ಇಎನ್‌ಟಿ ತಜ್ಞ ಡಾ| ಶಶಾಂಕ್ ಕೋಟ್ಯಾನ್ ಸೇವೆಗೆ ಲಭ್ಯ
Team Udayavani, Apr 16, 2022, 11:11 AM IST
ಉಡುಪಿ: ಆರೋಗ್ಯ ಸೇವೆಯಲ್ಲಿ ವಿಶೇಷ ಪರಿಣಿತ ತಜ್ಞ ವೈದ್ಯರನ್ನು ಹೊಂದಿದ ಉಡುಪಿಯ ಹೈಟೆಕ್ ಮೆಡಿಕೇರ್ ಆಸ್ಪತ್ರೆಯು ವಿವಿಧ ಸ್ಪೆಶಾಲಿಟಿ ಚಿಕಿತ್ಸಾ ವಿಭಾಗಳನ್ನು ಹೊಂದಿದೆ. ಇದೀಗ ಪ್ರಸಿದ್ಧ ಕಿವಿ, ಮೂಗು, ಗಂಟಲು (ಇಎನ್‌ಟಿ) ತಜ್ಞ ಡಾ| ಶಶಾಂಕ್ ಕೋಟ್ಯಾನ್ ಅವರು ಹೊರರೋಗಿ ವಿಭಾಗ ಹಾಗೂ ತುರ್ತು ಚಿಕಿತ್ಸಾ ವಿಭಾಗದ ಸೇವೆಯಲ್ಲಿ ಲಭ್ಯರಿರಲಿದ್ದಾರೆ.
ತಲೆ ಮತ್ತು ಗಂಟಲು ಬಗ್ಗೆ ವಿಶೇಷ ಪರಿಣತಿ ಹೊಂದಿರುವ ಡಾ| ಶಶಾಂಕ್ ಅವರು ಕಿವಿಯ ಅತೀಸೂಕ್ಷ್ಮ ಸರ್ಜರಿ, ಮೂಗಿನ ವಿರೂಪತೆಯ ತಿದ್ದುಪಡಿ, ಅಲರ್ಜಿಗಳಿಗೆ ಚಿಕಿತ್ಸೆ, ಎಂಡೋಸ್ಕೋಪಿ ಸೈನಸ್ ಸರ್ಜರಿ, ಗೊರಕೆ ಮತ್ತು ನಿದ್ರೆಯಲ್ಲಿ ಉಸಿರುಗಟ್ಟುವಿಕೆಯ ಸಮಸ್ಯೆ, ತಲೆತಿರುಗುವಿಕೆ, ಧ್ವನಿ ಕಟ್ಟುವಿಕೆ (ಬಿಕ್ಕಳಿಕೆ) ಇತ್ಯಾದಿ ಇಎನ್‌ಟಿ ಸಂಬಂಧಿತ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ವಿಶೇಷ ಚಿಕಿತ್ಸೆ ನೀಡಲಿದ್ದಾರೆ. ಅಗತ್ಯವಿರುವವರು ಮುಂಚಿತವಾಗಿ ನೋಂದಾಯಿಸಿಕೊಂಡು ಅವರಿಂದ ಸೇವೆಯನ್ನು ಪಡೆಯಬಹುದು.
ಆಸ್ಪತ್ರೆಯು ತಜ್ಞ ವೈದ್ಯರ ತಂಡವನ್ನು ಒಳಗೊಂಡ ಸ್ತ್ರೀರೋಗ, ಜನರಲ್ ಮೆಡಿಸಿನ್, ಜನರಲ್ ಸರ್ಜರಿ, ಮಕ್ಕಳ ವಿಭಾಗ, ಎಲುಬು-ಮೂಳೆ ವಿಭಾಗ ಮುಂತಾದ ಹೊರರೋಗಿ ವಿಭಾಗ ಹಾಗೂ ಸುಸಜ್ಜಿತ ಸೌಲಭ್ಯಗಳ ಒಳರೋಗಿ ವಿಭಾಗ, ನವಜಾತ ಶಿಶುಗಳ ತೀವ್ರ ನಿಗಾ ಘಟಕ, ಡೊಪ್ಲರ್ ಸ್ಕ್ಯಾನ್, ಸುಸಜ್ಜಿತ ಆಪರೇಶನ್ ಥಿಯೇಟರ್, ನವೀನ ತಾಂತ್ರಿಕತೆಯ ಲ್ಯಾಬೋರೇಟರಿ, ನರ್ಸಿಂಗ್ ಕೇರ್, ಎಕ್ಸ್‌ರೇ ವಿಭಾಗ, ಅಪಘಾತ-ತುರ್ತು ಚಿಕಿತ್ಸಾ ಘಟಕ, ಐವಿಎಫ್ ಸೆಂಟರ್ ಅನ್ನು ಹೊಂದಿದೆ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ಟಿ.ಎಸ್.ರಾವ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.