ರಣಬೀರ್-ಆಲಿಯಾ ಮದುವೆ: ಆಪ್ತರು,ಕುಟುಂಬಸ್ಥರು ಮಾತ್ರ ಭಾಗಿ
Team Udayavani, Apr 14, 2022, 8:52 PM IST
ಮುಂಬಯಿ: ಬಾಲಿವುಡ್ ತಾರೆಗಳಾದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರು ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ನಟರ ನಿಕಟ ಮೂಲಗಳು ತಿಳಿಸಿವೆ.
ಮುಂಬಯಿಯ ಚೆಂಬೂರಿನಲ್ಲಿರುವ ರಣಬೀರ್ ಕಪೂರ್ ಅವರ ಮನೆಯಾದ ವಾಸ್ತು ಮತ್ತು ಆರ್ಕೆ ಸ್ಟುಡಿಯೋದಲ್ಲಿ ಮದುವೆ ಕಾರ್ಯಕ್ರಮಗಳು ನಡೆದಿವೆ.
ಕುಟುಂಬದಿಂದ ಯಾವುದೇ ಅಧಿಕೃತ ಮಾಹಿತಿಗಳಿಲ್ಲದಿದ್ದರೂ, ಕುಟುಂಬಕ್ಕೆ ಹತ್ತಿರವಿರುವವರು ಸಮಾರಂಭದ ವಿಧಿವಿಧಾನಗಳು ಸಂಜೆ 5.15 ರ ಸುಮಾರಿಗೆ ನಡೆದವು ಎಂದು ಹೇಳಿದ್ದಾರೆ.
ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ನೀತು ಕಪೂರ್, ರಿದ್ಧಿಮಾ ಸಾಹ್ನಿ ಮತ್ತು ಇತರ ಕಪೂರ್ ಕುಟುಂಬಸ್ಥರು, ಆಲಿಯಾ ಕಡೆಯಿಂದ ಪೋಷಕರಾದ ಮಹೇಶ್ ಭಟ್ ಮತ್ತು ಸೋನಿ ರಜ್ದಾನ್, ಸಹೋದರಿಯರಾದ ಪೂಜಾ ಶಾಹೀನ್ ಭಟ್ ಸೇರಿದ್ದಾರೆ. ನವ್ಯಾ ನವೇಲಿ ,ಶ್ವೇತಾ ಬಚ್ಚನ್ ಮತ್ತು ನಿಖಿಲ್ ನಂದಾ ಹಾಜರಿದ್ದರು.
ರಣಬೀರ್ ಅವರ ಸೋದರ ಮಾವ ಭರತ್ ಸಹಾನಿ ಮದುವೆ ಸಮಾರಂಭ ಮುಸಿಸಿ ಅಪಾರ್ಟ್ಮೆಂಟ್ ನಿಂದ ಹೊರಬಂದ ಮೊದಲ ವ್ಯಕ್ತಿಯಾಗಿದ್ದರು. ಸಮಾರಂಭ ಮುಗಿದ ತಕ್ಷಣ ಸೆಲೆಬ್ರಿಟಿ ಅತಿಥಿಗಳ ಕಾರುಗಳಿಗೆ ರಸ್ತೆಯನ್ನು ತೆರವುಗೊಳಿಸಲು ಬೌನ್ಸರ್ಗಳು ಕಾರ್ಯಪ್ರವೃತ್ತರಾಗಿದ್ದಾರೆ. ಸಂಜೆ 7 ಗಂಟೆಯ ನಂತರ ದಂಪತಿಗಳು ಫೋಟೋಗಳಿಗೆ ಪೋಸ್ ನೀಡುತ್ತಿದ್ದಾರೆ.
39 ರ ಹರೆಯದ ರಣಬೀರ್ 29 ರ ಹರೆಯದ ಆಲಿಯಾ ಬಾಲಿವುಡ್ ನಲ್ಲಿ ಜೋಡಿ ಹಕ್ಕಿಗಳಾಗಿ ಸುದ್ದಿಯಾಗಿದ್ದರು, ಈಗ ಅಧಿಕೃತವಾಗಿ ದಾಂಪತ್ಯ ಜೀವನ ಆರಂಭಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CELEBRITIES: ಶಾರುಖ್ ಟು ಸಲ್ಮಾನ್; ಧೂಮಪಾನದ ಚಟಕ್ಕೆ ಬಿದ್ದು ಹೊರಬಂದ ಸೆಲೆಬ್ರಿಟಿಗಳು
Bollywood: ವರುಣ್ ಧವನ್ ʼಬೇಬಿ ಜಾನ್ʼ ಟೀಸರ್ ನೋಡಿ ʼಜವಾನ್ʼ ಕಾಪಿ ಎಂದ ನೆಟ್ಟಿಗರು
Ranveer-Deepika ಮಗಳ ಹೆಸರು ‘ದುವಾ ಪಡುಕೋಣೆ ಸಿಂಗ್’
Aishwarya Rai Bachchan ಬರ್ತ್ಡೇಗೆ ಶುಭಕೋರದ ಪತಿ, ಮಾವ: ನೆಟ್ಟಿಗರು ಕೆಂಡ!
Singham Again vs Bhool Bhulaiyaa 3: ಮೊದಲ ದಿನ ಬಾಕ್ಸ್ ಆಫೀಸ್ನಲ್ಲಿ ಗೆದ್ದವರು ಯಾರು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.