಗಿ ಅಬ್ಬರಿಸಿದ್ದಾರೆ.
ಇದನ್ನೂ ಓದಿ:ಕೆಜಿಎಫ್ 2 ವಿಮರ್ಶೆ: ವಿಲನ್ ಗಳ ಬಿರುಗಾಳಿ ಎದುರು ನಿಂತ ರಾಕಿ ಸುಲ್ತಾನನೆಂಬ ಚಂಡಮಾರುತ
ವಿಕ್ರಾಂತ್ ರೋಣ ಖ್ಯಾತಿಯ ವಿಲಿಯಮ್ಸ್ ಡೇವಿಡ್ ಟಕ್ಕರ್ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಪುಟ್ಟಗೌರಿಯಾಗಿ ಎಂಟ್ರಿ ಕೊಟ್ಟು ಸದ್ಯ ಕನ್ನಡತಿಯಾಗಿ ಮನೆಮಾತಾಗಿರುವ ರಂಜನಿ ರಾಘವನ್ ಮನೋಜ್ ಕುಮಾರ್ ಜೋಡಿಯಾಗಿ ನಟಿಸಿದ್ದಾರೆ. ಸಾಧು ಕೋಕಿಲಾ, ಅಶ್ವಿನ್ ಹಾಸನ್, ಆದಿ, ಕಾಮಿಡಿ ಕಿಲಾಡಿ ನಯನಾ, ಕುರಿ ಸುನಿಲ್, ಜೈಜಗದೀಶ್, ಈಟಿವಿ ಶ್ರೀಧರ್, ಹಿರಿಯ ನಟಿ ಸುಮಿತ್ರಾ ಸೇರಿದಂತೆ ಇನ್ನೂ ಅನೇಕ ಕಲಾವಿದರು ಟಕ್ಕರ್ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.