ಅಂಜನಾದ್ರಿ: ಹನುಮಜಯಂತಿ, ಮಾಲೆ ವಿಸರ್ಜನೆಗೆ ಸಕಲ ಸಿದ್ಧತೆ
ಮಾಲಾಧಾರಿಗಳು ಸೇರಿ 40 ಸಾವಿರ ಹನುಮ ಭಕ್ತರ ಆಗಮನ ನಿರೀಕ್ಷೆ
Team Udayavani, Apr 15, 2022, 4:42 PM IST
ಗಂಗಾವತಿ: ತಾಲೂಕಿನ ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಹನುಮಮಾಲಾಧಾರಿಗಳ ಮಾಲಾ ವಿಸರ್ಜನಾ ಕಾರ್ಯ ಏ.16 ರಂದು ಶನಿವಾರ ಜರುಗಲಿದೆ. ಮಾಲಾ ವಿಸರ್ಜನೆ ಮತ್ತು ಹನುಮ ಜಯಂತೋತ್ಸವಕ್ಕೆ ತಾಲೂಕು ಆಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ.
ರಾಜ್ಯದ ವಿವಿಧ ಸ್ಥಳಗಳಿಂದ ಹನುಮಮಾಲಾಧಾರಿಗಳು ಸೇರಿ 40 ಸಾವಿರ ಹನುಮ ಭಕ್ತರು ಅಂಜನಾದ್ರಿಗೆ ಆಗಮಿಸುವ ನಿರೀಕ್ಷೆ ಇದ್ದು, ವಾಹನಗಳ ಪಾರ್ಕಿಂಗ್ ಹಾಗೂ ಆಗಮಿಸುವವರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಹನುಮಮಾಲಾಧಾರಿಗಳು ಹನುಮನಹಳ್ಳಿ ಋಷಿಮುಖ ಪರ್ವತದ ಹತ್ತಿರ ತುಂಗಭದ್ರಾ ನದಿ ಮತ್ತು ವಿಜಯನಗರ ಕಾಲುವೆಯಲ್ಲಿ ಸ್ನಾನ ಮಾಡಲು ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಂದ ಅಂಜನಾದ್ರಿಗೆ ಬರಲು ಸ್ವಾಗತ ಕಮಾನು ನಿರ್ಮಿಸಲಾಗಿದೆ.
ಅಂಜನಾದ್ರಿಯಲ್ಲಿ ಏಕ ಮುಖ (ಒನ್ ವೇ) ಸಂಚಾರದ ವ್ಯವಸ್ಥೆ ಮಾಡಲಾಗಿದ್ದು, ಬಲ ಭಾಗದಿಂದ ಹತ್ತಿ ಎಡಭಾಗದಿಂದ ಇಳಿದು ಸಂಸ್ಕೃತ ಪಾಠ ಶಾಲೆಯ ಆವರಣದಲ್ಲಿ ಅನ್ನ ಪ್ರಸಾದ ಸ್ವೀಕಾರ ಮಾಡುವ ವ್ಯವಸ್ಥೆ ಮಾಡಲಾಗಿದೆ.
ಈಗಾಗಲೇ ಆನೆಗೊಂದಿ ಸರಕಾರಿ ಪ್ರೌಢಶಾಲೆ, ಉತ್ಸವ ಜಾಗ, ಚಿಕ್ಕರಾಂಪೂರದ ಕಟಾವಾಗಿರುವ ಭತ್ತದ ಗದ್ದೆಗಳು ಮತ್ತು ಹನುಮನಹಳ್ಳಿಯ ಸುತ್ತಲೂ ವಾಹನ ನಿಲುಗಡೆಗಾಗಿ ಪೊಲೀಸ್ ಇಲಾಖೆ ಸ್ಥಳ ನಿಗದಿ ಮಾಡಿದೆ. ಬೆಟ್ಟ ಹತ್ತುವ ಭಕ್ತರಿಗೆ ಶುದ್ಧ ಕುಡಿಯುವ ನೀರಿನ್ನು ಒದಗಿಸಲಾಗುತ್ತದೆ. ತಾತ್ಕಲಿಕ ಆಸ್ಪತ್ರೆಯನ್ನು ಬೆಟ್ಟದ ಎರಡು ಕಡೆ ನಿಗದಿ ಮಾಡಿ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ:ಐತಿಹಾಸಿಕ ಸ್ಮಾರಕ ರಕ್ಷಣೆಯಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ ಆರೋಪ
ಏ.15 ಮತ್ತು 16 ರಂದು ದಿನದ 24 ಗಂಟೆ ವಿದ್ಯುತ್ ಸರಬರಾಜು ಮಾಡಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಕಂದಾಯ, ಪೊಲೀಸ್, ಅರಣ್ಯ, ಜೆಸ್ಕಾಂ, ಆರೋಗ್ಯ ಇಲಾಖೆ ಅಧಿಕಾರಿಗಳು ನಿರಂತರವಾಗಿ ಅಂಜನಾದ್ರಿಯಲ್ಲಿದ್ದು ಆಗಮಿಸುವ ಭಕ್ತರಿಗೆ ಸೇವೆ ನೀಡಲಿದ್ದಾರೆ. ಏ.16 ರಂದು ಒಂದು ದಿನದ ಮಟ್ಟಿಗೆ ಗಂಗಾವತಿ-ಮುನಿರಾಬಾದ(ಹುಲಿಗಿ) ನಿರಂತರ ಬಸ್ ಮಾರ್ಗವನ್ನು ವಾಯ ಜಂಗ್ಲಿ(ರಂಗಾಪೂರ) ಸಾಣಾಪೂರ ಮೂಲಕ ಸಂಚರಿಸುವ ವ್ಯವಸ್ಥೆ ಮಾಡಲಾಗಿದೆ.
ಪೊಲೀಸ್ ಬಂದೋಬಸ್ತ್ ಗಾಗಿ ಇಬ್ಬರು ಡಿಎಸ್ಪಿ, 05 ಜನ ಸಿಪಿಐ, 9 ಜನ ಪಿಎಸೈ, 200ಕ್ಕೂ ಹೆಚ್ಚು ಹೋಂಗಾರ್ಡ್ ಪೊಲೀಸರು ಸೇರಿ ಕೆಎಸ್‌ಆರ್‌ಪಿ ಡಿಎಆರ್ ಪೊಲೀಸ್ ತುಕಡಿಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Kushtagi: ಬಸ್ ಸೇವೆ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ
HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ
BSY ಸಿಎಂ ಸ್ಥಾನ ಕಳೆದುಕೊಳ್ಳಲು ರೇವಣ್ಣ ಕಾರಣ: ಜಿಟಿಡಿ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.